ಉತ್ತರ ಕನ್ನಡ: ಪುಟ್ಟದಾದ ಬಸ್ ಸ್ಟ್ಯಾಂಡು, ಬಸ್ಗಾಗಿ ಕಾಯ್ತಿರೋ ಪ್ರಯಾಣಿಕರು. ಹೀಗೆ ಈ ಬಸ್ ಸ್ಟ್ಯಾಂಡ್ ಅದೆಷ್ಟೋ ತಲೆ ತಲಾಂತರದ ಪ್ರಯಾಣಿಕರ ತಂಗುದಾಣ ಕೂಡ. ಈ ಬಸ್ ಸ್ಟ್ಯಾಂಡ್ಗೊಂದು ಕೋಟೆ, ಅರಮನೆಯಂತೆ ಇತಿಹಾಸವೂ ಇದೆ. ಆ ಎಲ್ಲ ಇತಿಹಾಸವನ್ನ ಈ ಬಸ್ ನಿಲ್ದಾಣದಲ್ಲಿ ಅಚ್ಚು ಹಾಕಲಾಗಿರುವ MSRTC ಹೇಳ್ತಿರೋದು ವಿಶೇಷ. ಹಾಗಿದ್ರೆ ಅಂತಹ ವಿಶೇಷತೆ ಏನು ಅಂತೀರಾ? ಹೇಳ್ತೀವಿ ನೋಡಿ.
KSRTC ಅಲ್ಲ, ಇದು MSRTC
ಹೌದು, ಕೆಸ್ಆರ್ಟಿಸಿ 1973ರ ನಂತರದ್ದು ಇದು ಅದಕ್ಕೂ ಮೊದಲೇ ಇದ್ದ ಬಸ್ ಸ್ಟ್ಯಾಂಡು. 1948 ರಲ್ಲಿ ಕರುನಾಡಿಗೆ ಇನ್ನೂ ಕರ್ನಾಟಕ ಅನ್ನೋ ಹೆಸರು ಬಂದಿರಲಿಲ್ಲ. ಮೈಸೂರು ರಾಜ್ಯ ಅನ್ನೋ ಹೆಸರೇ ಇದ್ದಿದ್ರಿಂದ ಈ ಬಸ್ ನಿಲ್ದಾಣಕ್ಕೆ MSRTC ಎಂದೇ ಬೋರ್ಡ್ ಇದೆ.
ಉತ್ತರ ಕನ್ನಡದ ಶಿರಸಿಯ ಅಮ್ಮಿನಳ್ಳಿಯಲ್ಲಿರುವ ಈ ಬಸ್ ನಿಲ್ದಾಣದ ಸುಣ್ಣ, ಬಣ್ಣ ಚೇಂಜ್ ಆದರೂ ಹೆಸರು ಮಾತ್ರ ಎಂಎಸ್ಆರ್ಟಿಸಿಯಲ್ಲೇ ಉಳಿಸಿಕೊಂಡು ಬರುವಲ್ಲಿ ಸ್ಥಳೀಯ ಜಾನ್ಮನೆ ಗ್ರಾಮ ಪಂಚಾಯತ್ ಸಫಲವಾಗಿದೆ.
ಇದನ್ನೂ ಓದಿ:Uttara Kannada: ಆಟದ ಗೊಂಬೆಯೇ ಟೀಚರ್! ಮಕ್ಕಳಿಗೆ ಪಾಠ ಹೇಳಿಕೊಡುತ್ತೆ ಈ ರೋಬೋಟ್!
ಹೆದ್ದಾರಿ ಪಕ್ಕದಲ್ಲೇ ಬಸ್ ಸ್ಟ್ಯಾಂಡ್
ಈ ಅಮ್ಮಿನಳ್ಳಿ ಒಂದು ತರಹ ಸಿದ್ದಾಪುರ ಹಾಗೂ ಕುಮಟಾಕ್ಕೆ ನಿಲೇಕಣಿ ಬಿಟ್ಟರೆ ಹೋಗಲು ಇರುವ ಎರಡನೇ ದಾರಿ. ನ್ಯಾಷನಲ್ ಹೈವೇ ಅಲ್ಲಿರುವ ಈ ಬಸ್ ಸ್ಟ್ಯಾಂಡಿಗೆ ಎಲ್ಲಾ ಲಾಂಗ್ ರೂಟ್ ಬಸ್ ಹಾಗೂ ಲೋಕಲ್ ಬಸ್ ಬರುತ್ತವೆ.
ಇದನ್ನೂ ಓದಿ: HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!
ಹೀಗೆ ಅದ್ಯಾವುದೋ ಕೋಟೆ ಕಟ್ಟಡಗಳು ಇತಿಹಾಸ ಸಾರುವ ಸಮಯದಲ್ಲಿ ಬಸ್ ಸ್ಟ್ಯಾಂಡ್ವೊಂದು ತನ್ನ ಇತಿಹಾಸದಿಂದ ಸುದ್ದಿಯಾಗ್ತಿರೋದು ವಿಶೇಷ. ಅಷ್ಟೇ ಅಲ್ದೇ, ಮೈಸೂರು ರಾಜ್ಯದ ಕುರುಹೊಂದನ್ನು ಮಲೆನಾಡಿನ ಈ ಪುಟ್ಟ ಹಳ್ಳಿ ಹೊಂದಿದೆ ಅನ್ನೋದು ಅಚ್ಚರಿಯೇ ಸರಿ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ