Manjuguni Temple: ಶ್ರೀನಿವಾಸ ದೇವರ ನೌಕಾವಿಹಾರ! ಮಂಜುಗುಣಿಯಲ್ಲಿ ಉತ್ಸವದ ಸಂಭ್ರಮ

ಇಲ್ಲಿ ವಿಡಿಯೋ ನೋಡಿ

ಇಲ್ಲಿ ವಿಡಿಯೋ ನೋಡಿ

Uttara Kannada Temples: ಉತ್ತರ ಕನ್ನಡದ ಶಿರಸಿಯ ಮಂಜುಗುಣಿಯಲ್ಲಿ ದೇವರನ್ನು ನೌಕಾ ವಿಹಾರಕ್ಕೆ ಕರೆದೊಯ್ಯುವ ಸಂಪ್ರದಾಯವಿದೆ. ವರ್ಷಕ್ಕೊಂದು ಬಾರಿ ನಡೆಯುವ ಈ ಉತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.

  • Share this:

    ಉತ್ತರ ಕನ್ನಡ: ಕುದುರೆ ಸಾರೋಟು ಏರಿ ಬಂದ ದೇವರು. ಭಕ್ತರಿಂದ ಮೊಳಗಿತು ಶ್ರೀ ರಮಣ ಗೋವಿಂದ ಗೋವಿಂದ ಜಯಘೋಷ. ಅಶ್ವದಿಂದ ಇಳಿದವನೇ ನೌಕೆಯಲ್ಲೊಂದು ಶ್ರೀನಿವಾಸನ (Sri Manjuguni Srinivas God) ವಿಹಾರ. ಹೀಗೆ ಸಂಭ್ರಮ ಸಡಗರಕ್ಕೆ ಸಾಕ್ಷಿಯಾಯಿತು ನೋಡಿ ಉತ್ತರ ಕನ್ನಡದ ಶಿರಸಿಯ (Manjuguni Temple) ಮಂಜುಗುಣಿ.

    ಹೌದು, ವರ್ಷದಲ್ಲಿ ಒಂದು ಬಾರಿ ಮಂಜುಗುಣಿಯ ಶ್ರೀನಿವಾಸ ದೇವರನ್ನು ನೌಕಾ ವಿಹಾರಕ್ಕೆ ಕರೆದುಕೊಂಡು ಹೋಗುವ ಸಂಪ್ರದಾಯವಿದೆ. ಈ ಆಚರಣೆಯನ್ನು ಕಣ್ತುಂಬಿಕೊಳ್ಳಲು ಊರ ಪರವೂರಿಂದಲೂ ಅಪಾರ ಭಕ್ತರು ಆಗಮಿಸುತ್ತಾರೆ. ಜಯಘೋಷಗಳೊಂದಿಗೆ ಸಾಗಿ ಬರುವ ಮಂಜುಗುಣಿ ಶ್ರೀನಿವಾಸ ದೇವರು ಕುದುರೆ ಸಾರೋಟು ಏರಿ ಬಂದು ಅಲಂಕೃತಗೊಂಡ ನೌಕೆಯಲ್ಲಿ ವಿಹಾರ ನಡೆಸುತ್ತಾನೆ.


    ಸಾವಿರಾರು ಭಕ್ತರು ಸಾಕ್ಷಿ
    ಇಂತಹ ವಿಶೇಷ ಕ್ಷಣಕ್ಕೆ ಅಪಾರ ಭಕ್ತರು ಈ ಹಿಂದಿನಿಂದಲೂ ಸಾಕ್ಷಿಯಾಗುತ್ತಾ ಬಂದಿದ್ದಾರೆ. ಕಳೆದೆರಡು ವರ್ಷ ಕೋವಿಡ್ ಕಾರಣದಿಂದ ಕಳೆಗುಂದಿದ್ದ ಉತ್ಸವವು ಈ ಬಾರಿ ಅದ್ಧೂರಿಯಾಗಿ ನಡೆಯಿತು. ವಿದ್ಯುತ್ ದೀಪಗಳ ಬೆಳಕಿನಿಂದ ಅಲಂಕೃತಗೊಂಡ ದೋಣಿಯ ಮೂಲಕ ನೌಕಾ ವಿಹಾರವು ನಡೆಯಿತು.


    ನೌಕಾ ವಿಹಾರದ ಅಮೃತ ಕ್ಷಣ
    ಕುದುರೆ ಸಾರೋಟು ಏರಿ ಸಾಲಂಕೃತವಾಗಿ ಬೀದಿಯಲ್ಲಿ ಹೆಜ್ಜೆ ಇಡುತ್ತಾ ಬರುವ ದೇವರು, ಸಂಜೆ 5 ಗಂಟೆಯಿಂದ ಗಿಳಗುಂಡಿಗೆ ತೆರಳಿ ಪೂಜೆ ಸಲ್ಲಿಸಿದ ನಂತರ ಪಾಪನಾಶಿನಿ ನದಿಯ ಉಪನದಿ ಚಕ್ರ ತೀರ್ಥ ಕೆರೆ ಮುಂದೆ ಹಾಜರಾಗುತ್ತಾನೆ. ಅಲ್ಲಿ ಶ್ರೀನಿವಾಸ ದೇವರನ್ನು ನೌಕಾ ವಿಹಾರಕ್ಕೆ ಕರೆದೊಯ್ಯಲಾಗುತ್ತದೆ.


    ಇದನ್ನೂ ಓದಿ: Uttara Kannada: ಪ್ರಾಣ ಪಣಕ್ಕಿಟ್ಟು ಬೆಕ್ಕಿನ ಮರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ!




    ಅಶ್ವರಥೋತ್ಸವ ಸಂಭ್ರಮ
    ಇನ್ನೊಂದೆಡೆ ಸಾರೋಟಲ್ಲಿ ಅಶ್ವರಥೋತ್ಸವವೂ ಜರುಗಿತು. ಅಹೋರಾತ್ರಿ ನಡೆದ ಈ ಕಾರ್ಯಕ್ರಮದ ಪೂರ್ವದಲ್ಲಿ ಸತ್ಯನಾರಾಯಣ ವ್ರತ ಕಥೆಯನ್ನು ಆಚರಿಸಿ ನಂತರ ನೌಕಾವಿಹಾರೋತ್ಸವ, ಅಶ್ವರಥೋತ್ಸವ ಏರ್ಪಡಿಸಲಾಗಿತ್ತು.


    ಇದನ್ನೂ ಓದಿ: Uttara Kannada: ತಾಳೆ ಮರದಿಂದ ತುಂಬಿ ಹೋದ ವರದಾ ದಂಡೆ! ಬಂಡವಾಳದ 3 ಪಟ್ಟು ಲಾಭ ಗಳಿಸಿದ ಬನವಾಸಿ ಕೃಷಿಕರು


    ಒಟ್ಟಿನಲ್ಲಿ ಶಿರಸಿಯ ಮಂಜುಗುಣಿಯಲ್ಲಿ ನಡೆಯುವ ಶ್ರೀನಿವಾಸ ದೇವರ ನೌಕಾ ವಿಹಾರ ಹಾಗೂ ಅಶ್ವರಥೋತ್ಸವ ಕಾಣಲು ಜನ ಸಾಗರವೇ ನೆರೆದಿತ್ತು.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು