• Home
  • »
  • News
  • »
  • uttara-kannada
  • »
  • Mavingundi Waterfalls: ಜಲಲ ಜಲಲ ಜಲಧಾರೆ! ಮಂತ್ರಮುಗ್ಧಗೊಳಿಸೋ ಮಾವಿನಗುಂಡಿ ಫಾಲ್ಸ್

Mavingundi Waterfalls: ಜಲಲ ಜಲಲ ಜಲಧಾರೆ! ಮಂತ್ರಮುಗ್ಧಗೊಳಿಸೋ ಮಾವಿನಗುಂಡಿ ಫಾಲ್ಸ್

ಜಲಪಾತದ ವಿಡಿಯೋ ನೋಡಿ

"ಜಲಪಾತದ ವಿಡಿಯೋ ನೋಡಿ"

ಮಾವಿನಗುಂಡಿ ಫಾಲ್ಸ್ ಹೆದ್ದಾರಿ ಪಕ್ಕದಲ್ಲಿರೋದ್ರಿಂದ ಪ್ರವಾಸಿಗರು ಸುಲಭವಾಗಿ ವೀಕ್ಷಿಸಬಹುದು. ಇಲ್ಲಿಂದ ಸಾಗೋ ಪ್ರಯಾಣಿಕರು ಈ ಕಿರು ಝರಿಧಾರೆಯಲ್ಲಿ ಆಟವಾಡದೇ ಮುಂದೆ ಸಾಗಲಾರರು. ಅಷ್ಟು ಮನಮೋಹಕವಾಗಿದೆ ಈ ಪುಟ್ಟ ಜಲಪಾತ.

  • News18 Kannada
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಬೆಟ್ಟವನ್ನ ಸೀಳಿ ಬರೋ ನೀರಿನ ನಾದ. ಕಾನನ ಮಧ್ಯೆಯಿಂದ ಹರಿದು ಬರುವ ಬೆಳ್ನೊರೆಯ ತಾಣ. ಮಳೆಗಾಲದಲ್ಲಂತೂ ಸದಾ ಧುಮ್ಮಿಕ್ಕುತ್ತಾ ಹರಿಯೋ ಪುಟ್ಟ ಫಾಲ್ಸ್ . ಇದುವೇ ನೋಡಿ ಉತ್ತರ ಕನ್ನಡ ಜಿಲ್ಲೆಯ ಮಾವಿನ ಗುಂಡಿಯ ಜಲಲ ಜಲಲ ಜಲಧಾರೆ. ಉತ್ತರ ಕನ್ನಡ ಜಿಲ್ಲೆಯ (Uttara Kannada) ಸಿದ್ದಾಪುರದಿಂದ ಜೋಗಕ್ಕೆ (Jog Falls) ಹೋಗುವ ಬಳಲಘಟ್ಟ ಘಾಟ್ ದಾರಿಯಲ್ಲಿ ಈ ಪುಟ್ಟ ಫಾಲ್ಸ್ ನಿಮ್ಮನ್ನ ಕೈ ಬೀಸಿ ಕರೆಯುತ್ತದೆ. ಸಣ್ಣ ತೊರೆಯು ಬೆಟ್ಟವನ್ನು ಸೀಳಿಕೊಂಡು ಸೃಷ್ಟಿಸಿರೋ ಈ ಫಾಲ್ಸ್ (Waterfalls In Uttara Kannada) ನಿಮ್ಮನ್ನ ಒಮ್ಮೆಗೆ ತನ್ನತ್ತ ಸೆಳೆಯದೇ ಇರದು.


    ಮಾವಿನಗುಂಡಿ ಎಂಬ ಊರಿನ ಸಮೀಪ ಈ ಫಾಲ್ಸ್ ಇರೋದ್ರಿಂದ ಇದನ್ನ 'ಮಾವಿನಗುಂಡಿ ಫಾಲ್ಸ್ ಅಂತಲೇ ಕರೆಯಲಾಗುತ್ತೆ. ಇಲ್ಲಿಂದ ಸಾಗೋ ಪ್ರಯಾಣಿಕರು ಈ ಕಿರು ಝರಿಧಾರೆಯಲ್ಲಿ ಆಟವಾಡದೇ ಮುಂದೆ ಸಾಗಲಾರರು. ಅಷ್ಟು ಮನಮೋಹಕವಾಗಿದೆ ಈ ಪುಟ್ಟ ಜಲಪಾತ.


    ಇದನ್ನೂ ಓದಿ: Uttara Kannada: ಘನತ್ಯಾಜ್ಯದಿಂದ ಗೊಬ್ಬರ! ಇದು ಅಡಿಕೆಗೂ ಭಾರೀ ಬೆಸ್ಟ್ ಅಂತೆ!


    ಇದೇ ಫಾಲ್ಸ್ ಸ್ಥಳೀಯ 150 ಮನೆಗಳಿಗೆ ಕುಡಿಯುವ ಜೀವಜಲವೂ ಆಗಿದೆ. ಇಲ್ಲಿನ ನೀರಿಗಿಳಿದರೆ ಸಾಕು ಇಲ್ಲಿರೋ ಪುಟ್ಟ ಪುಟ್ಟ ಮೀನುಗಳು ಕಾಲಿಗೆ ಕಚಗುಳಿಯಿಡುತ್ತವೆ. ಇಲ್ಲಿಂದ ನಾಲ್ಕು ಕಿಲೋ ಮೀಟರ್ ಅಂತರದಲ್ಲೇ ಪ್ರಸಿದ್ಧ ನಿಪ್ಲಿ ಹಾಗೂ ಜೋಗ್ ಫಾಲ್ಸ್​ಗಳೂ ಇವೆ ಅನ್ನೋದೇ ಇಲ್ಲಿನ ಪ್ಲಸ್ ಪಾಯಿಂಟ್.


    ಇದನ್ನೂ ಓದಿ: Uttara Kannada: ಗಣಪಮ್ಮ, ದುಗ್ಗಮ್ಮ, ಭಾಗೀರಥಮ್ಮ..ಗರ್ಭಿಣಿ-ಬಾಣಂತಿಯರೂ ಜೈಲು ಸೇರಿದರು!


    Mavingundi Waterfalls
    ಜಲಪಾತಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಅಷ್ಟೇ ಅಲ್ಲದೇ, ಮಾವಿನಗುಂಡಿ ಫಾಲ್ಸ್ ಹೆದ್ದಾರಿ ಪಕ್ಕದಲ್ಲಿರೋದ್ರಿಂದ ಪ್ರವಾಸಿಗರು ಸುಲಭವಾಗಿ ವೀಕ್ಷಿಸಬಹುದು. ಪ್ರಕೃತಿ ಸೌಂದರ್ಯದ ನಡುವೆ ಹರಿಯೋ ಈ ಝರಿಯು ಎಂತವರನ್ನೂ ಮಂತ್ರ ಮುಗ್ಧಗೊಳಿಸುತ್ತೆ.

    Published by:ಗುರುಗಣೇಶ ಡಬ್ಗುಳಿ
    First published: