House Lifting Technology: ಕಟ್ಟಿದ ಮನೆಯೇ ನೆಲದಿಂದ 6 ಅಡಿ ಎತ್ತರಕ್ಕೆ ಲಿಫ್ಟ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಯೆಸ್, ಅಲ್ಲಲ್ಲಿ ಮೆತ್ತಿರುವ ಸಿಮೆಂಟ್, ಕೆಂಪು ಕಲರ್​ನ ಜಾಕ್​ಗಳಿಂದ ಬುಡ ಸಮೇತ ಮೇಲೆಕ್ಕೆದ್ದು ನಿಂತಿರೋ ಮನೆ. ಹೀಗೆ ಮನೆಯನ್ನೇ ಜಾಕ್ ಕೊಟ್ಟು ನಿಲ್ಲಿಸಿದ್ದ ಉತ್ತರ ಕನ್ನಡದ ಕುಮಟಾದಲ್ಲಿ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಇದೇನು ಕಂಟೈನರಾ ಅಥವಾ ಮನೆನಾ? ಹೀಗೆ ಏಕಾಏಕಿ ಲಿಫ್ಟ್ (Home Lifting)  ಮಾಡ್ತಿದ್ದಾರಲ್ಲ. ಹೌದು, ನಾವೆಲ್ಲ ವಾಹನಗಳಿಗೆ ಜಾಕ್ ಕೊಡೋದನ್ನ ನೋಡಿದ್ದೀವಿ. ಆದ್ರೆ ಇವರು ಮನೆಗೆ ಜಾಕ್ ಕೊಡ್ತಾರೆ. ಅಷ್ಟಕ್ಕೂ ಇವ್ರು ಜಾಕ್ ಕೊಟ್ಟು ಮನೆನಾ ಗಾಳೀಲಿ (House Lifting Technology) ತೇಲಾಡಿಸ್ತಾರ ಅಥವಾ ನೆಲ ಮಾಳಿಗೆ ಮಾಡ್ತಿದ್ದಾರಾ? ಈ ಎಲ್ಲ ನಿಮ್ಮ ಕುತೂಹಲದ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ!


    ಯೆಸ್, ಅಲ್ಲಲ್ಲಿ ಮೆತ್ತಿರುವ ಸಿಮೆಂಟ್, ಕೆಂಪು ಕಲರ್​ನ ಜಾಕ್​ಗಳಿಂದ ಬುಡ ಸಮೇತ ಮೇಲೆಕ್ಕೆದ್ದು ನಿಂತಿರೋ ಮನೆ. ಹೀಗೆ ಮನೆಯನ್ನೇ ಜಾಕ್ ಕೊಟ್ಟು ನಿಲ್ಲಿಸಿದ್ದು ಉತ್ತರ ಕನ್ನಡದ ಕುಮಟಾದಲ್ಲಿ. ಅಷ್ಟಕ್ಕೂ ಉತ್ತರ ಕನ್ನಡದಲ್ಲಿ ಇಂತಹ ಸಾಹಸಮಯ ಕೆಲಸಕ್ಕೆ ಕೈ ಹಾಕಿದ್ದು ಹರಿಯಾಣ ಮೂಲದ ಕಂಪೆನಿ!




    ಇಳಿಜಾರಲ್ಲಿರುವ ಮನೆ ರಿಪೇರಿ!
    ಅಂದಹಾಗೆ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಕಡೆಕೋಡಿಯಲ್ಲಿ ಹೇಮಂತ್ ನಾಯ್ಕ್ ಎಂಬವರ ಮನೆಯಿದೆ. ಈ ಮನೆ ಕೊಂಚ ಇಳಿಜಾರಿನಲ್ಲಿದ್ದು ಮಳೆ ಬಂದ್ರೆ ಕೆಸರು ನೀರು ನುಗ್ಗಿ ಮನೆ ಪರಿಸ್ಥಿತಿ ದೇವ್ರಿಗೆ ಪ್ರೀತಿ ಅನ್ನೋ ಹಾಗಿರುತ್ತೆ. ಹೀಗಾಗಿ ಮನೆ ಕಟ್ಟೋದೇನೋ ಕಟ್ಟಾಗಿದೆ. ಮಳೆ ನೀರು ಮನೆಗೆ ನುಗ್ಗೋದಂತೆ ಪರಿಹಾರ ಕಂಡುಕೊಳ್ಳೋಕೆ ಹೇಮಂತ್ ನಾಯ್ಕರು ಮುಂದಾಗಿದ್ದಾರೆ. ಎರಡು ವಾರದಲ್ಲಿ ಮುಗಿಯುವ ಈ ಮನೆ ಲಿಫ್ಟಿಂಗ್​ ಕಾಮಗಾರಿಗೆ ಚದರಡಿಗೆ 1200 ರೂ. ಹಣ ತಗಲುತ್ತದೆ.




    ಹಾಗೆ ಆಲೋಚನೆ ಮಾಡಿದವರೇ ಮನೆಯನ್ನೇ ಲಿಫ್ಟ್ ಮಾಡೋದಕ್ಕೆ ಹರಿಯಾಣ ಮೂಲದ ಈ ಕಂಪೆನಿಯವರನ್ನ ಕರೆಸಿಕೊಂಡಿದ್ದಾರೆ.


    ನೆಲದಿಂದ 6 ಅಡಿ ಎತ್ತರಕ್ಕೆ ಮನೆ ಮೇಲೆತ್ತಿದರು!
    ಸದ್ಯಕ್ಕೆ ಹೇಮಂತ್ ನಾಯ್ಕ್ ಅವರ ಮನೆಯನ್ನ ನೆಲಮಟ್ಟದಿಂದ 6 ಅಡಿ ಎತ್ತರಕ್ಕೆ ಏರಿಸಿ ಜಾಕ್​ಗಳನ್ನ ಕೊಡಲಾಗಿದೆ. ಅಷ್ಟೇ ಅಲ್ದೇ, ಮನೆಯ ಪುನರ್ ನಿರ್ಮಾಣ ಕಾಮಗಾರಿಯನ್ನೂ ಆರಂಭಿಸಲಾಗಿದೆ. ಭೂಕಂಪನದ ಹೊರತುಪಡಿಸಿ ಮೂವತ್ತು ವರ್ಷದವರೆಗೆ ಗ್ಯಾರಂಟಿ ಹಾಗೂ ಕೋರ್ಟ್ ಒಪ್ಪಂದದೊಂದಿಗೆ ಈ ಕಂಪೆನಿ ವ್ಯವಹರಿಸುತ್ತದೆ. ಒಂದೋ ಎರಡೋ ಜ್ಯಾಕ್​ಗಳನ್ನ ತೆಗೆಯುತ್ತಿದ್ದರೆ ನೋಡುಗರಿಗೆ ಹಾರ್ಟ್ ಬೀಟ್ ಹೆಚ್ಚಾಗುವುದು ಗ್ಯಾರಂಟಿ.




    ಆದರೆ ಮನೆಯು ಹಾಗೆಯೇ ನಿಂತಾಗ ಏನಿದು ಗಾಳಿಯಲ್ಲಿ ತೇಲುತ್ತಿದೆಯಾ ಅನ್ನೋ ಭಾವನೆ ಮೂಡುತ್ತೆ. ವಿಶೇಷ ಅಂದ್ರೆ ಅಷ್ಟೊಂದು ತೂಕದ ಮನೆಯನ್ನು ನೂರು ಚಿಲ್ಲರೆ ಜ್ಯಾಕ್​ಗಳು ಎತ್ತಿ ಹಿಡಿದಿವೆ ಅನ್ನೋದು.


    ಇದನ್ನೂ ಓದಿ: Uttara Kannada: ಹವ್ಯಾಸದಿಂದಲೇ ಹಣ-ಹೆಸರು ಎರಡನ್ನೂ ಗಳಿಸಿದ ಗ್ರಾಮೀಣ ಮಹಿಳೆ!


    ಮುನ್ನೆಚ್ಚರಿಕಾ ಕ್ರಮವಾಗಿ ಸದ್ಯ ಒಳಗಡೆ ಯಾರನ್ನೂ ಬಿಡುವುದಿಲ್ಲ ಆದರೂ ಭಂಡ ಧೈರ್ಯ ಮಾಡಿ ಒಳನುಗ್ಗಿದರೆ ಈ ಮನೆ ಒಂದು ಥರ ಅಡಿಪಾಯ ಇಲ್ಲದೇ ಗಾಳಿಯಲ್ಲಿ ನಿಂತಿದೆ ಎನಿಸುತ್ತದೆ. ಒಟ್ಟಿನಲ್ಲಿ ಮನೆ ಕಟ್ಟಿ ನೋಡು ಒಮ್ಮೆ ಮದುವೆ ಮಾಡಿನೋಡು ಅನ್ನೋ ಮಾತೀಗ ಪ್ರಾಬ್ಲಮ್ ಇದ್ರೆ ಮನೆ ಎತ್ತಿ ನೋಡು ಒಮ್ಮೆ ಶಿಫ್ಟ್​ ಮಾಡಿ ನೋಡು ಎಂದು ಬದಲಾಯಿಸಿಕೊಳ್ಳುವಂತಾಗಿದೆ.




    ಇದನ್ನೂ ಓದಿ: Underwater Proposal: ಲವರ್​ಗೆ ಸಮುದ್ರದೊಳಗೆ ಪ್ರಪೋಸ್ ಮಾಡಿ! ಇದು ಅದ್ಭುತ ಕಿಕ್ ಕೊಡುವ ವಿಸ್ಮಯ ತಾಣ


    ಇದನ್ನ ನೋಡಿ ಜನ ಈಗ ನಮ್ ಮನೆಯನೂ ಶಿಫ್ಟ್ ಮಾಡಿಕೊಡಿ, ಕೊಂಚ ಲಿಫ್ಟ್ ಮಾಡಿಕೊಡಿ ಅಂತಾ ಈ ತಂತ್ರಜ್ಞರಿಗೆ ದುಂಬಾಲು ಬಿದ್ದಿದ್ದಾರಂತೆ.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: