ಉತ್ತರ ಕನ್ನಡ: ಅರೆರೆ! ಅದೇನ್ ಲೇಡಿನಪ್ಪ ಇವ್ರು. ಆ ಕಡೆ ಮರನೂ (Success Story) ಹತ್ತುತ್ತಾರೆ! ಈ ಕಡೆ ಬಾವಿಗೂ ಇಳಿತಾರೆ! ಪಟ್ ಪಟಾಂತ ಎಲ್ಲಾ ಕೆಲಸನೂ ಮುಗಿಸಿಬಿಡ್ತಾರೆ! ಹೇಳ್ತಾ ಹೋದ್ರೆ ಇವ್ರ ಸ್ವಾಭಿಮಾನಿ (Positive Story) ಬದುಕಿನ ಬಗ್ಗೆನೇ ಒಂದೊಳ್ಳೆ ಪಿಹೆಚ್ಡಿ ಮಂಡಿಸಬಹುದು ನೋಡ್ರಿ! ಹಾಗಿದನೋಡಿ ಇವರ ಲೈಫ್ ಸ್ಟೋರಿ.
ಅಪರೂಪದ ಸಾಧಕಿ
ನಿಜ, ಸರಸರನೇ ಮರ ಹತ್ತುವ, ಸಲೀಸಾಗಿ ಬಾವಿ ಇಳಿಯುವ ಈ ಮಹಿಳೆಯದ್ದು ಅಪ್ಪಟ ಸ್ವಾಭಿಮಾನಿ ಬದುಕು. ಉತ್ತರ ಕನ್ನಡದ ಶಿರಸಿಯ ಗಣೇಶ್ ನಗರದ 55 ವರ್ಷದ ನಿವಾಸಿಯಾಗಿರೋ ಗೌರಿ ಚಂದ್ರಶೇಖರ ನಾಯ್ಕ್ ಅವರೇ ಇಂತಹ ಅಪರೂಪದ ಸಾಧಕಿ.
ಬಾವಿ ತೋಡಿ ಸಕ್ಸಸ್
ಬರೇ ಮರ ಹತ್ತೋದು, ಬಾವಿ ಇಳಿಯೋದು ಮಾತ್ರವಲ್ಲ ಕಣ್ರೀ, ಇವ್ರು ಹತ್ತೋ ಮರ ಇವ್ರೇ ಬೆಳೆದಿದ್ದು, ಅಷ್ಟೇ ಅಲ್ಲ ಇವ್ರು ಇಳಿಯೋ ಬಾವಿನೂ ಇವರೇ ತೋಡಿದ್ದು. ಇವ್ರ ಕಡಿಮೆ ಸಾಧನೆಯಲ್ಲ! ಒಂದಲ್ಲ, ಎರಡು ಬಾವಿಯನ್ನ ತೋಡಿ ಸಕ್ಸಸ್ ಆದವರು ಗೌರಿ ಅವ್ರು. 55 ವರ್ಷದ ಈ ಮಹಿಳೆ ಅದೆಂತಹ ಸ್ವಾಭಿಮಾನಿ ಮಹಿಳೆ ಅನ್ನೋದಕ್ಕೆ ಈ ಎರಡು ಬಾವಿಗಳೇ ಸಾಕ್ಷಿ ಎನ್ನುವಂತಿದೆ.
ಕೃಷಿಗಾಗಿ ಬಾವಿ ಕೊರೆಯಲು ಮುಂದಾದರು
ಕೂಲಿ ಮಾಡುತ್ತಿದ್ದ ಗೌರಿಯವರು ಸ್ವಂತಕ್ಕೆಂದು ಅಡಿಕೆ ತೋಟ ಮಾಡಿದಾಗ ನೀರಿನ ಬವಣೆ ಕಾಡಿತ್ತು. ಯಾರನ್ನ ಕೇಳಿದ್ರೂ ಈ ಭೂಮಿಲಿ ನೀರು ಸಿಗೋದೆ ಡೌಟ್ ಅನ್ನೋ ಮಾತು ಬಂತು. ಮಕ್ಕಳಂತೂ ತೋಟವೇನೂ ಬೇಕಿಲ್ಲ, ಉದ್ಯೋಗ ಸಾಕು ಎಂದರು. ಆದ್ರೆ ಛಲಬಿಡದ ಗೌರಿ ಅವ್ರು, ತಾನೇ ಯಾರನ್ನೂ ಅವಲಂಬಿಸದೇ ಬಾವಿ ತೋಡಿಯೇ ಬಿಟ್ಟರು. ಎರಡೂವರೆ ತಿಂಗಳ ಅವಧಿಯಲ್ಲಿ ಅಡಿಕೆ ತೋಟಕ್ಕೆ 75 ಅಡಿ ಆಳದ ಬಾವಿ ತೋಡಿಯೇ ಬಿಟ್ಟರು. ಹೀಗೆ ಇದರಲ್ಲಿ ದೊರೆತ ನೀರನ್ನ ಗೌರಿ ಅವರು ತಮ್ಮ ತೋಟದ ಬಳಕೆಗಾಗಿ ವಿನಯೋಗಿಸುತ್ತಾರೆ.
ಇದನ್ನೂ ಓದಿ: Keladi: ತೇರನ್ನೇರಿದ ದಲಿತರು! ರಾಜ್ಯಕ್ಕಾಗಿ ಜೀವವನ್ನೇ ಬಿಟ್ಟ ವೀರ ಪುರುಷರು!
ಇನ್ನೊಂದು ಬಾವಿಯಿಂದ ಜನಸೇವೆ
ಇಷ್ಟಕ್ಕೆ ತೃಪ್ತರಾಗದ ಅವರು ಮತ್ತೊಂದು 50 ಅಡಿ ಬಾವಿ ಕೊರೆದು ಅದನ್ನ ಇತರೆ ಜನರ ಬಳಕೆಗೂ ಅನುವು ಮಾಡಿಕೊಟ್ಟಿದ್ದಾರೆ. ಹೀಗೆ ಗೌರಿ ಅವರು ಸ್ವಾಭಿಮಾನದ ಜೊತೆಗೆ ಪರೋಪಕಾರವನ್ನೂ ಮೈಗೂಡಿಸಿಕೊಂಡಿದ್ಧಾರೆ.
ಇದನ್ನೂ ಓದಿ: Uttara Kannada: ಈ ಹಳ್ಳಿ ಮಕ್ಕಳು ತಾವೇ ಡ್ರೋನ್ ಮಾಡಿ ಹಾರಿಸ್ತಿದ್ದಾರೆ ನೋಡಿ!
ಒಟ್ಟಿನಲ್ಲಿ ಯುವಕರನ್ನ ನಾಚಿಸಬಲ್ಲ ಈ ಗೌರಿಯಮ್ಮನಿಗೆ ಚೆನ್ನಮ್ಮ ರಾಜ್ಯ ಪ್ರಶಸ್ತಿ ಒಲಿದಿದೆ. ಮುಂದೆಯೂ ಇವರ ಏಕಾಂಗಿ ಸಾಧನೆಗೆ ಇನ್ನಷ್ಟು ಪ್ರಶಸ್ತಿ, ಪ್ರೋತ್ಸಾಹಗಳು ಅರಸಿ ಬರಲಿ ಅನ್ನೋ ಹಾರೈಕೆ ನಮ್ಮದು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ