ಶಿರಸಿ: ಒಂದು ಕಡೆ ಪುರೋಹಿತರ ಮಂತ್ರಘೋಷ. ಇನ್ನೊಂದೆಡೆ ಹೊಸ ಬದುಕಿಗೆ ಕಾಲಿಡುತ್ತಿರುವ ನವ ಜೋಡಿಗಳು. ಸುತ್ತಲೂ ಸುತ್ತುವರೆದಿರುವ ಕುಟುಂಬಿಕರು. ಹೀಗೆ ಶಿರಸಿ ಮಾರಿಕಾಂಬಾ ದೇವಿಯ (Sirsi Marikamba Temple) ಸನ್ನಿಧಿಯಲ್ಲಿ ನಡೆಯಿತು ಐದು ಜೋಡಿಗಳ ಸಾಮೂಹಿಕ ವಿವಾಹ.
ಅಂದಹಾಗೆ ಇದು ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ 1996 ರಿಂದ ಈವರೆಗೆ ನಡೆಯುತ್ತಿರುವ 141 ಸರಳ ವಿವಾಹವನ್ನು ಮಾಡಿಸಿದೆ. ಆ ಮೂಲಕ ಎಷ್ಟೋ ಬಡ ಜೋಡಿಗಳಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಅವಕಾಶ ಕಲ್ಪಿಸಿವೆ.
ಭರ್ಜರಿ ಉತ್ಸವದಂತಹ ಮದುವೆ
ಬೆಳಿಗ್ಗೆ 10.00 ಗಂಟೆಗೆ ಶುರುವಾದ ಈ ಸಮಾರಂಭ ಮಧ್ಯಾಹ್ನ 12.00 ಗಂಟೆಯ ಮಹಾಮಂಗಳಾರತಿಯವರೆಗೆ ನಡೆಯಿತು. ನಂತರ ಮಾಲಾಧಾರಣೆ ನಡೆದು ಕನ್ಯಾದಾನ ಮಾಡಿಸಿ 12.30 ಗೆ ಸರಿಯಾಗಿ ಮಾಂಗಲ್ಯ ಧಾರಣೆ ಮಾಡಲಾಯಿತು.
ಇದನ್ನೂ ಓದಿ: Sirsi News: ಬತ್ತಿ ಹೋಗಿದ್ದ ದೇವರ ಕಲ್ಯಾಣಿಗೆ ಮರುಜೀವ ನೀಡಿದ ಯುವ ಪಡೆ!
ಶಿರಸಿ, ಮುಂಡಗೋಡ, ಯಲ್ಲಾಪುರ, ಬನವಾಸಿ ಭಾಗದ ಜೋಡಿಗಳಿದ್ದವು. ದೇವಸ್ಥಾನದ ವತಿಯಿಂದಲೇ ವಧು ವರರಿಗೆ ಬಟ್ಟೆ, ಮಾಂಗಲ್ಯ ಎಲ್ಲವನ್ನೂ ನೀಡಲಾಯಿತು.
ಎಲ್ಲರಿಂದಲೂ ಓಡಾಟ
ದೇವಾಲಯದ ಅಧ್ಯಕ್ಷರಿಂದ ಹಿಡಿದು ಕಟ್ಟಕಡೆಯ ಸಿಬ್ಬಂದಿಯ ತನಕ ಎಲ್ಲರೂ ಓಡಾಡಿ ಮಾಡಿಸಿದ ಮದುವೆಯಿದು! ಮದುವೆ ನಂತರ ಉಪ ತಹಸೀಲ್ದಾರ್ ಕಛೇರಿಯಲ್ಲಿ ನೋಂದಣಿ ಮಾಡಿಸಲಾಯಿತು. ದೇವಾಲಯಕ್ಕೆ ಬಂದಿದ್ದ ಭಕ್ತರು ಕೂಡ ಮದುವೆಯಲ್ಲಿ ಭಾಗವಹಿಸಿ ಖುಷಿಪಟ್ಟರು.
ಇದನ್ನೂ ಓದಿ: Yakshagana In America: ಅಮೆರಿಕಾ ನೆಲದಲ್ಲಿ ಯಕ್ಷ ಕಲೆ ಉಣಬಡಿಸಿದ ಶಿರಸಿ ಮಹಿಳೆ!
ಒಟ್ಟಿನಲ್ಲಿ ಸರಳ ವಿವಾಹ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಭಕ್ತರು ಅತಿಥಿಗಳಾಗಿ, ನೆರೆದವರೆಲ್ಲ ಬಂಧುಗಳಂತೆ ಒಂದೇ ವೇದಿಕೆಯಲ್ಲಿ ಐದು ಜೋಡಿಗಳಿಗೆ ಹರಸಿ ಹಾರೈಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ