• Home
  • »
  • News
  • »
  • uttara-kannada
  • »
  • ದಕ್ಷಿಣ ಕನ್ನಡದ ದೇವಸ್ಥಾನ ದರ್ಶನ; KSRTC ವಿಶೇಷ ಕೊಡುಗೆ

ದಕ್ಷಿಣ ಕನ್ನಡದ ದೇವಸ್ಥಾನ ದರ್ಶನ; KSRTC ವಿಶೇಷ ಕೊಡುಗೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಧರ್ಮಸ್ಥಳದಲ್ಲಿ ವಾಸ್ತವ್ಯಕ್ಕೆ ಅನುಕೂಲವಿದ್ದು ವಯಸ್ಕರಿಗೆ 800 ರೂಪಾಯಿ ಹಾಗೂ ಮಕ್ಕಳಿಗೆ 600 ರೂಪಾಯಿ ದರದಲ್ಲಿ ನೀವು ಈ ಎಲ್ಲಾ ದೇವಸ್ಥಾನಗಳನ್ನು ಕಡಿಮೆ ವೆಚ್ಚದಲ್ಲಿ  ಆರಾಮವಾಗಿ ದರ್ಶನ ಮಾಡಬಹುದಾಗಿದೆ. 

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ನವೆಂಬರ್ ತಿಂಗಳಿನಿಂದ ಫೆಬ್ರುವರಿ ತಿಂಗಳಿನವರೆಗಿನ ದಿನಗಳು ಪ್ರವಾಸಿಗರಿಗೆ ಪರ್ವಕಾಲ! ನಿಂತಲ್ಲಿ ನಿಲ್ಲದೇ ಅವರ ಓಡುವ ಮನಕ್ಕೆ ಲಯ ಒದಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಾರಿಗೆ ಸಂಸ್ಥೆ (KSRTC) ಮುಂದಾಗಿದೆ. ಕರ್ನಾಟಕ ಸಾರಿಗೆ ಸಂಸ್ಥೆಯ ಅಂಗವಾದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದಿಂದ (Sirs) ವಾರಕ್ಕೆರೆಡು ದಿನದಂತೆ ರಾಜ್ಯದ ಪ್ರತಿಷ್ಠಿತ ದೇವಾಲಯಗಳಿಗೆ ಬಸ್ಸಿನ ಸೌಕರ್ಯ (Special Bus) ನೀಡಲಾಗಿದೆ. ರಜಾದಿನಗಳಲ್ಲಿ ಈ ಬಸ್ಸುಗಳು ಕಾರ್ಯಾರಂಭಗೊಳ್ಳಲಿದ್ದು ಎರಡು ದಿನಗಳ ಕಾಲ ಕರ್ನಾಟಕದ ಕರಾವಳಿಯ ಪ್ರತಿಷ್ಠಿತ ದೇವಾಲಯಗಳಾದಂತಹ ಕೊಲ್ಲೂರು-ಉಡುಪಿ-ಧರ್ಮಸ್ಥಳ-ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ನಿಮ್ಮನ್ನು ಕರೆದೊಯ್ಯಲಿದೆ‌‌.


    ಧರ್ಮಸ್ಥಳದಲ್ಲಿ ವಾಸ್ತವ್ಯಕ್ಕೆ ಅನುಕೂಲವಿದ್ದು ವಯಸ್ಕರಿಗೆ 800 ರೂಪಾಯಿ ಹಾಗೂ ಮಕ್ಕಳಿಗೆ 600 ರೂಪಾಯಿ ದರದಲ್ಲಿ ನೀವು ಈ ಎಲ್ಲಾ ದೇವಸ್ಥಾನಗಳನ್ನು ಕಡಿಮೆ ವೆಚ್ಚದಲ್ಲಿ  ಆರಾಮವಾಗಿ ದರ್ಶನ ಮಾಡಬಹುದಾಗಿದೆ.


    ಹೀಗಿರಲಿದೆ ವ್ಯವಸ್ಥೆ
    ಮಧ್ಯಾಹ್ನ ಕೊಲ್ಲೂರಿನಲ್ಲಿ ಹಾಗೂ ರಾತ್ರಿ ಧರ್ಮಸ್ಥಳದಲ್ಲಿ ಪುನಃ ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಾಲಯದ ಪ್ರಸಾದ ಭೋಜನ ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ.


    ಇದನ್ನೂ ಓದಿ: Kukke Subramanya: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಚಂಪಾಷಷ್ಠಿಯಲ್ಲಿ ಎಡೆಸ್ನಾನಕ್ಕೆ ಅವಕಾಶ


    ಹೇಗೆ ಬುಕ್ ಮಾಡಬಹುದು?
    ನೀವು ಕೂಡ ಈ ಪ್ರವಾಸದಲ್ಲಿ ಕುಟುಂಬದೊಂದಿಗೆ ದೇವರ ದರ್ಶನ ಪಡೆಯುವ ಆಕಾಂಕ್ಷೆ ಹೊಂದಿದ್ದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಮೂಲಕ ಆನ್ ಲೈನ್ ಬುಕ್ಕಿಂಗ್ ಮಾಡಬಹುದಾಗಿದೆ. ಇಲ್ಲಿ ಕ್ಲಿಕ್ ಮಾಡುವ ಮೂಲಕ ನೀವು ನಿಮ್ಮ ಟಿಕೇಟ್ ಅನ್ನು ಕಾದಿರಿಸಬಹುದಾಗಿದೆ.


    ಇದನ್ನೂ ಓದಿ: Emotional Story: 360 ಕಿಮೀ, 36 ದಿನ; ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೊರನಾಡು ಯುವಕನ 'ಭೀಷ್ಮ'ಪಯಣ


    ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ಸಂಪರ್ಕ ಸಂಖ್ಯೆ
    ಹೆಚ್ಚಿನ ಮಾಹಿತಿಗಾಗಿ 7760991625 ಅಥವಾ 7760991627 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 

    Published by:ಗುರುಗಣೇಶ ಡಬ್ಗುಳಿ
    First published: