ಉತ್ತರ ಕನ್ನಡ: ಬಗಲಿನಲ್ಲಿ ಜೋತು ಹಾಕಿರೋ ಕತ್ತಿ, ಕಾಲಿಗೊಂದು ಬಿಗಿ ಹಿಡಿದ ಬಟ್ಟೆ ತುಂಡು, ಕೈಗೆ ಆಧಾರವಾಗಿರೋ ಹಗ್ಗ. ಹೀಗೆ ಚಕಪಕನೆ ಮರ (Tree Climbing Lady) ಏರುತ್ತಿದ್ದಾರೆ ನೋಡಿ ಈ ಲೇಡಿ. ಗಾಳಿಗೆ ಸದಾ ಹೊಯ್ದಾಟ ನಡೆಸೋ ಅಡಿಕೆ, ತೆಂಗು ಅಲ್ಲದೇ ಕಾಡಿನ ಯಾವುದೇ ಮರ ಇದ್ರು ಈ ಮಹಿಳೆ ಹತ್ತಬಲ್ಲರು. ಹೀಗೆ ಮಾಡ್ತಾ ಇಡೀ ಸಂಸಾರವನ್ನ (Women Empowerment) ನಡೆಸ್ತಿದ್ದಾರೆ ಈ ಪವರ್ಫುಲ್ ಲೇಡಿ. ಹಾಗಂತ ಇವ್ರ ವಯಸ್ಸೇನಾದ್ರೂ ಕೇಳಿದ್ರೆ, ನೀವು ಅಚ್ಚರಿಯಾಗ್ತೀರಿ!
ವಯಸ್ಸೆಷ್ಟು ಗೊತ್ತಾ?
ಯೆಸ್, ಇವ್ರ ಹೆಸರು ಸೀತಾ ಸಿದ್ಧಿ ಅಂತಾ. ಉತ್ತರ ಕನ್ನಡದ ಯಲ್ಲಾಪುರದ ಬಳಗಾರದ ಲಿಂಗನಬೈಲಿನಲ್ಲಿರುವ ಹೆಣ್ಮಗಳು. ಇವ್ರು ಮರ ಹತ್ತಿ ಇಳಿಯೋದನ್ನ ನೋಡ್ತಿದ್ರೆ ಯಾರೇ ಇದ್ರೂ ಇವ್ರ ವಯಸ್ಸು ಏನಿದ್ರೂ 30ರ ಒಳಗೆ ಅಂದ್ಕೊಳ್ಳಬಹುದು. ಆದ್ರೆ ಇವರ ವಯಸ್ಸು ಅದಾಗಲೇ ಅರ್ಧಶತಕವಾಗಿದೆ. ಹೀಗೆ 50ರ ಹರೆಯದಲ್ಲೂ ಮರ ಏರ್ತಾ, ಇಳಿತಾ.. ಹಣ್ಣು, ಕಾಯಿ ತಂದು ಅದನ್ನ ಮಾರಾಟ ಮಾಡಿ ಜೀವನ ನಡೆಸ್ತಾ ಬಂದಿದ್ದಾರೆ. ಮರ ಹತ್ತೋದ್ರಲ್ಲಿ ಸೀತಾ ಸಿದ್ಧಿ ಅವರು ಯಾವ ಪುರುಷನಿಗೂ ಕಮ್ಮಿ ಇಲ್ಲ.
ಯಾವ್ದೇ ಮರವಿದ್ರೂ ಏರಬಲ್ಲರು!
ಸೀತಾ ಸಿದ್ಧಿ ಅವರು ದಿನಕ್ಕೆ ನಾಲ್ಕರಿಂದ ಐದು ಮರ ಹತ್ತುತ್ತಾರೆ. ಅಡಿಕೆ, ತೆಂಗು, ಮುರುಗಲು ಸೇರಿದಂತೆ ಕಾಡಿನ ಎಲ್ಲಾ ಮರಗಳನ್ನೂ ಹತ್ತುತ್ತಾರೆ. ಹೀಗಾಗಿ ಊರಿನ ಎಲ್ಲಾ ಕಡೆಯೂ ಇವರು ಫೇಮಸ್.
ಇದನ್ನೂ ಓದಿ: Positive Story: 81 ರ ಹರೆಯದ ಅಜ್ಜಿಯ ಕೈ ಚಳಕ, ಟೂತ್ ಪೇಸ್ಟ್ ಮುಚ್ಚಳದಿಂದ ತಯಾರಾಯ್ತು ಬಾಗಿಲ ತೋರಣ!
ಒಬ್ಬಂಟಿಯಾಗಿ ಕಾಡಿಗೆ ಹೋಗಿ ಕಾಡು ಮರಗಳನ್ನು ಹತ್ತಿ ಜೇನು ಕೊಯ್ಯುವಲ್ಲಿಯೂ ಇವ್ರ ಸಾಧನೆ ಬಲು ಗ್ರೇಟ್. ಇವರಿಗೆ ಆರು ವರ್ಷ ಪ್ರಾಯವಿದ್ದಾಗ ರೂಢಿಸಿಕೊಂಡ ಮರ ಹತ್ತುವ ಹವ್ಯಾಸ ಇಂದು ಕಾಯಕವಾಗಿ ಬದಲಾಗಿದೆ.
ಕುಟುಂಬಕ್ಕೆ ಇವರೇ ಆಧಾರ
ಗಂಡ ಇಲ್ಲದಿದ್ದರೂ ಮರ ಹತ್ತಿ ಜೇನು ಕೊಯ್ದು, ಮುರುಗಲು ಮಾರಿ, ಕೂಲಿ ಮಾಡಿ ಮಕ್ಕಳಿಬ್ಬರನ್ನೂ ಬೆಳೆಸಿದ್ದಾರೆ. ಅದರಿಂದಲೇ ಮನೆ- ತೋಟ ಎಲ್ಲಾ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಗಳ ಮದುವೆಯನ್ನೂ ಮಾಡಿದ್ದಾರೆ.
ಇದನ್ನೂ ಓದಿ: Leaf Helmet: ನೇರಳೆ ಮರದ ಎಲೆಯಿಂದ ಹೆಲ್ಮೆಟ್! ಇದರಿಂದ ತಲೆ ಆಗುತ್ತೆ ಕೂಲ್
ದಿನಕ್ಕೆ 300 ರೂಪಾಯಿ ಕೂಲಿ ಉಳಿದಿದ್ದೆಲ್ಲಾ ಇವರ ಶ್ರಮದ ಗಳಿಕೆ. ಈ ವರ್ಷ 150 ಲೀಟರ್ ಜೇನುತುಪ್ಪ ಮಾರಿದ್ದಾರಂತೆ. ಊರಿನ ಎಲ್ಲಾ ಮನೆಯಲ್ಲೂ ಸೀತೆ ಎಲ್ಲಿದಾಳೋ ಎಂದರೆ ಒಂದೋ ತೋಟದಲ್ಲಿ ಅಡಿಕೆ ಮರ ಹತ್ತಿದಾರೆ. ಇಲ್ಲವೇ ಕಾಡಿಗೆ ಹೋಗಿದ್ದಾರೆ ಅನ್ನೋ ಮಟ್ಟಿಗೆ ಸೀತಾ ಸಿದ್ಧಿ ಅವರು ರಾಮಾಯಣದಲ್ಲಿ ವನವಾಸ ಅನುಭವಿಸಿದ ಸೀತಾಮಾತೆಯನ್ನ ನೆನಪಿಸುತ್ತಾರೆ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ