Positive Story: 70ನೇ ವಯಸ್ಸಲ್ಲಿ ವೇಸ್ಟ್ ವಸ್ತುಗಳಿಂದ ಹೂಮಾಲೆ ಅರಳಿಸ್ತಿದ್ದಾರೆ ಈ ಅಜ್ಜಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಪ್ಲಾಸ್ಟಿಕ್ ವೇಸ್ಟೇಜ್, ನಿರುಪಯುಕ್ತ ಬ್ಯಾಗ್​ಗಳಿಂದ ಹೂ, ಹೂವಿನ ಮಾಲೆ ತಯಾರಿಸುವಲ್ಲಿ ಮಹಿಳೆಯೋರ್ವರು ಸೈ ಎನಿಸಿಕೊಂಡಿದ್ದಾರೆ.

  • News18 Kannada
  • 2-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಎಷ್ಟೊಂದು ಚೆಂದದ ಹೂಗಳು. ಥಟ್ಟನೆ ಆಕರ್ಷಿಸೋ ಅಲಂಕಾರಿಕ ವಸ್ತುಗಳು. ಅದಕ್ಕಿಂತಲೂ ಅದ್ಭುತ ಅಂದ್ರೆ ಇದೆಲ್ಲವೂ ಕಸದ ತೊಟ್ಟಿ (Art From Waste) ಸೇರಬೇಕಿದ್ದ ವಸ್ತುಗಳಿಂದ ಅರಳಿ ನಿಂತ ಚೆಂದದ ಕಲಾಕೃತಿಗಳು! ವಿಶೇಷ ಅಂದ್ರೆ ಇದೆಲ್ಲವನ್ನ ಮಾಡೋ ಈ ಮಹಿಳೆಯದ್ದು (Positive Story) 70 ರ ಹರೆಯದ ಹುರುಪು‌‌.




ಇಳಿವಯಸ್ಸಿನಲ್ಲಿ ಸಾಧನೆ!
ಯೆಸ್, ನೀವ್ ನೋಡ್ತಿರೋ ಈ ವಸ್ತುಗಳೆಲ್ಲವೂ ಕಸದಿಂದ ರಸದ ಕಲ್ಪನೆಯ ಪ್ರಾಡಕ್ಟ್​ಗಳು. ಇನ್ನೇನು ಕಸದ ತೊಟ್ಟಿ ಸೇರುವಂತಿದ್ದ ವೇಸ್ಟ್ ವಸ್ತುಗಳೆಲ್ಲವೂ ಇಲ್ಲಿ ಒಳ್ಳೆ ಅಲಂಕಾರಿಕ ವಸ್ತುಗಳಾಗಿವೆ. ಇದೆಲ್ಲದರ ಹಿಂದಿರೋ ಮಾಂತ್ರಿಕ ಶಕ್ತಿಯೇ ಈ 70 ರ ಹರೆಯದ ನರ್ಮದಾ ಹೆಗಡೆಯವರು. ಉತ್ತರ ಕನ್ನಡದ ಕುಮಟಾದ ಗಣಪತಿಪುರದವರು.




ಕಸದಿಂದ ರಸ
ಸದಾ ಕ್ರಿಯೇಟಿವ್ ಆಗಿ ಯೋಚಿಸೋ ಇವ್ರು ಅದೆಷ್ಟೋ ವೇಸ್ಟೇಜ್ ಪ್ಲಾಸ್ಟಿಕ್ ಹಾಗೂ ಬಟ್ಟೆ ಬ್ಯಾಗ್ ಗಳಿಗೆ ಚೆಂದದ ರೂಪ ನೀಡಿ, ಅದ್ರಲ್ಲಿ ಹೂಗುಚ್ಛ, ಹೂವಿನ ಮಾಲೆ ತಯಾರಿಸಿದ್ದಾರೆ. ಈ ಮೂಲಕ ಇಳಿವಯಸ್ಸಿನಲ್ಲೂ ಯುವಕರಿಗೆ ಮಾದರಿಯಾಗಿದ್ದಾರೆ.




ಗಿಫ್ಟ್ ಆಗಿ ಬಳಕೆ
ನರ್ಮದಾ ಹೆಗಡೆಯವರು ಈ ಹಿಂದೆ ತಮ್ಮ ಹಪ್ಪಳ ಸಂಡಿಗೆಗಳಿಂದ ಸದ್ದು ಮಾಡಿದವರು, ಆದರೆ ಕೋವಿಡ್ ನಂತರ ಅದು ಸಾಧ್ಯವಾಗಲಿಲ್ಲ. ಹಾಗಂತ ನರ್ಮದಾ ಹೆಗಡೆ ಅವರ ಜೀವನೋತ್ಸಾಹ ಕಮ್ಮಿಯಾಗಲಿಲ್ಲ.


ಇದನ್ನೂ ಓದಿ: Yakshagana: ಯಕ್ಷಗಾನ ಪುರುಷರಿಗಷ್ಟೇ ಅಲ್ಲ, ಮಹಿಳೆಯರ 'ಚಂಡೆ ಚಾತುರ್ಯ' ನೋಡಿ!




ಸುಮ್ಮನೆ ಕೂರುವುದನ್ನು ದ್ವೇಷಿಸುವ ಇವರು ಬಟ್ಟೆಗಳಲ್ಲಿ ಗುಲಾಬಿ ಅರಳಿಸಿದ್ದಾರೆ. ಆದರೆ ಮಾರ್ಕೆಟಿಂಗ್ ಮಾಡಲು ಅವರಿಗೆ ಸೂಕ್ತ ಅವಕಾಶವಿಲ್ಲ. ಹೀಗಾಗಿ ಮನೆಯಲ್ಲಿನ ಕಾರ್ಯಕ್ರಮಗಳಿಗೆ ಹಾಗೂ ಊರಿನ ಯಕ್ಷಗಾನ ವೇಷಧಾರಿಗಳಿಗೆ ಸರ್ಕಾರಿ ಶಾಲೆಯ ಮಕ್ಕಳ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತಾರೆ.




ಇದನ್ನೂ ಓದಿ: Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!


ಮಾದರಿ ಮಹಿಳೆ
ಹಾಗಂತ ಇದು ಸುಲಭದ ಕೆಲಸವಲ್ಲ, ಮನೆಯ ಕೆಲಸವನ್ನೆಲ್ಲಾ ಮಾಡಿಕೊಂಡು ಇವರು ನಾಲ್ಕು ದಿನ ಕಟಿಂಗ್ ಹಾಗೂ ಐದನೇ ದಿನ ಮಾಲೆಯ ತಯಾರಿ ಮಾಡುತ್ತಾರೆ. ಏನು ಕೆಲಸವಿರದಿದ್ದರೆ ಒಂದೇ ದಿನದಲ್ಲಿ ಮಾಲೆ ರೆಡಿ. ಒಟ್ಟಿನಲ್ಲಿ ನರ್ಮದಾ ಹೆಗಡೆ ಅವರ ಜೀವನೋತ್ಸಾಹ ಎಂತವರಿಗೂ ಪಾಸಿಟಿವ್ ಎನರ್ಜಿ ತುಂಬೋದ್ರಲ್ಲಿ ಡೌಟಿಲ್ಲ.

First published: