Positive Story: ಸೈಕಲ್ ಸವಾರಿ ಮಾಡ್ತಾ ಊರಿಡೀ ಓಡಾಡುವ 74ರ ಅಜ್ಜಿ! ಇವರ ಜೀವನೋತ್ಸಾಹ ಎಲ್ರಿಗೂ ಮಾದರಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬಾಲ್ಯದಿಂದಲೂ ಇವರಿಗೆ ಸೈಕಲ್ ಅಂದ್ರೆ ಎಲ್ಲಿಲ್ಲದ ಮೋಹ. ಅದ್ರಲ್ಲೂ 1976ರಲ್ಲಿ ಸೈಕಲ್​ನಲ್ಲೇ ಕಳ್ಳನನ್ನು ಸೆರೆ ಹಿಡಿದಾಗ ಒನಕೆ ಓಬವ್ವನ ರೀತಿ ಇವರನ್ನು 'ಸೈಕಲ್ ಜೋಸ್ನಾ' ಎಂದೇ ಸುದ್ದಿ ಮಾಧ್ಯಮಗಳು ಪ್ರಚಾರ ಮಾಡಿದ್ದವಂತೆ!

  • News18 Kannada
  • 4-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಸೀರೆ ಉಟ್ಟು ಸೈಕಲ್ ತುಳೀತಿರೋ ಮಹಿಳೆ.‌ ವಯಸ್ಸು 70 ದಾಟಿದ್ರೂ ಸ್ವಲ್ಪವೂ ಸೊರಗದ ಸೈಕ್ಲಿಂಗ್ ಸ್ಟೈಲ್. ಬರೇ ಮೋಜು ಮಸ್ತಿಗಲ್ಲ, ಈ ಮಹಿಳೆ ಪಾಲಿಗೆ ಈ ಸೈಕಲ್ (Cycle) ಅನ್ನೋದು ಬದುಕಿನ ಬಂಡಿ ಕೂಡಾ‌. ನಿಜ, ಸೈಕಲ್ ಫ್ರೆಂಡ್ ಆಗಿರೋ ಈ ಲೇಡಿಗೂ, ಈ ಸೈಕ್ಲಿಂಗ್​ಗೂ (Cycling) ಇರೋ ಸಂಬಂಧ ಅಂತಿಂತದ್ದಲ್ಲ.


ಕಳ್ಳನನ್ನೇ ಹಿಡಿದಿದ್ದ ʼಸೈಕಲ್‌ ಜೋಸ್ನಾ!'
ಯೆಸ್, ಹೀಗೆ ಸೀರೆ ಉಟ್ಟು ಸೈಕಲ್ ತುಳಿಯುತ್ತಿರೋ ಇವರು ಜೋಸ್ನಾ ಕಾಗಲ್. ವಯಸ್ಸು 74. ಉತ್ತರ ಕನ್ನಡದ ಗೋಕರ್ಣದ ಬಂಕಿಕೊಡ್ಲದಲ್ಲಿ ವಾಸಿಸುತ್ತಿರುವ ಇವರು ಅಂಗನವಾಡಿಯ ಕಾರ್ಯಕರ್ತೆಯಾಗಿ 30 ವರ್ಷ ಸೇವೆ ಸಲ್ಲಿಸಿದವರು‌.
ಸೈಕಲ್ ಕಲಿತದ್ದೇ ಸಾಧನೆ!
ಜೋಸ್ನಾ ಕಾಗಲ್ ಅವರಿಗೆ ಚಿಕ್ಕವರಿದ್ದಾಗಿಂದಲೂ ಸೈಕಲ್ ಎಂದ್ರೆ ಎಲ್ಲಿಲ್ಲದ ಇಷ್ಟವಿತ್ತು. ಗೋಕರ್ಣದ ಬೀದಿಗಳಲ್ಲಿ ಸೈಕಲ್ ಸವಾರರನ್ನು ಕಂಡು ಅವರಿಗೂ ಸೈಕಲ್ ಕಲಿಯುವ ಆಸೆ ಹುಟ್ಟಿತ್ತು. ಈ ಆಸಕ್ತಿಯಿಂದ 14ನೇ ವಯಸ್ಸಿನಲ್ಲೇ ತಮ್ಮ ನೆರೆಹೊರೆಯ ನಿವಾಸಿಗಳ ಸೈಕಲ್ ಬಳಸಿ ಸವಾರಿ ಮಾಡೋದನ್ನು ಕಲಿತೇಬಿಟ್ಟರು ಜೋಸ್ನಾ.


ಸ್ವಂತ ಹಣದಲ್ಲಿ ಸೈಕಲ್ ಖರೀದಿ
ಸರಿ, ಸೈಕಲ್ ಕಲಿತಾಯ್ತು. ಆದ್ರೆ ಸ್ವಂತಕ್ಕೊಂದು ಸೈಕಲ್ ಇಲ್ಲ. ಹೀಗಾಗಿ ಊರ ಪರಿಚಯದವರು ಬಳಸುತ್ತಿದ್ದ, ಆಗ ಹೆಚ್ಚು ಪ್ರಚಲಿತದಲ್ಲಿದ್ದ  ಗಂಡು ಮಕ್ಕಳ ಸೈಕಲ್​ನ್ನೇ ಸವಾರಿ ಮಾಡ್ತಿದ್ರಂತೆ ಜೋಸ್ನಾ. ಮುಂದೆ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಾ, ಮೊದಲ ಲೇಡೀಸ್ ಸೈಕಲ್​ನ್ನು 1968ರಲ್ಲಿ ಸ್ವಂತ ಹಣದಲ್ಲಿ ಖರೀದಿಸಿದರು. ಅಂದಹಾಗೆ ಈಗ ಇವರು ಓಡಿಸ್ತಿರೋ ಸೈಕಲ್ ಖರೀದಿ ಮಾಡಿದ್ದು 1988ರಲ್ಲಿ ಅಂದರೆ ನೀವು ನಂಬಲೇಬೇಕು!


ಒನಕೆ ಓಬವ್ವನ ರೀತಿ ಇವರು ಸೈಕಲ್ ಜೋಸ್ನಾ!
ಬಾಲ್ಯದಿಂದಲೂ ಇವರಿಗೆ ಸೈಕಲ್ ಅಂದ್ರೆ ಎಲ್ಲಿಲ್ಲದ ಮೋಹ. ಅದ್ರಲ್ಲೂ 1976ರಲ್ಲಿ ಸೈಕಲ್​ನಲ್ಲೇ ಕಳ್ಳನನ್ನು ಸೆರೆ ಹಿಡಿದಾಗ ಒನಕೆ ಓಬವ್ವನ ರೀತಿ ಇವರನ್ನು 'ಸೈಕಲ್ ಜೋಸ್ನಾ' ಎಂದೇ ಸುದ್ದಿ ಮಾಧ್ಯಮಗಳು ಪ್ರಚಾರ ಮಾಡಿದ್ದವಂತೆ! ಆಗಿಂದ ಸೈಕಲ್ ಅಂದ್ರೆ ಇವರ ಪಾಲಿನ ಹೆಮ್ಮೆ.
ಸ್ವಾಭಿಮಾನಿ ಜೋಸ್ನಾ
ಜೋಸ್ನಾ ಇವರ ಪತಿ ಸೈನಿಕರಾಗಿದ್ದವರು‌. ಓರ್ವ ಮಗನಿದ್ದು ಅವರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಅಂಗನವಾಡಿ ಸೇವೆಯ‌ ನಿವೃತ್ತಿ ನಂತರ ಪೋಸ್ಟಲ್ ಆರ್. ಡಿಯನ್ನು ಮಾಡಿಕೊಡುವ ಕೆಲಸ ಮಾಡತೊಡಗಿದರು. ಈವರೆಗೆ ಎಷ್ಟೋ ಬಡವರಿಗೆ ಉಚಿತವಾಗಿ ಮಾಸಾಶನದಂತಹ ಸೌಲಭ್ಯಗಳ ತಿಳುವಳಿಕೆ ಮಾಡಿಸಿಕೊಟ್ಟು ಅದನ್ನು ತಾವೇ ನಿಂತು ಮಾಡಿಸಿದ್ದಾರೆ. ಸ್ವಲ್ಪ ದಿನ ಪತ್ರಿಕಾರಂಗದಲ್ಲೂ ಕೆಲಸ ಮಾಡಿದ್ದಾರೆ.


ಅಮ್ಮ ಎಂದೇ ಚಿರಪರಿಚಿತ!
ಈಗ ಮನೆ, ತೋಟ ಜೊತೆ ಊರಿನ ಜನರಿಗೆ ಆರ್.ಡಿ ಮಾಡಿಸಿಕೊಡುವ ಅದನ್ನು ಕಲೆಕ್ಟ್ ಮಾಡಿ ಸ್ವಾವಲಂಬಿಯಾಗಿ ದುಡಿಯುತ್ತಿರುವ ಮಹಿಳೆ ಇವರು. ಅದರಲ್ಲೂ ಗೋಕರ್ಣದ ಮಹಾಬಲೇಶ್ವರ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಧ್ಯಕ್ಷರಾಗಿ 9 ವರ್ಷ ಕಾರ್ಯನಿರ್ವಹಿಸಿದ ಮೊದಲ ಮಹಿಳೆಯೂ ಜೋಸ್ನಾ ಕಾಗಲ್ ಅವರಾಗಿದ್ದಾರೆ. ಹೀಗೆ ಏನೆಲ್ಲಾ ಸಾಧನೆ ಮಾಡಿರುವ ಇವರು ಊರಿನಲ್ಲಿ “ಜೋಸ್ನಾ ಅಮ್ಮ” ಎಂದೇ ಕರೆಯಲ್ಪಡುತ್ತಾರೆ.


ಇದನ್ನೂ ಓದಿ: Bob Morley In Uttara Kannada: ಈ ಹಳ್ಳಿ ಮೂಲೆಯಲ್ಲೇ ಇದ್ದಾರೆ ನೋಡಿ ಪಾಪ್ ಗಾಯಕ ಬಾಬ್ ಮಾರ್ಲೆ!


ಆರೋಗ್ಯದ ಗುಟ್ಟು ಸೈಕಲ್!
ಈಗಲೂ ಸೈಕಲ್ ಓಡಿಸುತ್ತಿರುವುದರಿಂದ ಇವರಿಗೆ ಯಾವುದೇ ಕಾಯಿಲೆಗಳಿಲ್ಲ. ಬೆಳಿಗ್ಗೆ ಎದ್ದು ಯೋಗ ಧ್ಯಾನ ಮಾಡಿ ಸೈಕಲ್ ರೈಡ್ ಬರುವ ಇವರು ನಂತರ ತೋಟದ ಕಡೆ ಕೆಲಸ ಮಾಡುತ್ತಾರೆ. ಸಂಜೆಗೊಮ್ಮೆ ಕ್ಲೈಂಟ್ಸ್​ಗಳನ್ನ ಭೇಟಿ ಮಾಡಿದ್ರೆ ಅಲ್ಲಿನ ದಿನಚರಿ ಮುಗಿದಂತೆ.
ಇದನ್ನೂ ಓದಿ: Yellow Watermelon: ಕೆಂಪಲ್ಲ, ಇದು ಹಳದಿ ಕಲ್ಲಂಗಡಿ! ಭರ್ಜರಿ ಲಾಭ ಗಳಿಸಿದ ಮಲೆನಾಡ ಕೃಷಿಕ


ಮಾದರಿ ಜೀವನ
ಜೋಸ್ನಾ ಅವರು ಒಬ್ಬರೇ ಇದ್ದರೂ ತೃಪ್ತಿಕರ ಜೀವನ ನಡೆಸುತ್ತಾ ಬಂದಿದ್ದಾರೆ. ಇಳಿವಯಸ್ಸಲ್ಲೂ ಒಂದಿನಿತು ಉತ್ಸಾಹ ಬತ್ತದೇ, ಸೈಕಲ್ ತುಳಿಯುತ್ತಾ ಬದುಕು ಕಟ್ಟಿಕೊಂಡಿದ್ದಾರೆ‌. ಹೀಗೆ ಖುಷಿ ಖುಷಿಯಾಗಿ ಸೈಕಲ್ ತುಳಿಯುತ್ತಾ ಜೀವನ ನಡೆಸುತ್ತಿರುವ ಇವರನ್ನು ನೋಡ್ತಿದ್ರೆ ಎಂತವನಿಗೂ ಬದುಕಲ್ಲಿ ಛಲ ಮೂಡೋದ್ರಲ್ಲಿ ಡೌಟಿಲ್ಲ.

First published: