Marwai Sukka Recipe: ಕಪ್ಪೆಚಿಪ್ಪಿನ ಸುಕ್ಕಾ ಮುಂದೆ ಬೇರೇನೂ ಬೇಡ! ನಾಲಿಗೆಯಲ್ಲಿ ನೀರೂರಿಸುವ ರೆಸಿಪಿ ಇದು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮರುವಾಯಿ ಚಿಪ್ಪುವಿನ ಒಳಭಾಗದಲ್ಲಿರೋ ಮಾಂಸ ತಿನ್ನಲಷ್ಟೇ ಇದರ ಸುಕ್ಕ ಸವಿಯುತ್ತಾರೆ. ಚಿಪ್ಪು ವೇಸ್ಟ್ ಆದ್ರೂ, ಅದರ ಒಳಗಿನ ಮಾಂಸವನ್ನ ಸುಕ್ಕ ಮಾಡಿ ತಿನ್ನೋ ರುಚಿಯೇ ಬೇರೆ.

  • News18 Kannada
  • 4-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಪಾತ್ರೆಗೆ ಹದವಾಗಿ ಬೀಳುತ್ತಿರುವ ಮಸಾಲೆ ಐಟಂಗಳು. ಬಾಣಲೆಯನ್ನು ತಿರುಗಿಸುತ್ತಾ ಒಗ್ಗರಣೆಯನ್ನೆಲ್ಲಾ ಒಂದೇ ಬಣ್ಣಕ್ಕೆ ತರುತ್ತಿರುವ ಬಾಣಸಿಗ. ಸಖತ್ ಟೇಸ್ಟಿಯಾಗಿ ಘಮ್ ಎಂದು ಪರಿಮಳ ಚೆಲ್ಲುವ ಇದುವೇ ಮರುವಾಯಿ ಸುಕ್ಕ. ಇದೇನಿದು ಮರುವಾಯಿ ಸುಕ್ಕ (Marwai Sukka Recipe) ಅಂತೀರ? ಈ ಸ್ಟೋರಿ ನೋಡಿ.


ಮರುವಾಯಿ ಅಂದ್ರೇನು ಗೊತ್ತಾ?
ಅಂದಹಾಗೆ ಈ ಮರುವಾಯಿ ಅಂದ್ರೆ ಕಪ್ಪೆಚಿಪ್ಪು. ಕಡಲು, ನದಿ ಸೀಮೆ ಪ್ರದೇಶಗಳಲ್ಲಿ ಇದು ಗೋಚರಿಸುತ್ತವೆ. ಈ ಮರುವಾಯಿ ಚಿಪ್ಪು ಅಂತೂ ಕರಾವಳಿಗರ ನೆಚ್ಚಿನ ಆಹಾರ ಕೂಡ. ಅದ್ರಲ್ಲೂ ಮರುವಾಯಿ ಸುಕ್ಕವಂತೂ ಸಖತ್ ಟೇಸ್ಟ್, ಜೊತೆಗೆ ಬಾಯಲ್ಲಿ ನೀರೂರಿಸುತ್ತೆ. ಅದ್ರಲ್ಲೂ ಗಂಜಿ ಊಟಗಳಿಗಂತೂ ಈ ಮರುವಾಯಿ ಸುಕ್ಕ ಸೂಪರೋ ಸೂಪರ್.




ಒಳಭಾಗದಲ್ಲಿರುತ್ತೆ ಮಾಂಸ
ಅಂದಹಾಗೆ ಮರುವಾಯಿ ಚಿಪ್ಪಿನ ಒಳಭಾಗದಲ್ಲಿರೋ ಮಾಂಸ ತಿನ್ನಲಷ್ಟೇ ಇದರ ಸುಕ್ಕ ಸವಿಯುತ್ತಾರೆ. ಚಿಪ್ಪು ವೇಸ್ಟ್ ಆದ್ರೂ, ಅದರ ಒಳಗಿನ ಮಾಂಸವನ್ನ ಸುಕ್ಕ ಮಾಡಿ ತಿನ್ನೋ ರುಚಿಯೇ ಬೇರೆ.


ಹೀಗೆ ಮಾಡಿ ಮರುವಾಯಿ ಸುಕ್ಕ!
ಮೊದಲು ಈ ಕಪ್ಪೆಚಿಪ್ಪು ಅಥವಾ ಮರುವಾಯಿಯನ್ನ ಬೇಯಿಸಿಕೊಳ್ಳಬೇಕು. ನಂತರ ಅವು ಬಾಯಿ ಕಳಚಿ ಒಳಗೆ ಇರುವ ಮಾಂಸ ಕಾಣುತ್ತದೆ. ಅದಕ್ಕೆ ಹೋಮ್ ಮೇಡ್ ಮಸಾಲೆ, ಒಗ್ಗರಣೆ ಪದಾರ್ಥ ಹಾಗೂ ವಿನೆಗರ್ ಜೊತೆಗೊಂದಿಷ್ಟು ಕಲರ್, ಕಾಯಿತುರಿ ಹಾಕಿ ಎಣ್ಣೆಯಲ್ಲಿ ಹದವಾಗಿ ಹತ್ತು ನಿಮಿಷ ಮಿಕ್ಸ್ ಮಾಡಲಾಗುತ್ತೆ.


ಇದನ್ನೂ ಓದಿ: Uttara Kannada: ಇವರಿಗೆ ಆಕಾಶವೇ ಬಂಡವಾಳ, ಕಗ್ಗಾಡ ಹಳ್ಳಿಯಲ್ಲಿದೆ 40 ಲಕ್ಷದ ಆಸ್ಟ್ರೋ ಫಾರ್ಮ್!


ಮಸಾಲೆಯ ನೀರಿನಂಶ ಬತ್ತಿ ಬರೀ ಮಸಾಲೆ, ಕಾಯಿತುರಿ ಉಳಿದ ಒಗ್ಗರಣೆ ಪದಾರ್ಥ ಕಪ್ಪೆಚಿಪ್ಪಿನ ಜೊತೆಗೆ ತೇವಯುತವಾಗಿ ಉಳಿಯುತ್ತದೆ. ಆಮೇಲೆ ಕಪ್ಪೆಚಿಪ್ಪನ್ನು ಸ್ಪೂನ್ ತರಹ ಬಳಸಿಕೊಂಡು ಬಾಯಲಿಟ್ಟು ಒಮ್ಮೆ ಎಳೆದರೆ ಸಾಕು ಮಾಂಸದ ರುಚಿ ನಾಲಿಗೆಗೆ ದಕ್ಕುತ್ತದೆ.


ಇದನ್ನೂ ಓದಿ: Uttara Kannada: 142 ವರ್ಷಗಳ ಲಿಖಿತ ಇತಿಹಾಸವಿರುವ ಬಗ್ಗೋಣ ಪಂಚಾಂಗ ಬರೆಯುವ ಕನ್ನಡತಿ!


ರಿಯಲ್ ಟೇಸ್ಟಿಗೆ ಇಲ್ಲಿ ಬನ್ನಿ
ಉತ್ತರ ಕನ್ನಡದ ಶಿರಸಿಯ ಡಿಪೋ ಬಳಿ ಇರುವ ಮಲ್ನಾಡ್ ಹೊಟೇಲ್ ಅಂತೂ ಈ ಮರುವಾಯಿ ಸುಕ್ಕಕ್ಕೆ ಭಾರೀ ಫೇಮಸ್. ಇದು ಆರೋಗ್ಯಕ್ಕೆ ಉತ್ತಮವೂ ಆಗಿದ್ರಿಂದ, ಗರ್ಭಿಣಿಯರಿಗೆ ಇದರ ಪದಾರ್ಥವನ್ನ ಮಾಡಿಕೊಡುತ್ತಾರೆ. ಹೀಗೆ ಮರುವಾಯಿ ಸುಕ್ಕದ ರುಚಿ ತಿಂದೋನೆ ಬಲ್ಲ ಎನ್ನಬಹುದು.


ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

First published: