ಉತ್ತರ ಕನ್ನಡ: ಉದರದಲ್ಲಿ ಸಿಕ್ಸ್ ಪ್ಯಾಕು, ಹುರಿಗಟ್ಟಿದ ಮೈಕಟ್ಟು, ಅಜಾನುಬಾಹುಗಳಂತೆ ನೀಡಿದ್ರು ಸಖತ್ ಫೋಸು. ನೆರೆದವರ ಬಾಯಲ್ಲಿ ವಾವ್. ಅನ್ನೋ ಉದ್ಘಾರ ಹೊರಡುವಂತೆ ಮಾಡಿದ್ರು (Bodybuilding Competition) ನೋಡಿ ಜಗಜಟ್ಟಿಗಳು.
ಯೆಸ್, ಈ ಎಲ್ಲ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡದ ಗೋಕರ್ಣದಲ್ಲಿ. ಗೋಕರ್ಣದ ಶಿವ ಜಿಮ್ ಆಯೋಜಿಸಿದ್ದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಪೈಲ್ವಾನ್ಗಳು ತಮ್ಮ ತೋಳ್ಬಲ ಪ್ರದರ್ಶಿಸಿದರು.
ಫಳಫಳನೆ ಹೊಳೆದ ಹುರಿಗಟ್ಟಿದ ದೇಹ
ನೆರೆದವರಂತೂ ಶಿಳ್ಳೆ, ಚಪ್ಪಾಳೆ ಮೂಲಕ ಹುರಿದುಂಬಿಸಿದ್ರೆ, ಹುರಿಗಟ್ಟಿದ ದೇಹಗಳು ಫಳಫಳನೆ ಹೊಳೆದವು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತೀರ್ಪುಗಾರರ ಗಮನಸೆಳೆದರು.
ಇದನ್ನೂ ಓದಿ: Uttara Kannada: 400 ವರ್ಷಗಳ ಬಳಿಕ ಬನವಾಸಿಗೆ ಬಂತು ನೂತನ ಭವ್ಯ ರಥ!
60 ರಿಂದ 100 ಕೆಜಿವರೆಗೆ ಐವತ್ತು ಜನರ ನಡುವೆ ಸ್ಪರ್ಧೆ ನಡೆಯಿತು. ಅದರಲ್ಲಿ ಮೊದಲ ಸ್ಥಾನ ಪಡೆದ ಬೆಳಗಾವಿಯ ವಿವೇಕ್ ಸೂರ್ಯವಂಶಿ "ಮಿಸ್ಟರ್ ಮಹಾಬಲ" ಪ್ರಶಸ್ತಿಗೆ ಪಾತ್ರರಾದರು.
ಇದನ್ನೂ ಓದಿ: Uttara Kannada: ಮಲೆನಾಡ ರೈತರ ಮೊಗದಲ್ಲಿ ನಗು ತಂದ ಬಿಸಿಲನಾಡಿನ ಚೆಲುವೆ!
ಒಟ್ಟಿನಲ್ಲಿ ರಾಜ್ಯದ ಹಲವು ಮಂದಿ ದೇಹದಾರ್ಢ್ಯ ಪಟುಗಳು ಗೋಕರ್ಣದಲ್ಲಿ ತಮ್ಮ ದೈಹಿಕ ಅಂಗ ಸೌಷ್ಠವ ಪ್ರದರ್ಶಿಸಿದರು. ಇವರ ಪೈಪೋಟಿಗೆ ಇಡೀ ಉತ್ತರ ಕನ್ನಡವೇ ಸಾಕ್ಷಿಯಾಯಿತು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ