ಉತ್ತರ ಕನ್ನಡ: ವೆಸ್ಟರ್ನು, ಮಾಡರ್ನು, ಟ್ರೆಡಿಶನ್ನು ಬಗೆ ಬಗೆಯ ಧಿರಿಸಿನೊಂದಿಗೆ ಹೆಜ್ಜೆಯಿಟ್ಟ ಲಲನೆಯರು. ಅರಳು ಹುರಿದಂತೆ ಮಾತನಾಡ್ತಾ ಸೊಂಟ ಬಳಕಿಸ್ತಾ ಮಾಡಿದ ಕ್ಯಾಟ್ ವಾಕ್ಗೆ ಇಡೀ ಶಿರಸಿಯೇ (Miss Sirsi) ಕ್ಯಾಮೆರಾವಾಯ್ತು. ಅಷ್ಟಕ್ಕೂ ಕಣ್ಣು ಕೋರೈಸುವ ಈ ಫ್ಯಾಶನ್ ಬಿನ್ನಾಣ ಹೇಗಿತ್ತು ಅಂತೀರಾ? ಆ ಝಲಕ್ನ್ನು ನೀವೂ ಕಣ್ತುಂಬಿಕೊಳ್ಳಿ
ಮಿಸ್ ಶಿರಸಿ
ಹೌದು, ಫ್ಯಾಶನ್ ಲೋಕದ ಈ ಬೆಡಗು ಬಿನ್ನಾಣ ಎಲ್ಲವೂ ಕಣ್ಣು ಕೋರೈಸಿದ್ದು ಉತ್ತರ ಕನ್ನಡದ ಶಿರಸಿಯಲ್ಲಿ ನಡೆದ ನಮ್ಮ ಹಬ್ಬದ "ಮಿಸ್ ಶಿರಸಿ" ಫ್ಯಾಷನ್ ಶೋನಲ್ಲಿ. ರಾತ್ರಿಯ ತುಂಬು ಬೆಳದಿಂಗಳನ್ನ ಕನ್ಫ್ಯೂಶನ್ ಮಾಡುವ ಹಾಗೆ ಚಂದಿರನ ತಂಗಿಯರು ಹೆಜ್ಜೆ ಹಾಕಿದರು. ಸಾಂಪ್ರದಾಯಿಕ ಸಾರಿಯಿಂದ ಹಿಡಿದು ಮಾಡರ್ನು ಡ್ರೆಸ್ ಗಳ ಮೂಲಕವೂ ಚೆಲುವೆಯರು ಮಿರಮಿರ ಮಿಂಚಿದರು.
ಹಳ್ಳಿ ಹುಡ್ಗೀರ ಕಾಂಪಿಟೀಶನ್
ಮಿಸ್ ಶಿರಸಿ ಸ್ಪರ್ಧೆ ನೋಡುಗರ ಕಣ್ಕುಕ್ಕುವಂತೆ ನಡೆಯಿತು. ನಗರಸಭೆಯ ಪಕ್ಕದಲ್ಲಿರುವ ಕಿರು ಮೈದಾನವಂತೂ ಪಾಲಕರ ಚಪ್ಪಾಳೆ, ಪಡ್ಡೆ ಹುಡುಗರ ಶಿಳ್ಳೆಯಿಂದ ತೇಲಾಡಿತು.
ಇದನ್ನೂ ಓದಿ: Aghanashini Aarti: ಕಾಶಿಯ ಗಂಗಾರತಿಯಂತೆಯೇ ಕುಮಟಾದಲ್ಲಿ ನಡೆಯಿತು ಅಘನಾಶಿನಿ ಆರತಿ!
ವಿಶೇಷ ಅಂದ್ರೆ ಮಿಸ್ ಶಿರಸಿಯಲ್ಲಿ ಗ್ರಾಮೀಣ ಭಾಗದ ಯುವತಿಯರು ತಾವೇನೂ ಕಮ್ಮಿಯಿಲ್ಲ ಅನ್ನೋದನ್ನ ತೋರಿಸಿಕೊಟ್ಟರು. 50 ಜನ ಸ್ಪರ್ಧಾಳುಗಳ ನಡುವೆ ಅಂತಿಮವಾಗಿ ನೇಹಾ ಶೆಟ್ಟಿ ಪ್ರಥಮ ಸ್ಥಾನ ಅಲಂಕರಿಸಿದರೆ ಐಶ್ವರ್ಯ ಎರಡನೇ ಸ್ಥಾನ ಪಡೆದರು.
ಇದನ್ನೂ ಓದಿ:Karwar: ಮೊಟ್ಟೆ ಇಡುವ ಸಮಯ ಬದಲಾಯಿಸಿದ ಕಡಲಾಮೆ!
ಹಾಗೂ ಸ್ನೇಹಾ ಮರಾಠೆ ಮೂರನೇ ಸ್ಥಾನ ಪಡೆದು ಝಗಮಗ ಲೈಟಿಂಗ್ನಲ್ಲಿ ಮಿರಿಮಿರಿ ಮಿಂಚಿದರು. ಒಟ್ಟಿನಲ್ಲಿ ಸಭ್ಯತೆಯ ಮೂಸೆಯೊಳಗೆ ಶೃಂಗಾರ ರಸ ಹರಿಸಿ ನೋಡುಗರ ಮನಸ್ಸು ಗೆಲ್ಲುವಲ್ಲಿ ‘ಮಿಸ್ ಶಿರಸಿ‘ ಯಶಸ್ವಿಯಾಯಿತು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ