Uttara Kannada: ಉತ್ತರ ಕನ್ನಡಕ್ಕೆ ಸದ್ದಿಲ್ದೇ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ!

ಉತ್ತರ ಕನ್ನಡದ ಕುಮಟಾದಲ್ಲಿ ನಡೆದ ಗಣೇಶೋತ್ಸವ ವಿಸರ್ಜನೆ ಸಮಯದಲ್ಲಿ ನರೇಂದ್ರ ಮೋದಿ ಭಾಗವಹಿಸಿ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಉತ್ತರ ಕನ್ನಡ: ಗಣಪತಿ ವಿಸರ್ಜನೆಯ ಸಂಭ್ರಮ ಸಡಗರ, ಕೂಗು, ಕುಣಿತ..ಈ ಗಣಪತಿ ವಿಸರ್ಜನೆಯ (Ganesh Visarjan) ಸಂಭ್ರಮ, ಅದ್ದೂರಿತನದಲ್ಲಿ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೇ ಪಾಲ್ಗೊಂಡ್ರೆ? ಅಬ್ಬಾ! ಆ ಸಂಭ್ರಮ ಇನ್ನಷ್ಟು ಹೆಚ್ಚಬಹುದು ಅಲ್ವೇ? ಉತ್ತರ ಕನ್ನಡದ ಕುಮಟಾದ  (Kumta, Uttara Kannada) ಗಣಪತಿ ವಿಸರ್ಜನೆ ಒಂದರಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರೇ ಪಾಲ್ಗೊಂಡಿದ್ದರು. ಅಬ್ಬಾ! ಅದ್ಹೇಗೆ? ಸುದ್ದಿಯಿಲ್ದೇ ಪ್ರಧಾನ ಮಂತ್ರಿಗಳು ಬಂದ್ ಹೋದ್ರಾ ಅಂತಾ ಅಂದ್ಕೊಂಡ್ರಾ? ಇಲ್ಲಿದೆ ನೋಡಿ ಉತ್ತರ ಕನ್ನಡ ಕುಮಟಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡ ಅಸಲಿ ಕಥೆ!

    10 ವರ್ಷಗಳ ಸಂಭ್ರಮದ ಗಣೇಶೋತ್ಸವ
    ಕುಮಟಾದ ಹಳೇ ಬಸ್ ಸ್ಟಾಂಡ್ ಗಣೇಶೋತ್ಸವಕ್ಕೆ ಈಗ 10 ವರ್ಷದ ಸಂಭ್ರಮ. ಹೀಗಾಗಿ ಸಂಭ್ರಮ ಸ್ವಲ್ಪ ಹೆಚ್ಚೇ ಇತ್ತು. ವನ್ನಳ್ಳಿ ಹೆಡ್ ಬಂದರ್ ಬಳಿ ಗಣಪನನ್ನ ವಿಸರ್ಜನೆ ಮಾಡಲಾಯಿತು.

    ಮೋದಿ ಅಲ್ಲ, ಸದಾನಂದ‌ ನಾಯಕ್!
    ಈ ಸಂಭ್ರಮಕ್ಕೆ ಕಳೆ ನೀಡಿದ್ದು ಪ್ರಧಾನಿ ಮೋದಿ!  ಆದ್ರೆ, ಥೇಟ್ ಪ್ರಧಾನಿ ನರೇಂದ್ರ ಮೋದಿ ಥರಾನೇ ಇರುವ ಸದಾನಂದ್ ನಾಯಕ್! ಪಿಎಂ ಮೋದಿ ಥರಾನೇ ಕಾಣಿಸುವ ಸದಾನಂದ್ ನಾಯಕ್ ಯುವಕರ ಕಡೆ ಕೈಬೀಸುತ್ತಾ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಂಡ್ರಿದ್ರು. ಈ ವೇಳೆ ಥೇಟ್ ಪ್ರಧಾನಿ ನರೇಂದ್ರ ಮೋದಿಯಂತೆ ಕಾಣುವ ಸದಾನಂದ್ ನಾಯಕ್ ಅವರೇ ಈ ಮೆರವಣಿಗೆ ಕೇಂದ್ರಬಿಂದು ಆಗಿದ್ದರು.

    ಇದನ್ನೂ ಓದಿ:

    ನೃತ್ಯ, ಕುಣಿತ, ಖುಷಿ!
    ಸಿದ್ದಿ ಜನಾಂಗದ ಡಮಾಮಿ ನೃತ್ಯ, ಹುಲಿ ಕುಣಿತ, ಡೊಲ್ಲು ವಾದ್ಯ, ಗೊಂಬೆ ನೃತ್ಯಗಳೂ ಮನಸೆಳೆದವು. ಒಟ್ಟಿನಲ್ಲಿ ಗಣಪತಿ ಜೊತೆಗೆ ಪ್ರಧಾನಿ ಮೋದಿ ಸಹ ಕುಮಟಾ ಜನರ ಸಂಭ್ರಮ ಹೆಚ್ಚಿಸಿದ್ದರು.
    Published by:ಗುರುಗಣೇಶ ಡಬ್ಗುಳಿ
    First published: