• Home
  • »
  • News
  • »
  • uttara-kannada
  • »
  • Murudeshwar Fair: ಮುರುಡೇಶ್ವರ ಜಾತ್ರೆಯಲ್ಲಿ 'ಶಿವ' ವೈಭವ!

Murudeshwar Fair: ಮುರುಡೇಶ್ವರ ಜಾತ್ರೆಯಲ್ಲಿ 'ಶಿವ' ವೈಭವ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದೇವರ ಜಾತ್ರೆಗೆ ಇಡೀ ಪಟ್ಟಣವೇ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು.

  • Share this:

    ಉತ್ತರ ಕನ್ನಡ: ಬೀದಿ ಬೀದಿಯಲ್ಲಿ ಸಂಭ್ರಮವೋ ಸಂಭ್ರಮ. ನಾಡನ್ನ ಕಾಯೋ ದೇವರ ಜಾತ್ರಾ ಸಂಭ್ರಮ. ರಥ ಎಳೆಯುತ್ತಾ ಹರಹರ ಮಹಾದೇವ ಜಯಘೋಷ ಮೊಳಗಿಸುತ್ತಾ ಪುನೀತರಾದ ಭಕ್ತರು. ಈ ಎಲ್ಲ ಸಂಭ್ರಮದ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡದ (Uttara Kannada Temples) ಪ್ರಸಿದ್ಧ ತೀರ್ಥಕ್ಷೇತ್ರವಾದ (Murudeshwar) ಮುರುಡೇಶ್ವರದಲ್ಲಿ


    ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದೇವರ ಜಾತ್ರೆಗೆ ಇಡೀ ಪಟ್ಟಣವೇ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ದೊಡ್ಡ ರಥವಂತೂ ಬಂಗಾರದಂತೆ ಹೊಳೆಯುತ್ತಿತ್ತು. ವಿವಿಧ ಬಣ್ಣಗಳ ಪತಾಕೆಯಿಂದ ತುಂಬಿಕೊಂಡಿದ್ದ ರಥವೇ ಎಲ್ಲರ ಗಮನ ಸೆಳೆಯುತ್ತಿತ್ತು.




    ರಥ ಎಳೆಯುವುದಕ್ಕೂ ಮುನ್ನ ತೆಂಗಿನಕಾಯಿಯನ್ನು ರಥದ ಮುಂಭಾಗ ಒಡೆಯುತ್ತಾ ಭಕ್ತರು ಹರಹರ ಮಹಾದೇವ್ ಜಯಘೋಷ ಮೊಳಗಿಸಿದರು. ಬಳಿಕ ದೊಡ್ಡ ತೇರನ್ನ ಎಳೆಯುತ್ತಾ ದೇವರ ಸಂತೃಪ್ತಿಗೆ ಪಾತ್ರರಾದರು.


    ಇದನ್ನೂ ಓದಿ: Marikamba Devi: ಮಾರಿ ಜಾತ್ರೆಗೂ ಮುನ್ನ ಹೊರಬೀಡು ಆಚರಣೆಯ ರಹಸ್ಯ!


    ಸಂಕ್ರಮಣದ ನಂತರ ಇಲ್ಲಿ ರಥೋತ್ಸವ ನಡೆಯುವುದು ವಾಡಿಕೆ. ರಥೋತ್ಸವದ ಹಿನ್ನೆಲೆ ಸಹಸ್ರಾರು ಜನ ಭಕ್ತರು ಇಲ್ಲಿಗೆ ಆಗಮಿಸಿ ರಥೋತ್ಸವ ಕಣ್ತುಂಬಿಕೊಂಡರು.


    ಇದನ್ನೂ ಓದಿ: Uttara Kannada: ಬೌದ್ಧ ಭಿಕ್ಕುಗಳಿಂದ 49 ದಿನ ಶ್ರಾದ್ಧ ಆಚರಣೆ!


    ದೇವರು ರಥಬೀದಿಗೆ ಬಂದು ಜನರ ನಡುವೆ ಸೇರುವ ಈ ಭವ್ಯ ಮಹೋತ್ಸವಕ್ಕೆ ಗೋವಾ, ಕಾರವಾರ, ಕುಮಟಾ, ಹೊನ್ನಾವರ, ಭಟ್ಕಳ, ಉಡುಪಿ, ಮಂಗಳೂರಿನ ಭಕ್ತರೆಲ್ಲಾ ಸಾಕ್ಷಿಯಾದರು. ಒಟ್ಟಿನಲ್ಲಿ ಮುರುಡೇಶ್ವರನ ಭಕ್ತರು ಭಕ್ತಿ ಕಡಲಲ್ಲಿ ಮಿಂದೆದ್ದು ಪುನೀತರಾದರು.


    ವರದಿ: ಎ.ಬಿ,ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: