ಕಾರವಾರ: ಪುಟ್ಟ ಊರು. ಸ್ವಚ್ಛಂದವಾದ ಪರಿಸರ. ಇಡೀ ರಾಜ್ಯಕ್ಕೇ ಈ ಊರು ಫೇಮಸ್, ಜನರ ಕಾಳಜಿ, ನಗರಸಭೆಯ ಮುತುವರ್ಜಿ ಎಲ್ಲವೂ ಊರಿಗೆ ಹೆಸರು ತಂದುಕೊಟ್ಟಿವೆ. ಉತ್ತರ ಕನ್ನಡ ಜಿಲ್ಲೆಯ (Uttara Kannada) ಗಂಗಾವಳಿ ತೀರದ (Gangavali River) ಈ ಪ್ರದೇಶಕ್ಕೆ ಸ್ವಚ್ಛತೆಗಾಗಿ ರಾಜ್ಯಮಟ್ಟದಲ್ಲಿ ಸತತ ನಾಲ್ಕು ಬಾರಿ ಗಾಂಧಿ ಗ್ರಾಮ ಪ್ರಶಸ್ತಿ, ಐದು ಬಾರಿ ಸ್ವಚ್ಛ ಗ್ರಾಮ ಪುರಸ್ಕಾರ ಗೌರವ ಸಂದಿದೆ. ಹಾಗಿದ್ರೆ ಸ್ವಚ್ಛ ಗ್ರಾಮ ಪಂಚಾಯತ್ ಪ್ರಶಸ್ತಿಯ (Swatch Grama Panchayat) ಆ ಸೀಕ್ರೇಟ್ ಏನ್ ಅಂತೀರಾ? ಹೇಳ್ತೀವಿ ನೋಡಿ..
ಉತ್ತರ ಕನ್ನಡದ ಗಂಗಾವಳಿ ತೀರದ ನಾಡುಮಾಸ್ಕೇರಿ ಮೂರೂವರೆ ಸಾವಿರ ಜನರು ಬದುಕು ಕಟ್ಕೊಂಡಿರೋ ಪುಟ್ಟ ಗ್ರಾಮ. ಈ ಊರು ಕ್ಲೀನ್ ಅಂದ್ರೆ ಕ್ಲೀನ್! ತ್ಯಾಜ್ಯ ವಿಲೇವಾರಿಗಂತೂ ಎತ್ತಿದ ಕೈ. ಗ್ರಾಮ ಪಂಚಾಯತ್ ಸ್ವಚ್ಛತೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟರೆ, ಜನ ಹತ್ತು ಹೆಜ್ಜೆ ಮುಂದಿಡ್ತಾರೆ. ಹಾಗಾಗಿಯೇ ನೋಡಿ ಸ್ವಚ್ಛ ಗ್ರಾಮ ಪುರಸ್ಕಾರ, ಗಾಂಧಿ ಗ್ರಾಮ ಪ್ರಶಸ್ತಿಗಳು ಮೇಲಿಂದ ಮೇಲೆ ಅರಸಿ ಬಂದಿವೆ.
ಇದನ್ನೂ ಓದಿ: Positive Story: ಬ್ರಿಟೀಷರ ವಿರುದ್ಧ ಹೋರಾಡಿ ದೇವರಾದ ಹಿಂದೂ-ಮುಸ್ಲಿಂ ಗೆಳೆಯರು, ಅಕ್ಕಪಕ್ಕದಲ್ಲೇ ಇದೆ ದೇವಸ್ಥಾನ
ಒಣಕಸ ಹಸಿಕಸ ಯಾವ್ದನ್ನೂ ಬಿಡಲ್ಲ!
ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ನಡೆಸಲು ಪೌರ ಕಾರ್ಮಿಕರಿದ್ದಾರೆ. ಆದರೆ ಇವರೆಲ್ಲ ಮನೆ ಮನೆಗೆ ತೆರಳಿ ಒಣ ಕಸಗಳನ್ನಷ್ಟೇ ಸಂಗ್ರಹಿಸ್ತಾರೆ. ತಪ್ಪಿಯೂ ಯಾರ ಮನೆಯಿಂದಲೂ ಹಸಿ ಕಸ ಸಂಗ್ರಹಿಸೋದಿಲ್ಲ. ಹಾಗಂತ ಹಸಿಕಸವನ್ನೂ ಸುಮ್ನೆ ಬಿಡಲ್ಲ, ಪಂಚಾಯತ್ ವತಿಯಿಂದ ಪ್ರತಿ ಮನೆಗೂ ಕಾಂಪೋಸ್ಟ್ ಬಾಕ್ಸ್ ನೀಡಲಾಗಿದ್ದು, ಅದ್ರಲ್ಲೇ ಹಸಿಕಸ ಸಂಗ್ರಹಿಸಿ ಗೊಬ್ಬರ ತಯಾರಿಸ್ತಾರೆ.
ಇದನ್ನೂ ಓದಿ: Rani Mahal: ಇದು ಕರುನಾಡಿನ ಮೊಟ್ಟ ಮೊದಲ ರಾಜಮನೆತನದ ರಾಣಿ ನಿವಾಸ
ಸೈನ್ಸ್ ಪಾರ್ಕ್ ಸಹಾ ಇದೆ!
ಇಲ್ಲಿ ಸೈನ್ಸ್ ಪಾರ್ಕ್ ಕೂಡಾ ಇದ್ದು, ಮುಂದಿನ ದಿನಗಳಲ್ಲಿ ಇಕೋ ಪಾರ್ಕ್ ನಿರ್ಮಾಣದ ಗುರಿಯನ್ನ ಪಂಚಾಯತ್ ಹೊಂದಿದೆ. ಸುತ್ತ ಎಲ್ಲಿಯೂ ಕೂಡ ಕಸದ ಕುರುಹು ಸಹ ನಿಮಗೆ ಸಿಗಲ್ಲ! ಈ ಗ್ರಾಮ ಪಂಚಾಯತ್ ದೇಶಕ್ಕೆ ಮಾದರಿಯಾಗಲಿ ಅನ್ನೋದೆ ನಮ್ಮ ಆಶಯ ಕೂಡಾ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ