ಉತ್ತರ ಕನ್ನಡ: ಸಿಂಹದಂತೆ ಕುಣಿತ, ನೋಡೋಕೇ ಥೇಟ್ ಕಾಡಿನ ರಾಜನೇ ಎದ್ದು ಕುಣಿಯುತ್ತಿದೆಯೋ ಎಂಬ ಫೀಲ್. ಹುಲಿ ವೇಷ ಅಂದ್ರೆ ಉಡುಪಿ, ದಕ್ಷಿಣ ಕನ್ನಡ (Dakshina Kannada) ನೆನಪಾಗೋದು ಕಾಮನ್. ಆದ್ರೆ ಸಿಂಹ ವೇಷ ಎಂದಾಗ ನೆನಪಾಗೋದೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಯಕ್ಷಗಾನದ ಈ ಮೇರು ಕಲಾವಿದ. ಇಂದಿಗೂ ಸಿಂಹ, ಕರಡಿ ವೇಷದ ಧಿರಿಸು ಹೊಲಿಯುವ ಇವರು ಸ್ವತಃ ಅದರ ವೇಷಧಾರಿಯೂ ಹೌದು.
ಯಕ್ಷರಂಗದಲ್ಲಿ ಸಿಂಹ ಘರ್ಜನೆ
ಇವರು ಉತ್ತರ ಕನ್ನಡದ ಕುಮಟಾದ ಉತ್ತಮ ಪಟಗಾರ್. ಕರ್ಕಿ ಕೃಷ್ಣ ಹಾಸ್ಯಗಾರರ ನಂತರ ಸಿಂಹ ನೃತ್ಯ ಮಾಡುವ ಜಿಲ್ಲೆಯ ಏಕೈಕ ಕಲಾವಿದ. ಯಕ್ಷಾಂಗಣಕ್ಕೆ ಕಾಲಿಟ್ಟ ಇವರು 40 ವರ್ಷಗಳ ಕಾಲ ಯಕ್ಷಗಾನದಲ್ಲಿ ದುಡಿದವರು. ರಾಮಚಂದ್ರ ಚಿಟ್ಟಾಣಿ, ಕೆರೆಮನೆ ಶಂಭು ಹೆಗಡೆ ಹೀಗೆ ಹಲವು ಕಲಾವಿದರ ಸಾಂಗತ್ಯ ಗಳಿಸಿದ್ದ ಇವರು ಜಾಂಬವತಿ ಕಲ್ಯಾಣದಲ್ಲಿ ನಿಜವಾದ ಸಿಂಹದಂತೆ ಆರ್ಭಟಿಸಿ ಹೆಸರಾದವರು.
ತಾನೇ ಖುದ್ದು ತಯಾರಿಸ್ತಾರೆ
ಅಷ್ಟೇ ಅಲ್ದೇ, ಉತ್ತಮ್ ಪಟಗಾರ್ ಅವರು ಸುಗ್ಗಿ ಕಾಲದ ಸಿಂಹ, ಕರಡಿಗಳಿಗೆ ಬಟ್ಟೆ ಹೊಲಿದು ಕೊಡುತ್ತಾರೆ. ಸ್ವತಃ ತಾವೇ ಸಿಂಹ ವೇಷ ಹಾಕುವ ಅವರು, ಈ ಪ್ರಾಯದಲ್ಲೂ ಬಾಡದ ಅಮ್ಮನ ಗುಡಿಯಲ್ಲಿ ಕುಣಿದು ಜನರನ್ನು ರಂಜಿಸುತ್ತಾರೆ. 12 ವರ್ಷಕ್ಕೆ ಬಾಲಗೋಪಾಲನಾಗಿ ಯಕ್ಷಾಂಗಣಕ್ಕೆ ಕಾಲಿಟ್ಟ ಇವರು ಇಂದಿಗೂ ಇಂತಹ ಡಿಫ್ರೆಂಟ್ ವೇಷಗಳಿಗೆ ಬೇಕಾದ ಬಟ್ಟೆ ಹೊಲಿಯೋದು ಗಮನ ಸೆಳೆಯುವಂತಿದೆ.
ಇದನ್ನೂ ಓದಿ: Uttara Kannada: ಬಡವರಿಗೆ ಬಂಗಾರ ನೀಡುವ ಗ್ರಾಮ ದೇವತೆ ಈಕೆ! ವರ್ಷಕ್ಕೆ 3 ತಿಂಗಳಷ್ಟೇ ದರ್ಶನ ಭಾಗ್ಯ!
ದುಬಾರಿ ಧಿರಿಸು
ಕಾರವಾರದಿಂದ ತರಿಸಿಕೊಳ್ಳೋ ಉಣ್ಣೆ ಬಟ್ಟೆಗೆ ಬಳಿಕ ಉತ್ತಮ ಪಟಗಾರ್ ಅವರು ಡಿಸೈನ್ ಮಾಡುತ್ತಾರೆ. ಸ್ವತಃ ತಾವು ಧರಿಸೋ ಸಿಂಹ ವೇಷದ ಬಟ್ಟೆಯನ್ನು ಕೂಡಾ ಅವರೇ ತಯಾರಿಸುತ್ತಾರೆ. ಆ ಕಾಲದಲ್ಲಿ 150 ರೂಪಾಯಿಗೆ ವೇಷ ಕಟ್ಟುತ್ತಿದ್ದ ಉತ್ತಮ ಪಟಗಾರ್, ತಾನು ತಯಾರಿಸಿದ ಬಟ್ಟೆಗೆ ಮಾತ್ರ 15,000 ತಗುಲಿತ್ತಂತೆ.
ಇದನ್ನೂ ಓದಿ: Uttara Kannada: ಚಿಕ್ಕ ಹುಡುಗಿಯ ದೊಡ್ಡ ಸಾಧನೆ! ಗೋಕರ್ಣದ ಬಾಲಕಿಯಿಂದ ದುಬೈನಲ್ಲಿ ಯೋಗ
ಹೀಗೆ ತಮ್ಮ ಕಲಾಸಕ್ತಿಯನ್ನು ಅವರು ಸಾದರಪಡಿಸುತ್ತಾರೆ. ಒಟ್ಟಿನಲ್ಲಿ ಯಕ್ಷಾಂಗಣ, ಹೊರಾಂಗಣದಲ್ಲಿ ಸಿಂಹ ವೇಷದ ಪರಿಪೂರ್ಣತೆ ಕಟ್ಟಿಕೊಡುವ ಉತ್ತಮ ಪಟಗಾರರಿಗೆ ನಿಜಕ್ಕೂ ಸೆಲ್ಯೂಟ್ ಹೇಳಲೇಬೇಕು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ