• Home
  • »
  • News
  • »
  • uttara-kannada
  • »
  • Hanuman Tree: ಮರದಲ್ಲಿ ಮೂಡಿದ ಮಾರುತಿ! ಉತ್ತರ ಕನ್ನಡದ ವಿಡಿಯೋ ವೈರಲ್

Hanuman Tree: ಮರದಲ್ಲಿ ಮೂಡಿದ ಮಾರುತಿ! ಉತ್ತರ ಕನ್ನಡದ ವಿಡಿಯೋ ವೈರಲ್

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಮರದಲ್ಲಿ ಮೂಡಿರುವ ಬೃಹದಾಕಾರದ ಮರದಲ್ಲಿ ಆಂಜನೇಯನ ಮೂರ್ತಿ ಅಕ್ಷರಶಃ ಮರದ ಪಾದದಲ್ಲಿ ಮೂಡಿ ಭಕ್ತರಿಗೆ ದರ್ಶನ ನೀಡುತ್ತಿದೆ.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ದೊಡ್ಡದಾದ ಮರ, ಮರದ ಕೆಳಗೆ ಮೂಡಿದ ಅಂಜನಿಪುತ್ರ. ನೆಚ್ಚಿನ ಆರಾಧ್ಯ ಶಕ್ತಿ ಪವನ ಮೂರುತಿಯನ್ನು ಕಣ್ತುಂಬಿಕೊಳ್ಳಲೆಂದು ಬರುವ ಭಕ್ತರು. ಅಂದಹಾಗೆ ಈ ಮರದಲ್ಲಿ ಈ ಮೂರ್ತಿಯನ್ನು ಕೆತ್ತಿದವರಿಲ್ಲ, ಅದಕ್ಕೊಂದು ರೂಪು ಕೊಟ್ಟವರಿಲ್ಲ!ಹನುಮನ ಹಲವು ಸನ್ನಿಧಾನಗಳನ್ನು ನೋಡಿರಬಹುದು. ಅಲ್ಲೆಲ್ಲ ಅಂದ ಚೆಂದದ ಮೂರ್ತಿಯನ್ನು ಕೆತ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಯುತ್ತೆ. ಆದರೆ ಆಶ್ಚರ್ಯ ಅಂದ್ರೆ ಇಲ್ಲಿ ಒಂದು ಮರದ ಬುಡವೇ ಪೂರ್ತಿ ಮಾರುತಿ ರೂಪ (God Hanuman) ತಳೆದಿದೆ ಎಂದು ಭಕ್ತರು ಕೈಮುಗಿಯುತ್ತಿದ್ದಾರೆ. ಹೀಗೊಂದು ವಿಚಿತ್ರ ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ ಅಂಡಗಿ ರಸ್ತೆಯ ಎಸಳೆ ಕ್ರಾಸಿನ ಬಚಗಾಂವ್​ನಲ್ಲಿದೆ.


    ಇಲ್ಲಿ ಇರುವ ಬೃಹದಾಕಾರದ ಮರದಲ್ಲಿ ಆಂಜನೇಯನ ಮೂರ್ತಿ ಅಕ್ಷರಶಃ ಮರದ ಪಾದದಲ್ಲಿ ಮೂಡಿ ಭಕ್ತರಿಗೆ ದರ್ಶನ ನೀಡುತ್ತಿದೆ.


    ಆಂಜನೇಯ ಮಾತ್ರವಲ್ಲ!
    ಇಲ್ಲಿ ಬರೇ ಆಂಜನೇಯನ ರೂಪ ಮಾತ್ರವಿಲ್ಲ. ತಲೆ ಮೇಲೆ ಗಣೇಶ, ಮರದ ಇನ್ನೊಂದು ಬದಿಯ ಪಾದದ ಕೆಳಗೆ ಅಹಿರಾವಣರ ವಾಸವೂ ಇದೆಯಂತೆ. ಅಷ್ಟೇ ಅಲ್ಲ, ಇನ್ನೊಂದು ಕಡೆ ಆಂಜನೇಯನ ಕೈ ಸೌಗಂಧಿಕಾ ಪುಷ್ಪದೊಂದಿಗೆ ಮರದ ಹಿಂದೆ ಮೂಡಿದೆ.


    ಇದನ್ನೂ ಓದಿ: Manjuguni Temple: ಕರ್ನಾಟಕದ ತಿರುಪತಿಯಲ್ಲಿ ವನಭೋಜನ! ಇಲ್ಲಿ ವೆಂಕಟೇಶ್ವರ ನೆಲೆಸಿದ್ದೇ ರೋಚಕ ಕಥೆ


    ಪರಮಾಶ್ಚರ್ಯದ ನೆಲೆವೀಡು!
    ಮುಂದಿನ ಭಾಗದಲ್ಲಿ ಉಬ್ಬಿದೆದೆಯ ಕೌಸ್ತುಭಮಣಿ ಧರಿಸಿದ ಕರ್ಣ ಕುಂಡಲದೊಂದಿಗೆ ಅಭಯಹಸ್ತ ಹೊಂದಿದ ಆಂಜನೇಯನ ಸುಂದರ ಮೂರ್ತಿಯಿದೆ. ಹೀಗೆ ಈ ಮರವೇ ಪರಮಾಶ್ಚರ್ಯದ ನೆಲೆವೀಡು ಅಂತ ಎಲ್ಲೆಲ್ಲಿಂದ್ಲೋ ಭಕ್ತರು ಆಗಮಿಸ್ತಿದ್ದಾರೆ.


    ಇದನ್ನೂ ಓದಿ: Uttara Kannada: ಗ್ರಹಣದ ನಂತರದ ಆಕಾಶ ಹೀಗಿರುತ್ತೆ! ಶಿರಸಿಯ ಆಗಸ 360 ತಂಡದಿಂದ ಹೊಸ ಪ್ರಯತ್ನ!


    ಒಟ್ಟಿನಲ್ಲಿ ಆಂಜನೇಯ, ವಿಘ್ನ ನಿವಾರಕನ ಭಕ್ತರಿಗಂತೂ ಈ ಸ್ಥಳ ಭಾರೀ ಭಕ್ತಿಯ ತಾಣವಾಗಿದೆ. ದೇವರ ಈ ಆಕೃತಿ ಪ್ರಕೃತಿ ನಡೆಸಿದ ಅಚ್ಚರಿಯಾಗ ವೈರಲ್ ಆಗ್ತಿದೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: