• Home
  • »
  • News
  • »
  • uttara-kannada
  • »
  • Kandla Forest Travel Plan: ಶರಾವತಿಯ ಮಡಿಲಲ್ಲಿ ಕಾಂಡ್ಲಾವನ, ಮ್ಯಾಂಗ್ರೋವ್ ಮರಗಳ ಜೊತೆ ನೀವೂ ಮಾತನಾಡಿ!

Kandla Forest Travel Plan: ಶರಾವತಿಯ ಮಡಿಲಲ್ಲಿ ಕಾಂಡ್ಲಾವನ, ಮ್ಯಾಂಗ್ರೋವ್ ಮರಗಳ ಜೊತೆ ನೀವೂ ಮಾತನಾಡಿ!

ಇಡೀ ಶರಾವತಿ ನದಿ ಕಣಿವೆಯ ಮ್ಯಾಂಗ್ರೋವ್ ಹಾಗೂ ಕಾಂಡ್ಲಾ ಗಿಡಗಳ ಸಮೂಹ ಜಲಚರಗಳ ಸೀಮಂತ, ಬಾಣಂತನ ಪೂರೈಸುವ ತವರುಮನೆ ಇದ್ದಂತೆ. ಬೋಟಿಂಗ್ ಮಾಡ್ತಾ ನದಿಯ ನಡುಗಡ್ಡೆಗಳ ಹತ್ತಿರವೇ ಹೋಗಿ ಆನಂದಿಸಬಹುದು. ಪ್ರಕೃತಿಯಲ್ಲಿ ಒಂದಾಗಬಹುದು.

"ಇಡೀ ಶರಾವತಿ ನದಿ ಕಣಿವೆಯ ಮ್ಯಾಂಗ್ರೋವ್ ಹಾಗೂ ಕಾಂಡ್ಲಾ ಗಿಡಗಳ ಸಮೂಹ ಜಲಚರಗಳ ಸೀಮಂತ, ಬಾಣಂತನ ಪೂರೈಸುವ ತವರುಮನೆ ಇದ್ದಂತೆ. ಬೋಟಿಂಗ್ ಮಾಡ್ತಾ ನದಿಯ ನಡುಗಡ್ಡೆಗಳ ಹತ್ತಿರವೇ ಹೋಗಿ ಆನಂದಿಸಬಹುದು. ಪ್ರಕೃತಿಯಲ್ಲಿ ಒಂದಾಗಬಹುದು."

ಇಡೀ ಶರಾವತಿ ನದಿ ಕಣಿವೆಯ ಮ್ಯಾಂಗ್ರೋವ್ ಹಾಗೂ ಕಾಂಡ್ಲಾ ಗಿಡಗಳ ಸಮೂಹ ಜಲಚರಗಳ ಸೀಮಂತ, ಬಾಣಂತನ ಪೂರೈಸುವ ತವರುಮನೆ ಇದ್ದಂತೆ. ಬೋಟಿಂಗ್ ಮಾಡ್ತಾ ನದಿಯ ನಡುಗಡ್ಡೆಗಳ ಹತ್ತಿರವೇ ಹೋಗಿ ಆನಂದಿಸಬಹುದು. ಪ್ರಕೃತಿಯಲ್ಲಿ ಒಂದಾಗಬಹುದು.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಶಾಂತವಾಗಿ ಹರಿಯುತ್ತಿರೋ ನದಿ, ನದಿ ನೀರು ಸೀಳಿಕೊಂಡು ಸಾಗೋ ಬೋಟ್. ನದಿ ಉದರದಲ್ಲೊಂದು ಕಿರಿದಾದ ದ್ವೀಪ. ಶರಾವತಿ ನದಿ ಕಣಿವೆಯ ಹತ್ತು ಹಲವು ಸೊಬಗಿನ ಈ ತಾಣ ನೋಡ್ತಿದ್ರೆ ನೀವು ನೀವಾಗೇ ಇರಲ್ಲ! ಉತ್ತರ ಕನ್ನಡದಲ್ಲಿರೋ (Uttara Kannada Kandlavana) ಕಾಂಡ್ಲಾವನ ಸ್ವಚ್ಛಂದ ಪರಿಸರ, ಜಲಚರ, ಮ್ಯಾಂಗ್ರೋವ್ ಮರಗಳ ನೆಲೆವೀಡು. ಅರಣ್ಯ ಇಲಾಖೆಯ 'ಕಾಂಡ್ಲಾ ನಡಿಗೆ'  (Kandla Nadige) ಯೋಜನೆಯಡಿ ಕಾಂಡ್ಲಾವನದೊಳಗೆ ನಾವೂ ಹೆಜ್ಜೆ ಹಾಕಬಹುದು. ಕಾಂಡ್ಲಾ ಎಂಬ ಪ್ರಬೇಧಕ್ಕೆ ಸೇರಿದ ಕಂಡೆಲಿಯ ಕಂಡೆಲ, ರೈಜೋಪೋರಾ ಅಪಿಕುಲಟಾ, ಸೋನರೇಶಿಯಾ ಅಲ್ಕಾ ಹಾಗೂ ಸೊನರೇಶಿಯಾ ಕೆಶ್ಯೂರಿಲಿಸ್ ಎಂಬ ಮರಗಳಿಂದ ಸಮೃದ್ಧವಾದ ಈ ಕಾಡು (Kandla Forest) ನಿರ್ಮಾಣವಾಗಿರೋದು ಶರಾವತಿ ಅಂಚಿನಲ್ಲಿ (Sharavathi River) ಒಳಹೊಕ್ಕರೆ ಹೊಸದೊಂದು ಹಸಿರು ಲೋಕವೇ ತೆರೆದುಕೊಳ್ಳುತ್ತೆ.


    ಒಂದಲ್ಲ ಒಂದು ಕಾಲದಲ್ಲಿ, ಜೈವಿಕ ಸೃಷ್ಟಿಗೆ ಇವೇ ಕಾಂಡ್ಲಾವನ ಕಾರಣವಾಗಿತ್ತಂತೆ. ಆಮೆಯಂತಹ ಉಭಯಚರಿ ಹಾಗೂ ಬೆಳ್ಳಕ್ಕಿ, ಮಂಗಟ್ಟೆಗಳು ಸೇರಿದಂತೆ ಮತ್ಸ್ಯಭಕ್ಷಕ ಪಕ್ಷಿಗಳಿಗೆ ಇದುವೇ ಆವಾಸ ಸ್ಥಾನ.


    ಬೋಟಿಂಗ್ ಮಾಡೋಕೂ ಬೆಸ್ಟ್ ಪ್ಲೇಸ್
    ಇಡೀ ಶರಾವತಿ ನದಿ ಕಣಿವೆಯ ಮ್ಯಾಂಗ್ರೋವ್ ಹಾಗೂ ಕಾಂಡ್ಲಾ ಗಿಡಗಳ ಸಮೂಹ ಜಲಚರಗಳ ಸೀಮಂತ, ಬಾಣಂತನ ಪೂರೈಸುವ ತವರುಮನೆ ಇದ್ದಂತೆ. ಬೋಟಿಂಗ್ ಮಾಡ್ತಾ ನದಿಯ ನಡುಗಡ್ಡೆಗಳ ಹತ್ತಿರವೇ ಹೋಗಿ ಆನಂದಿಸಬಹುದು. ಪ್ರಕೃತಿಯಲ್ಲಿ ಒಂದಾಗಬಹುದು.


    ಪ್ರೀ ವೆಡ್ಡಿಂಗ್ ಫೋಟೋಶೂಟ್​ಗಂತೂ ಒಳ್ಳೆ ಸ್ಥಳ
    ಅರಣ್ಯ ಇಲಾಖೆಯ ಪರಿಶ್ರಮ ಹಾಗೂ ಕಳಕಳಿಯಿಂದ ಕಾಂಡ್ಲಾ ನಡಿಗೆ ಒಳ್ಳೆಯ ಯೋಜನೆಯಾಗಿ ಮಾರ್ಪಟ್ಟಿದೆ. ಈ ಸ್ಥಳಕ್ಕೆ ನೀವು ಬರಬೇಕೆಂದರೆ ಉತ್ತರ ಕನ್ನಡದ ಹೊನ್ನಾವರದಿಂದ ಕಾಸರಕೋಡಿಗೆ ಬಂದರೆ ನಿಮಗೆ ದಾರಿಯಲ್ಲೇ ಶರಾವತಿ ಕಾಂಡ್ಲಾ ನಡಿಗೆ ಕಾಣಸಿಗುತ್ತೆ. ಹೀಗೆ ಸುಮಾರು 500 ಮೀ ಉದ್ದದ ಸೇತುವೆ ಕ್ರಮಿಸಿ ಮುಂದೆ ಬಂದ್ರೆಅಲ್ಲೇ ಇದೆ ನೋಡಿ ಅದ್ಭುತ ತಾಣ.


    Kandla Forest Honnavar
    ಕಾಂಡ್ಲಾವನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಪ್ರೀ ವೆಡ್ಡಿಂಗ್ ಫೋಟೋಶೂಟ್​ಗಂತೂ ಈ ಕಾಂಡ್ಲಾ ನಡಿಗೆ ಹೇಳಿಟ್ಟ ಜಾಗ.. ಇನ್ಯಾಕೆ ತಡ ನಿಮ್ಮ ಟ್ರಾವೆಲ್ ಪ್ಲಾನ್ನಲ್ಲಿ ಈಗ್ಲೇ ಶರಾವತಿ ಕಾಂಡ್ಲಾವನ ಸೇರಿಸ್ಕೊಂಡ್ಬಿಡಿ!


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: