• Home
  • »
  • News
  • »
  • uttara-kannada
  • »
  • Love Birds Video: ಈ ಲವ್ ಬರ್ಡ್ಸ್ ಚಿಲಿಪಿಲಿ ಮನಸ್ಸಿಗೆ ಆನಂದ ತರೋದು ಖರೆ!

Love Birds Video: ಈ ಲವ್ ಬರ್ಡ್ಸ್ ಚಿಲಿಪಿಲಿ ಮನಸ್ಸಿಗೆ ಆನಂದ ತರೋದು ಖರೆ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಈ ಜೋಡಿ ಹಕ್ಕಿಗಳನ್ನು ಸಾಕೋಕೆ ಸ್ವಲ್ಪ ಹೆಚ್ಚೇ ತಾಳ್ಮೆ ಬೇಕಂತೆ. ಯಾಕಂದ್ರೆ ಇವು ನಿಂತಲ್ಲಿ ನಿಲ್ಲೋದಿಲ್ಲ, ಕುಂತಲ್ಲಿ ಕೂರೋದಿಲ್ಲ. ಸಂಗಾತಿ ಇಲ್ಲದೇ ಈ ಲವ್ ಬರ್ಡ್ಸ್ ಬದುಕೋದೇ ಇಲ್ಲ.

  • Share this:

    ಮನೆ ತುಂಬಾ ಟುವ್ವಿಟುವ್ವಿ ಅಂತಾ ಹಾಡೋ ಹಕ್ಕಿಗಳದ್ದೇ ಕಲರವ.. ಮುದ್ದಾಗಿ ಹಾರಾಡುತ್ತಾ ಕಣ್ಮನ ಸೆಳೆಯೋ ಲವ್ ಬರ್ಡ್ಸ್ ಸಂಭ್ರಮ. ರಂಗು ರಂಗಿನ ಗಿಣಿಗಳ ಸ್ವಚ್ಛಂದ ಹಾರಾಟವೇ ಕಣ್ಣಿಗದು ಹಬ್ಬ. ಸಾಕು ಪಕ್ಷಿಗಳು ಎಂದಾಗ ನೆನಪಿಗೆ ಬರೋದೆ ಲವ್ ಬರ್ಡ್ಸ್. ಜೊತೆಯಾಗಿ ಹಾರಾಡುತ್ತಾ, ಅತ್ತಿಂದಿತ್ತಾ ಓಡಾಡೋ ಈ ಪಂಚರಂಗಿ ಗಿಣಿಗಳಿಗೆ (Love Birds) ಅದೇನು ಖುಷಿ ನೋಡಿ.ಈ ದೃಶ್ಯ ಕಂಡು ಬರೋದು ಉತ್ತರ ಕನ್ನಡದ ಓರ್ವ ಸಿವಿಲ್ ಇಂಜಿನಿಯರ್ ಮನೆಯಲ್ಲಿ. ಹವ್ಯಾಸದ ರೂಪವಾಗಿ ಈ ಮೂವತ್ತು ಗಿಳಿಗಳು ಅವರ ಮನೆಯ ತಾರಸಿಯಲ್ಲಿ ಆನಂದವಾಗಿ ಕಾಲ ಕಳೆಯುತ್ತಿವೆ. ವೃತ್ತಿಪರ ಇಂಜಿನಿಯರ್ ಆದ ಉತ್ತರ ಕನ್ನಡದ (Uttara Kannada)  ಅನ್ವಿತ್ ಎಂಬವರೇ ಮೂರು ವರ್ಷದಿಂದ ಹೀಗೆ ಮುದ್ದಾದ ಪಂಚರಂಗಿ ಗಿಣಿಗಳನ್ನು ಸಾಕ್ತಿದ್ದಾರೆ. ಇಲ್ಲಿ ನೀಡೋ ಕಾಳು, ಸೊಪ್ಪುಗಳೇ ಅವುಗಳ ಆಹಾರ.


    ಈ ಜೋಡಿ ಹಕ್ಕಿಗಳನ್ನು ಸಾಕೋಕೆ ಸ್ವಲ್ಪ ಹೆಚ್ಚೇ ತಾಳ್ಮೆ ಬೇಕಂತೆ. ಯಾಕಂದ್ರೆ ಇವು ನಿಂತಲ್ಲಿ ನಿಲ್ಲೋದಿಲ್ಲ, ಕುಂತಲ್ಲಿ ಕೂರೋದಿಲ್ಲ. ಸಂಗಾತಿ ಇಲ್ಲದೇ ಈ ಲವ್ ಬರ್ಡ್ಸ್ ಬದುಕೋದೇ ಇಲ್ಲ.


    ಇದನ್ನೂ ಓದಿ: Street Dog Problem: ಬೀದಿ ನಾಯಿ ಸಮಸ್ಯೆಗೆ ಸರಳ ಉಪಾಯ; ಧಾರವಾಡ ನಾಗರಿಕರ ಸಖತ್ ಐಡಿಯಾ


    ಹಕ್ಕಿಗಳು ಟೆರೇಸ್ ಮೇಲೆ ಸ್ವಚ್ಛಂದವಾಗಿ ಹಾರಾಡುತ್ತವೆ!
    ಇನ್ನು ಅನ್ವಿತ್ ಅವರಂತೂ ಈ ಹಕ್ಕಿಗಳಿಗೆ ಮುದ್ದಾದ ಗೂಡುಗಳನ್ನು ತಯಾರಿಸಿದ್ದಾರೆ. ಯಾವುದೇ ಪ್ರಾಣಿ ಪಕ್ಷಿಗಳಿಂದ ಭದ್ರತೆ ಒದಗಿಸಿದ್ದಾರೆ. ಹಾಗಾಗಿ ಹಕ್ಕಿಗಳು ಟೆರೇಸ್ ಮೇಲೆ ಸ್ವಚ್ಛಂದವಾಗಿ ಹಾರಾಡುತ್ತಾ ಟುವ್ವಿ ಟುವ್ವಿ ಎನ್ನುತ್ತಿದೆ.


    ಇದನ್ನೂ ಓದಿ: Kandla Forest Travel Plan: ಶರಾವತಿಯ ಮಡಿಲಲ್ಲಿ ಕಾಂಡ್ಲಾವನ, ಮ್ಯಾಂಗ್ರೋವ್ ಮರಗಳ ಜೊತೆ ನೀವೂ ಮಾತನಾಡಿ!


    ಹೀಗೆ ಸಿವಿಲ್ ಇಂಜಿನಿಯರ್ ಪದವೀಧರನಾದರೂ, ಪಕ್ಷಿಗಳ ಮೇಲಿನ ಪ್ರೀತಿ ಕಡಿಮೆಯದ್ದಲ್ಲ. ಅನ್ವಿತ್ ಏನೇ ಹೇಳಿದ್ರೂ ಕೇಳಿಸಿಕೊಳ್ಳುವಷ್ಟರ ಮಟ್ಟಿಗೆ ಈ ಹಕ್ಕಿ ಹಾಗೂ ಅವರ ನಡುವೆ ಒಡನಾಟವಿದೆ. ಪಕ್ಷಿಗಳ ಮೇಲಿನ ಈ ಕಾಳಜಿ ಹೀಗೆಯೇ ಮುಂದುವರಿಯಲಿ ಅನ್ನೋದೇ ನಮ್ಮ ಹಾರೈಕೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: