ವಿಶಾಲ ಬಯಲಲ್ಲಿ ಸಾಲಾಗಿ ನಿಂತಿರೋ ಸಾವಿರಾರು ಮಕ್ಕಳು, ಒಕ್ಕೊರಲ ಪ್ರಾರ್ಥನೆ, ಆಟ, ಪಾಠ ಎಲ್ಲಾದ್ರಲ್ಲೂ ಈ ವಿದ್ಯಾರ್ಥಿಗಳದ್ದೇ ಮೇಲುಗೈ! ಯಾವ್ದೇ ಕಾಂಪಿಟೇಶನ್ಗೆ ಹೋಗ್ಲಿ ಒಂದ್ ಪ್ರೈಜ್ ಪಕ್ಕಾ ಅಂತಾನೇ ಲೆಕ್ಕ! ಈ ಸರ್ಕಾರಿ ಶಾಲೆಗೆ ಮಕ್ಕಳನ್ನ ಅಡ್ಮಿಶನ್ ಮಾಡ್ಸೋಕೆ ಪೋಷಕರು ಕ್ಯೂ ನಿಲ್ತಾರೆ. ಅಷ್ಟು ಫೇಮಸ್ಸು ಉತ್ತರ ಕನ್ನಡದಲ್ಲೇ (Uttara Kannada) ಈ ಶಾಲೆ! ಯೆಸ್, 1984 ರಲ್ಲೇ ಸ್ಥಾಪನೆಯಾಗಿದ್ದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ (Sirsi) ಮಾರಿಕಾಂಬಾ ಸರಕಾರಿ ಪ್ರೌಢಶಾಲೆ (Marikamba High School Sirsi) ಸದ್ಯ ಸಾವಿರಕ್ಕೂ ಮೀರಿದ ವಿದ್ಯಾರ್ಥಿ ಬಲವನ್ನ ಹೊಂದಿದೆ. ಇಲ್ಲಿರೋ ಮಕ್ಕಳ ಸಂಖ್ಯೆ ಒಂದು ಸಣ್ಣ ಹಳ್ಳಿಯ ಜನಸಂಖ್ಯೆಯಷ್ಟು ಅಂದ್ರೂ ತಪ್ಪಾಗದು.
ಮಾರಿಕಾಂಬಾ ಸರಕಾರಿ ಹೈಸ್ಕೂಲ್ನಲ್ಲಿ ಅಂದ್ರೆ 8, 9 ಹಾಗೂ 10ನೆ ತರಗತಿಯಲ್ಲಿ ಬರೋಬ್ಬರಿ 1472 ವಿದ್ಯಾರ್ಥಿಗಳಿದ್ದಾರೆ. ಹತ್ತನೇ ತರಗತಿಯಲ್ಲೇ 600ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಯ ಶೈಕ್ಷಣಿಕ ಫಲಿತಾಂಶ ಪ್ರತಿ ವರ್ಷವೂ ಶೇಕಡಾ 90ಕ್ಕಿಂತ ಹೆಚ್ಚಿರುವುದು ವಿಶೇಷ.
ಕಳೆದ ವರ್ಷವೂ ಹಲವು ವಿದ್ಯಾರ್ಥಿಗಳು ಟಾಪರ್!
ಕಳೆದ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮಾರಿಕಾಂಬಾ ಹೈಸ್ಕೂಲ್ನ 20 ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದಿದ್ದರು. ಅವರಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಟಾಪರ್ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: Success Story: ಕಿರಾಣಿ ಅಂಗಡಿ ಮಾಲೀಕ ವೇಟ್ ಲಿಫ್ಟಿಂಗ್ನಲ್ಲಿ ಬಂಗಾರಕ್ಕೆ ಮುತ್ತಿಟ್ರು!
ಅಷ್ಟಕ್ಕೂ ಈ ಶಾಲೆ ದಾಖಲಾತಿ ಪ್ರಮಾಣದಲ್ಲಿ ಮಕ್ಕಳನ್ನು ಹೊಂದಿರುವುದಕ್ಕೆ ಕಾರಣವೂ ಇದೆ. ಈ ಶಾಲೆಯಲ್ಲಿ 5 ಸ್ಮಾರ್ಟ್ ಕ್ಲಾಸ್ಗಳಿವೆ. ಇವುಗಳಿಂದ ತರಗತಿಗಳು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಪ್ರಾಯೋಗಿಕವಾಗಿ ಮಕ್ಕಳನ್ನು ತಲುಪುತ್ತಿವೆ. ಶಿಕ್ಷಕರೂ ಅಷ್ಟೇ ಶಿಸ್ತು ಹಾಗೂ ವಿದ್ಯಾರ್ಥಿ ಸ್ನೇಹಿ ಮನೋಭಾವ ಹೊಂದಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಹೋರಾಡಿ ಭಾರತವನ್ನು ಗೆಲ್ಲಿಸಿದ INS ಚಾಪೆಲ್ ಹೀಗಿದೆ ನೋಡಿ
ಮಾರಿಕಾಂಬಾ ಹೈಸ್ಕೂಲ್ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಒಟ್ಟಾರೆ ಇಡೀ ಉತ್ತರ ಕನ್ನಡದಲ್ಲಿ ಮಾರಿಕಾಂಬಾ ಶಾಲೆ ಅಂದ್ರೆ ಪೋಷಕರು ಕ್ಯೂ ನಿಲ್ಲೋವಷ್ಟು ಫೇಮಸ್ ಆಗಿದೆ. ನೀವೂ ಒಮ್ಮೆ ಶಿರಸಿಗೆ ಬಂದ್ರೆ ಪೇಟೆಲೇ ಇರೋ ಈ ಶಾಲೆನ ಒಮ್ಮೆ ವೀಕ್ಷಿಸಬಹುದು ನೋಡಿ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ