ಉತ್ತರ ಕನ್ನಡ: ನೆಲದಿಂದ ಮೂವತ್ತು ಅಡಿ ಮೇಲೆ ಇರುವ ಬಲಿಷ್ಠ ತೂಗು ಸೇತುವೆ. ಯಾವುದೇ (Sharavati Hanging Bridge) ಫಾರಿನ್ ಲೊಕೇಶನ್ಗೂ ಕಮ್ಮಿ ಇಲ್ಲದ ಸೊಬಗು. ಸೇತುವೆ ಮೇಲೆ ನಿಂತು ಶರಾವತಿಯ ದ್ವೀಪಗಳನ್ನು (Sharavati Islands) ನೋಡುವುದೇ ಚೆಂದ. ಅಷ್ಟೇ ಅಲ್ದೇ, ಸುತ್ತವಿರುವ ಹಳ್ಳಿಗಳ ಅಂತರ ಕಡಿಮೆ ಮಾಡಿದ ಖ್ಯಾತಿನೂ ಈ ತೂಗು ಸೇತುವೆಯದ್ದು.
ಶರಾವತಿ ಮೇಲೆ ತೂಗುಯ್ಯಾಲೆ!
ಯೆಸ್, ತೂಗು ಸೇತುವೆ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳೋದೇ ಒಂದು ಚೆಂದ. ಅದ್ರಲ್ಲೂ ಸುಂಯ್ಯನೆ ಬೀಸುವ ಗಾಳೀಲಿ, ನೀರಿನ ಮೇಲೆ ನಿಂತು ಸುತ್ತಲ ಭೂಮಿ ನೋಡುವುದಂತೂ ಆನಂದವೋ ಆನಂದ!
ಅಂದಹಾಗೆ ಉತ್ತರ ಕನ್ನಡದ ಶರಾವತಿ ನದಿಯ ಮೇಲೆ ಕುದ್ರಗಿಯಿಂದ ಮಾಗೋಡಿಗೆ ಸಂಪರ್ಕ ಕಲ್ಪಿಸೋ ಈ ಸೇತುವೆ ಇದ್ಯಲ್ಲ ಇದ್ರ ಮೇಲಂತೂ ಪ್ರತಿನಿತ್ಯ ನೂರಾರು ಜನ ಹಿಂಗೆ ನಿಂತು ಮಜಾ ಅನುಭವಿಸ್ತಾರೆ.
ಸಂಪರ್ಕ ಸೇತುವೆ ಕೂಡ!
ಪ್ರವಾಸಿಗರ ಕಣ್ಣಿಗೆ ಈ ಸೇತುವೆ ಭಾರೀ ಕುತೂಹಲದ ಸ್ಪಾಟ್ ಆದ್ರೆ, ನೆರೆಯ ಹಳ್ಳಿಗಳಿಗೆ ತೆರಳೋರಿಗೆ ಇದೊಂಥರಾ ಸಂಪರ್ಕ ಸೇತುವೆಯಷ್ಟೇ. ಹೌದು, ಒಂದೂವರೆ ಕಿಲೋಮೀಟರ್ ಉದ್ದದ ಈ ಸೇತುವೆಯಿಂದಾಗಿಯೇ 30ಕಿಲೋ ಮೀಟರ್ ನಷ್ಟು ಸುತ್ತು ಬರುವ ಹಳ್ಳಿಯನ್ನ ನಿಮಿಷದಲ್ಲಿ ತಲುಪಬಹುದಾಗಿದೆ.
ಇದನ್ನೂ ಓದಿ: Uttara Kannada Forest Fruits: ಹುಳಿ, ಸಿಹಿ ಮಿಶ್ರಿತ ಈ ಕಾಡು ಹಣ್ಣು ತಿನ್ನೋದೆ ಒಂಥರಾ ಖುಷಿ!
ಅಭಿವೃದ್ಧಿಗೆ ಆಗ್ರಹ
ಕುದ್ರಗಿ ಗೇರುಸೊಪ್ಪದಿಂದ ಐದು ಕಿಲೋಮೀಟರ್ ದೂರದಲ್ಲಿ, ಶರಾವತಿ ನದಿಯ ಹಿನ್ನೀರಿನ ಪ್ರದೇಶದಲ್ಲೇ ಈ ತೂಗುಸೇತುವೆ ಇದೆ. ಈ ತೂಗುಸೇತುವೆಯಿಂದಾಗಿಯೇ ಪ್ರವಾಸೋದ್ಯಮ ಹೆಚ್ಚು ಲಾಭ ಕಾಣುತ್ತಿದೆ. ಹಲವು ಮೀನುಗಾರರು ತಮ್ಮದೇ ಬೋಟಿಂಗ್ ವ್ಯವಸ್ಥೆ ಮಾಡಿಕೊಂಡು ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದಾರೆ. ದಟ್ಟ ಅಡವಿಯ ನಡುವಿನ ಈ ಪುಟ್ಟ ಸ್ವರ್ಗಕ್ಕೆ ಇನ್ನೂ ಹೆಚ್ಚಿನ ಮಟ್ಟಿಗೆ ಅಭಿವೃದ್ಧಿಯಾಗಬೇಕಿದೆ ಎಂದು ಹೇಳುತ್ತಾರೆ ಸ್ಥಳೀಯರು.
ಹೀಗೆ ಬನ್ನಿ
ಬೆಂಗಳೂರಿನಿಂದ ಬರುವವರಿಗೆ ಕುದ್ರಗಿ ಸ್ಟಾಪ್ ಅಲ್ಲಿ ಇಳಿಸುತ್ತಾರೆ. ಇನ್ನು ನೀವು ಸಾಗರ ಮಾರ್ಗವಾಗಿ ಮಾವಿನಗುಂಡಿ ಘಾಟ್ ಮೂಲಕ ಇಲ್ಲಿಗೆ ಬರಬಹುದಾಗಿದೆ. ಇನ್ನೂ ಮಂಗಳೂರಿನವರು ಹೊನ್ನಾವರಕ್ಕೆ ಬಂದು ಗೇರುಸೊಪ್ಪಾ ಬಸ್ಸು ಹತ್ತಿದರೆ ಕೇವಲ 25 ಕಿಲೋಮೀಟರ್ ನ ಪ್ರಯಾಣವಷ್ಟೇ.
ಇದನ್ನೂ ಓದಿ: Sirsi News: ಬತ್ತಿ ಹೋಗಿದ್ದ ದೇವರ ಕಲ್ಯಾಣಿಗೆ ಮರುಜೀವ ನೀಡಿದ ಯುವ ಪಡೆ!
ಹುಬ್ಬಳ್ಳಿ ಭಾಗದಿಂದ ಬರುವವರು ಹೊನ್ನಾವರಕ್ಕೆ ಬಂದು ಅಲ್ಲಿಂದ ಗೇರುಸೊಪ್ಪೆಯ ಬಸ್ ಹಿಡಿದು ಈ ತೂಗುಸೇತುವೆಯ ಬಳಿ ಬರಬಹುದು. ಒಟ್ಟಿನಲ್ಲಿ ಬೇಸಿಗೆಯಲ್ಲಿ ಎಂಜಾಯ್ ಮಾಡಬಹುದಾದ ಈ ತೂಗು ಸೇತುವೆಯಂತೂ ಸಖತ್ ಖುಷಿ ಕೊಡುವ ಸ್ಪಾಟ್ ಅನ್ನೋದನ್ನ ಮರೀಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ