• Home
  • »
  • News
  • »
  • uttara-kannada
  • »
  • Success Story: ಮಹಿಳೆಯೇ ಇಲ್ಲಿ ಮೇಸ್ತ್ರಿ, ಪುರುಷರನ್ನು ಮೀರಿಸಿದ ಧೀರೆ!

Success Story: ಮಹಿಳೆಯೇ ಇಲ್ಲಿ ಮೇಸ್ತ್ರಿ, ಪುರುಷರನ್ನು ಮೀರಿಸಿದ ಧೀರೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮಂಗಳಾ ಗೌಡ ಅವ್ರು 35-40 ಅಡಿ ಎತ್ತರದ ಕಟ್ಟಡ ಏರಿ ಪ್ಲಾಸ್ಟರ್ ಮಾಡ್ತಾರೆ. ಟೈಲ್ಸ್ ಅಳವಡಿಸ್ತಾರೆ. ಡಿಸೈನ್ ಮಾಡ್ತಾರೆ.  ಪುರುಷರೇ ಪಾರಮ್ಯ ಸಾಧಿಸಿದ ಕಟ್ಟಡ ನಿರ್ಮಾಣ ಕೆಲಸದಲ್ಲಿ ಪಾರಮ್ಯ ಸಾಧಿಸಿದ್ದಾರೆ.

  • Share this:

    ಕಾರವಾರ: ಚಕಚಕನೇ ಕಟ್ಟಡ ಏರ್ತಿರೋ ಮಹಿಳೆ. ಮನೆ, ಕಟ್ಟಡ ಅಥ್ವಾ ಇನ್ನೇನೇ ಕಟ್ಟೋದಿರ್ಲಿ, ಇವರಿದ್ದರೆ ಕಟ್ಟಡ ನಿರ್ಮಾಣ ಆಯ್ತು ಅಂತಲೇ ಲೆಕ್ಕ. ಇದು ಪುರುಷರೇ ಹೆಚ್ಚಾಗಿ ಮಾಡುತ್ತಿರುವ ಕೆಲಸದಲ್ಲಿ ಮಹಿಳೆಯ (Women Empowerment Story)  ಸಾಧನೆಯ ಸಕ್ಸಸ್ ಸ್ಟೋರಿ. ಉತ್ತರ ಕನ್ನಡದ (Uttara Kannada News) ಅಂಕೋಲಾ ಬೇಲಿಕೇರಿ ನಿವಾಸಿ ಮಂಗಳಾ ಗೌಡ  (Mangala Gowda) ವಯಸ್ಸಲ್ಲದ ವಯಸ್ಸಿಗೆ ಪತಿಯನ್ನ ಕಳೆದುಕೊಂಡ್ರು. ಇನ್ನೇನು ತಾಯಿ, ಮೂರು ಮಕ್ಕಳ ಸಂಸಾರ ನಿಭಾಯ್ಸೋದು ಹೇಗಂತ ಯೋಚಿಸ್ತಿರುವಾಗಲೇ ರಾಜೇಶ್ ನಾಯ್ಕ್ ಎಂಬ ಕಟ್ಟಡ ಗುತ್ತಿಗೆದಾರರ ಬಳಿ ಕೆಲಸ ಕೇಳಿಕೊಂಡು ಹೋದರು.


    ಮೊದಲು ಸಣ್ಣಪುಟ್ಟ ಕೆಲಸ ಸಿಕ್ಕಿದ್ರೂ ಮೂರೇ ವರ್ಷಗಳಲ್ಲಿ ಎಲ್ಲಾ ಕೆಲಸದಲ್ಲಿ ಪರಿಣಿತರಾದ್ರು. ಈಗ ಗುತ್ತಿಗೆದಾರ ರಾಜೇಶ್ ನಾಯ್ಕ್ ಅವರ ತಂಡದ ಅತ್ಯುತ್ತಮ ಮೇಸ್ತ್ರೀ ಆಗಿ ಬದಲಾಗಿದ್ದಾರೆ ಮಂಗಳಾ ಗೌಡ.


    ಕೆಲಸದ ಮೇಲಿನ ಶ್ರದ್ಧೆಯೇ ಕಾರಣ
    ಮಂಗಳಾ ಗೌಡ ಅವರು ಸದ್ಯ ಯಾವುದೇ ಕೆಲಸ ಕೊಟ್ಟರೂ ಮಾಡಿ ಮುಗಿಸುವ ಪ್ರಾವೀಣ್ಯತೆ ಗಳಿಸಿದ್ದಾರೆ. ಕೆಲಸದ ಮೇಲಿರುವ ಶ್ರದ್ಧೆ ಮಂಗಳಾ ಗೌಡ ಅವರ ನೈಪುಣ್ಯತೆ ಹೆಚ್ಚಿಸಿದೆ. ಬದುಕಿಗೊಂದು ಆಸರೆಯೂ ಆಗಿದೆ. ಮಕ್ಕಳನ್ನ ಸಾಕಲು ಈ ಮೇಸ್ತ್ರೀ ಕೆಲಸ ಮಂಗಳಾ ಅವ್ರಿಗೆ ಆಧಾರವಾಗಿದೆ.


    ಇದನ್ನೂ ಓದಿ: Uttara Kannada: ಕಂಬಳದ ಬಾರುಕೋಲು ಇಲ್ಲೇ ತಯಾರಾಗುತ್ತೆ!


    ಮೂವರು ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ, ಅಕ್ಕನ ಮಗಳ ಮದುವೆ
    ಮಂಗಳಾ ಗೌಡ ಅವ್ರು 35-40 ಅಡಿ ಎತ್ತರದ ಕಟ್ಟಡ ಏರಿ ಪ್ಲಾಸ್ಟರ್ ಮಾಡ್ತಾರೆ. ಟೈಲ್ಸ್ ಅಳವಡಿಸ್ತಾರೆ. ಡಿಸೈನ್ ಮಾಡ್ತಾರೆ.  ಹಲವು ರೀತಿಯ ಕೆಲಸಗಳಲ್ಲಿ ಪಂಟರ್ ಆಗಿದ್ದಾರೆ. ಈ ಕೆಲಸಗಳ ಮೂಲಕವೇ ತಮ್ಮ ಮೂವರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ತನ್ನ ಅಕ್ಕನ ಮಗಳ ಮದುವೆಯನ್ನೂ ಮಾಡಿ ಸಾಧನೆ ಮೆರೆದಿದ್ದಾರೆ.


    ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ


    ಬದುಕಿಗೆ ಪ್ರೇರಣೆ, ಮಾದರಿ ಮಂಗಳಾ
    ಒಟ್ಟಿನಲ್ಲಿ 39ರ ಹರೆಯದ ಮಂಗಳ ಗೌಡರ ಬದುಕಿನ ಛಲ ಅವರ ಭವಿಷ್ಯವನ್ನ ಗಟ್ಟಿಗೊಳಿಸಿದೆ. ಪತಿಯನ್ನ ಕಳೆದುಕೊಂಡು ಬದುಕು ನಡೆಸೋದು ಕಷ್ಟ ಅಂತಾ ಅದೆಷ್ಟೋ ಮಂದಿಯ ನಡುವೆ ಮಂಗಳಾ ಗೌಡ ಅವರು ಮಾದರಿಯಾಗಿದ್ದಾರೆ.


    ಮಂಗಳಾ ಗೌಡ ಅವರ ಸಂಪರ್ಕ ಸಂಖ್ಯೆ: 82775 62830


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: