ಕಾರವಾರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡೆಸುತ್ತಿರೋ ಪಂಚರತ್ನ ಯಾತ್ರೆಯಲ್ಲಿ ಹಾರಗಳೇ ಫೇಮಸ್! ಇತ್ತೀಚಿಗೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೂ HDK ಸೇರ್ಪಡೆಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ (Uttara Kannada News) ಇತ್ತೀಚಿಗೆ ನಡೆದ ಎರಡು ದಿನಗಳ ಯಾತ್ರೆಯಲ್ಲೂ ಹೆಚ್ಡಿಕೆ ಕೊರಳಿಗೆ ವಿಶೇಷ ಹಾರಗಳು (HD Kumaraswamy Garlands) ಬಿದ್ದಿವೆ. ಅದರಲ್ಲೂ ಅಡಿಕೆ ಹಾರ ಎಲ್ಲರ ಗಮನ ಸೆಳೆದಿದೆ. ಈ ಅಡಿಕೆ ಹಾರ (Arecanut Garland To HD Kumaraswamy) ತಯಾರಿಸಿದ್ದು ಯಾರು ಅನ್ನೋ ಇಂಟರೆಸ್ಟಿಂಗ್ ಸ್ಟೋರಿ ನಾವ್ ಹೇಳ್ತೀವಿ ಕೇಳಿ.
ಈ ವಿಶೇಷ ಅಡಿಕೆ ಹಾರವನ್ನ ಉತ್ತರ ಕನ್ನಡದ ಶಿರಸಿಯಲ್ಲೇ ತಯಾರಿಸಲಾಗಿದೆ. ಕುಮಾರಸ್ವಾಮಿಯವರ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರೇ ಸೇರಿ ಈ ಹಾರವನ್ನ ತಯಾರಿಸಿರುವುದು ಮತ್ತೊಂದು ವಿಶೇಷ. ಸುಮಾರು 30 ಸಾವಿರ ಬೆಲೆಯ ಅಡಿಕೆಯಲ್ಲಿ ತಯಾರಾದ ಈ ಮಾಲೆಯನ್ನು ತಯಾರಿಸಿದ ಅರುಣ್ ಗೌಡ ನ್ಯೂಸ್ 18ಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಾಲ್ಕೈದು ದಿನಗಳ ಪರಿಶ್ರಮ
ನಾಲ್ಕೈದು ದಿನಗಳ ಕಾಲ ಶ್ರಮಪಟ್ಟು, ರಾತ್ರಿ- ಹಗಲೆನ್ನದೇ ಈ ಹಾರವನ್ನ ತಯಾರಿಸಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಈ ಹಾರದ ವಿಡಿಯೋ ಟ್ವೀಟ್ ಮಾಡುವ ಮೂಲಕ ಕಾರ್ಯಕರ್ತರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Uttara Kannada: ಚೆಂದುಳ್ಳಿ ಚೆಲುವೆಯರ ಕ್ಯಾಟ್ ವಾಕ್! ಮಿಸ್ ಶಿರಸಿ ಆದ ಸುಂದರಿ ಇವ್ರೇ!
ಗೋಕರ್ಣದಲ್ಲೂ ವಿಶೇಷ ಹಾರ!
ನವೆಂಬರ್ 18ರಂದು ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಪ್ರಾರಂಭಿಸಿದ್ದ ಪಂಚರತ್ನ ಯಾತ್ರೆ ಫೆಬ್ರವರಿ 8 ಮತ್ತು 9ರಂದು ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಂಚರಿಸಿದೆ. ಈ ಯಾತ್ರೆಯ ವೇಳೆ ಗೋಕರ್ಣದ ತರಕಾರಿ, ಭತ್ತದ ತೆನೆಗಳಂಥ ಹಾರವನ್ನ ಹಾಕಿ ಸ್ವಾಗತಿಸಲಾಗಿದೆ. ಇದರ ಜೊತೆಗೆ ಸುಮಾರು 3 ಕ್ವಿಂಟಲ್ನ ಅಡಿಕೆ ಹಾರವನ್ನೂ ಹಾಕಿ ಸ್ವಾಗತಿಸಿರುವುದು ಕುಮಾರಸ್ವಾಮಿ ಅವರ ಸಂತಸಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Aghanashini Aarti: ಕಾಶಿಯ ಗಂಗಾರತಿಯಂತೆಯೇ ಕುಮಟಾದಲ್ಲಿ ನಡೆಯಿತು ಅಘನಾಶಿನಿ ಆರತಿ!
ನಿಜಕ್ಕೂ ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆ ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಹಾರ ಹಾಕಿಸಿಕೊಳ್ಳುವುದರೊಂದಿಗೆ ದಾಖಲೆ ಬರೆದು ಗ್ರಾಮೀಣ ಪ್ರತಿಭೆಗಳಲ್ಲಿನ ಹಾರ ತಯಾರಿಕೆಯ ಕೌಶಲವನ್ನೂ ಬೆಳಕಿಗೆ ತರುವ ಕಾರ್ಯ ಮಾಡಿದೆ ಎಂದರೆ ತಪ್ಪಾಗಲ್ಲ.
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ