Uttara Kannada: ಪ್ರತಿಭೆ ಯಾರಪ್ಪನ ಸ್ವತ್ತಲ್ಲ! ಎರಡೂ ಕೈಲಿ ಡ್ರಾಯಿಂಗ್ ಮಾಡುವ ಹಳ್ಳಿ ಶಾಲೆ ವಿದ್ಯಾರ್ಥಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ನಿಜ, ಈ ಶಾಲೆ ಒಳಹೊಕ್ಕರೆ ಅದೇನೋ ಟ್ಯಾಲೆಂಟ್ ಶೋ ನಡೀತಿದ್ಯಾ ಎಂಬ ಪ್ರಶ್ನೆ ಹುಟ್ಟುತ್ತೆ! ಅಷ್ಟರ ಮಟ್ಟಿಗೆ ಇಲ್ಲಿನ ಮಕ್ಕಳೆಲ್ಲರೂ ಸಖತ್ ಚೂಟಿ.

  • News18 Kannada
  • 2-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಅರೆರೆ! ಈ ಮಕ್ಕಳ ಟ್ಯಾಲೆಂಟ್ ನೋಡಲೇಬೇಕು ಕಣ್ರೀ! ಚಾಕ್ ಪೀಸ್ ಕೊಟ್ರೇ ಸಾಕು ಪಟ್ ಪಟಾಂತ ಎರಡೂ ಕೈಗಳಿಂದಲೂ ಚಿತ್ರ ಬಿಡಿಸ್ತಾರೆ. ಚಕ್ ಚಕಾಂತ ಕನ್ನಡ ಶಬ್ದಗಳನ್ನ ಇಂಗ್ಲೀಷ್​ಗೆ ಟ್ರಾನ್ಸ್​ಲೇಟ್ (Kannada To English) ಮಾಡಿ ಮಾತಾಡ್ತಾರೆ, ಅಂತ್ಯಾಕ್ಷರಿ ಅಂತಾ ಮುಂದಿಟ್ರೆ ಮಹಾಕಾವ್ಯ, ವಚನ, ಕೀರ್ತನೆಗಳ ಸಾಲನ್ನ ಮುಂದಿಡ್ತಾರೆ. ಬೋರ್ಡ್ ನೋಡದೇನೇ ಸಂಖ್ಯಾಬಂಧ ಬಿಡಿಸಿ (Success Story) ಆಶ್ಚರ್ಯಚಕಿತರನ್ನಾಗಿಸ್ತಾರೆ.


    ಹೀಗೆ ಆಟ, ಪಾಠಗಳೆಲ್ಲವೂ ನಾಟಕದ ಪಾತ್ರಗಳಂತೆ ಇಲ್ಲಿ ರೂಪುಗೊಳ್ಳುತ್ತೆ. ಪ್ರತಿಭೆಗಳ ಗಣಿಯನ್ನೇ ಹೊಂದಿರೋ ಈ ಶಾಲೆಯೇ ಅದ್ಭುತ ಸಾಲಿನ ಕವಿತೆಯಂತಿದೆ.ಅದ್ರಲ್ಲೂ ಈ ಶಾಲೆಯಲ್ಲಿ ಓದ್ತಿರುವ 6 ನೇ ಕ್ಲಾಸ್​ನ ಲೋಹಿತ್ ಚನ್ನಯ್ಯ ಎಂಬ ವಿದ್ಯಾರ್ಥಿಯಂತೂ ಎರಡೂ ಕೈಯಲ್ಲಿ ಚಿತ್ರ ಬಿಡಿಸುವುದು ಆಶ್ಚರ್ಯ ಹುಟ್ಟಿಸುತ್ತೆ!


    ಹಳ್ಳಿ ಮಕ್ಕಳ ಪ್ರತಿಭೆ
    ನಿಜ, ಈ ಶಾಲೆ ಒಳಹೊಕ್ಕರೆ ಅದೇನೋ ಟ್ಯಾಲೆಂಟ್ ಶೋ ನಡೀತಿದ್ಯಾ ಎಂಬ ಪ್ರಶ್ನೆ ಹುಟ್ಟುತ್ತೆ! ಅಷ್ಟರ ಮಟ್ಟಿಗೆ ಇಲ್ಲಿನ ಮಕ್ಕಳೆಲ್ಲರೂ ಸಖತ್ ಚೂಟಿ. ಹೌದು, ಉತ್ತರ ಕನ್ನಡದ ಶಿರಸಿಯಲ್ಲಿರೋ ಪಂಚಲಿಂಗ ಎಂಬ ಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಇಂತಹ ಅದ್ಭುತ ಪ್ರತಿಭೆಗಳನ್ನ ಪರಿಚಯಿಸುವ ಕೆಲಸ ಮಾಡ್ತಿವೆ.


    ಇವರ ಅಂತ್ಯಾಕ್ಷರಿ ಹೀಗೆ
    ಸಾಮಾನ್ಯವಾಗಿ ಅಂತ್ಯಾಕ್ಷರಿ ಅಂತಾ ಒಂದು ಅಕ್ಷರ ಕೊಟ್ಟಿದ್ರೆ ಫಿಲ್ಮ್ ಹಾಡು ಹಾಡ್ತಾರೆ. ಆದ್ರೆ ಈ ಶಾಲೆ ಮಕ್ಕಳು ಹಾಗಿಲ್ಲ, ಮಂಕುತಿಮ್ಮನ ಕಗ್ಗವೋ, ಕುಮಾರವ್ಯಾಸ ಭಾರತವೋ, ವಚನದ ಸಾಲುಗಳೋ, ದಾಸರ ಸಂಕೀರ್ತನೆಗಳನ್ನ ಹಾಡುತ್ತಾರೆ. ಅದೂ ಬೇರೆ ಒಬ್ಬರು ಆದ ಮೇಲೆ ಒಬ್ಬರಂತೆ. ಹೀಗೆ ನೋಡ್ತಾ ಕೂತರೆ ನೋಡುಗರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳಬೇಕು.


    ಕನ್ನಡ ಟು ಇಂಗ್ಲೀಷ್!
    ಇನ್ನು ಸಂಖ್ಯಾಬಂಧವಂತೂ ಇವ್ರಿಗೆ ನೀರು ಕುಡಿದಷ್ಟು ಸಲೀಸು. ಬೋರ್ಡ್ ನೋಡದೆಯೇ ಅದೆಲ್ಲವನ್ನ ಪಟ್ ಪಟಾಂತ ಬಿಡಿಸಿ ಚಪ್ಪಾಳೆ ಗಿಟ್ಟಿಸಬಲ್ಲರು. ಅದಕ್ಕಿಂತಲೂ ಜಾಸ್ತಿ ಇಲ್ಲಿನ ಮಕ್ಕಳಿಗೆ ಕನ್ನಡದ ಅದ್ಯಾವುದೇ ಶಬ್ದ ಹೇಳಿದ್ರೂ, ಅಷ್ಟೇ ನಿಖರವಾಗಿ ಇಂಗ್ಲೀಷ್​ನಲ್ಲಿ ತಿರುಗಿಸಿ ನಮ್ಗೇ ಹೇಳಬಲ್ಲರು. ಹೀಗೆ ಅದ್ಯಾವ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಮಕ್ಕಳಿಗೂ ಕಡಿಮೆಯಿಲ್ಲದಂತೆ ಈ ಮಕ್ಕಳು ತಮ್ಮ ಛಾಪು ಮೂಡಿಸುವರು.


    ಮಕ್ಕಳ ನಡುವಿನ ಟೀಂ ವರ್ಕ್
    ಇಷ್ಟೇ ಅಲ್ಲ ಕಣ್ರೀ, ಎರಡೂ ಕೈಯಲ್ಲಿ ಪೇಂಟಿಂಗ್, ಬರೀ ಹತ್ತಿಯಲ್ಲಿ ಪೇಂಟಿಂಗ್, ಕಣ್ಮುಚ್ಚಿ ಬಿಡೋದ್ರೊಳಗೆ ಕ್ರಾಫ್ಟು, ನಾಟಕದ ಮೂಲಕ ಪಾಠದ ಬೋಧನೆ ಹೀಗೆ ಒಂದೊಂದು ರೀತಿಯ ವಿಶೇಷ ಪ್ರತಿಭೆಗಳಿವು. ಇಲ್ಲಿ ಒಂದರಿಂದ 7ನೇ ತರಗತಿಯವರೆಗೆ 57 ಮಕ್ಕಳು ಇದ್ದು, ಪೈಪೋಟಿಯ ನಡುವೆಯೂ ಮಕ್ಕಳ ನಡುವೆ ಟೀಂ ವರ್ಕ್ ಅನ್ನೋ ಹೊಂದಾಣಿಕೆ ಇದೆ. ವಿಶೇಷ ಅಂದ್ರೆ ಈ ಮಕ್ಕಳನ್ನ ಈ ಮಟ್ಟಿಗೆ ಬೆಳೆಸೋದರ ಹಿಂದೆ ಶಿಕ್ಷಕರ ಪಾತ್ರ ಮಹತ್ವದ್ದು. ಸರಕಾರಿ ಶಾಲೆ ಆದ್ರೇನಂತೆ, ಖಾಸಗಿ ಶಾಲೆ ಮಟ್ಟಿಗೆ ಈ ಮಕ್ಕಳನ್ನ ಇಲ್ಲಿನ ಶಿಕ್ಷಕರು ಬೆಳೆಸಿದ್ದಾರೆ.


    ಇದನ್ನೂ ಓದಿ: Uttara Kannada: ಸ್ನಾತಕೋತ್ತರ ಪದವಿಯಲ್ಲಿ ಚಿನ್ನ ಗಳಿಸಿದ ಗೌಳಿ ಸಮುದಾಯದ ಮೊದಲ ಮಹಿಳೆ!




    ಇರೋದು ನಾಲ್ಕೇ ಶಿಕ್ಷಕರು
    ಹಾಗಂತ ಇಲ್ಲಿ ಹತ್ತು ಶಿಕ್ಷಕರಿಲ್ಲ, ಇರೋದು ನಾಲ್ಕೇ ಶಿಕ್ಷಕರು. ನಾಲ್ಕಕ್ಕೇ ನಾಲ್ವರು ಪಾಠದ ವಿಷಯದಲ್ಲಿ ಮಕ್ಕಳನ್ನ ಈ ಮಟ್ಟಿಗೆ ಬೆಳೆಸಿರುವುದು ಅಚ್ಚರಿಯೇ ಸರಿ. ಈ ಶಾಲೆ ಬಗ್ಗೆ ಹೇಳ್ತಿದ್ರೆ ಕನ್ನಡದ ಮನಸ್ಸುಗಳಿಗೆ ಕುತೂಹಲ ಹೆಚ್ಚಾಗೋದು, ಹಿರಿಹಿರಿ ಹಿಗ್ಗೋದು ಗ್ಯಾರಂಟಿ. ಇನ್ನೂ ತುಸು ಕುತೂಹಲವಿದ್ರೆ, ಶಿರಸಿಯ ಹೆಗಡೆ ಕಟ್ಟಾದಿಂದ ಒಂದು ಕಿಲೋಮೀಟರ್ ದೂರ ಸಾಗಿದರೆ ಈ ಶಾಲೆ ನೋಡಬಹುದಾಗಿದೆ. ಅಲ್ಲಿಗೆ ತೆರಳಿದ್ರೆ ಈ ಅದ್ಭುತ ಪ್ರತಿಭೆಯ ಮಕ್ಕಳನ್ನ ಕಾಣಬಹುದಾಗಿದೆ.


    ಇದನ್ನೂ ಓದಿ: Uttara Kannada: ಸಲಾಂ ಸಾಧಕಿ! ಇವರು ನೂರಕ್ಕೂ ಹೆಚ್ಚು ಪೋಸ್ಟ್ ಮಾರ್ಟಂ ಮಾಡಿರುವ ಗಟ್ಟಿಗಿತ್ತಿ ವೈದ್ಯೆ!


    ಒಟ್ಟಿನಲ್ಲಿ ಇಂತಹ ಮಕ್ಕಳನ್ನ ನೀಡ್ತಿರೋ ಈ ಸರಕಾರಿ ಶಾಲೆಯ ಶಿಕ್ಷಕರಿಗೆ ನಿಜಕ್ಕೂ ಬಿಗ್ ಸೆಲ್ಯೂಟ್ ಎನ್ನಲೇಬೇಕು.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: