ಪ್ರಾಮಾಣಿಕತೆಗೆ ಇನ್ನೊಂದು ಹೆಸರಿದ್ರೆ ಅದು ಸರ್ಕಾರಿ ಬಸ್ ಸಿಬ್ಬಂದಿ ಅನ್ಬಹುದೇನೋ! ಈ ಮಾತಿಗೆ ಸೂಟ್ ಆಗುವಂತೆ ಉತ್ತರ ಕನ್ನಡ ಜಿಲ್ಲೆಯ (Uttara Kannada) ಮುಂಡಗೋಡಿನ ಬಳಿ KSRTC ಕಂಡಕ್ಟರ್ ಮತ್ತು ಡ್ರೈವರ್ ನಡೆದುಕೊಂಡಿದ್ದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಾಪಸ್ ನೀಡಿ ಅದನ್ನ ಸಾಬೀತುಪಡಿಸಿದ್ದಾರೆ. ಬಸ್ನಲ್ಲಿ ಮಹಿಳೆಯೋರ್ವರು ಬಿಟ್ಟು ಹೋಗಿದ್ದ ಬ್ಯಾಗ್ನ್ನ ಕೆಎಸ್ಆರ್ ಟಿಸಿ ಬಸ್ (KSRTC Bus) ಡಿಪೋ ಅಧಿಕಾರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದು ಇದೀಗ ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಹೀಗೆ ಡಿಪೋ ಅಧಿಕಾರಿ ಸಮ್ಮುಖದಲ್ಲಿ ಚಿನ್ನಾಭರಣಗಳನ್ನು ವಾಪಸ್ ನೀಡುತ್ತಿರೋ ಇವ್ರೇ ಪ್ರಾಮಾಣಿಕತೆ ಮೆರೆದ ವಾಯುವ್ಯ ಕರ್ನಾಟಕ ಸಾರಿಗೆ ಸಿಬ್ಬಂದಿ. ಹಾನಗಲ್–ಶಿರಸಿ ಮಾರ್ಗವಾಗಿ ಸಂಚರಿಸುವ ಬಸ್ನಲ್ಲಿ ಕವಿತಾ ಎಂಬ ಮಹಿಳೆಯೋರ್ವರು ಚಿನ್ನಾಭರಣ ಬ್ಯಾಗ್ ಹಿಡಿದು ಹತ್ತಿದ್ದರು. ಆದರೆ ಮರೆತು ಬ್ಯಾಗ್ನ್ನ ಬಸ್ನಲ್ಲೇ ಮರೆತು ಹೋಗಿದ್ದರು.
ಮರೆತೇಹೋಗಿತ್ತು ನೋಡಿ ಚಿನ್ನಾಭರಣ ಇದ್ದ ಬ್ಯಾಗ್
ಆದರೆ ಬಸ್ ಸ್ಟಾಪ್ ನಲ್ಲಿ ಇಳಿಬೇಕಾದರೆ ಕವಿತಾ ಅವ್ರಿಗೆ ತಾನು ತಂದಿದ್ದ ಚಿನ್ನಾಭರಣದ ಬ್ಯಾಗ್ ಮರೆತೇ ಹೋಗಿ ಬೆಳಗಾವಿ ಬಸ್ ಹತ್ತಿ ಮುಂದೆ ಹೋಗಿದ್ದರು.
ಬಸ್ ನಿರ್ವಾಹಕ ಶಿವುಗೆ ಸಿಕ್ತು ಆಭರಣ
ಇನ್ನೇನು ಬಸ್ ನಿರ್ವಾಹಕ ಶಿವು ಗಮನಕ್ಕೆ ಈ ವಿಚಾರ ಬರುತ್ತಲೇ, ಸಿಕ್ಕ ಬ್ಯಾಗ್ನ್ನ ಪರಿಶೀಲಿಸಿದ್ದಾರೆ. ಬ್ಯಾಗ್ನಲ್ಲಿ ಚಿನ್ನಾಭರಣ ಇರುವುದನ್ನ ಮನಗಂಡ ಶಿವು, ಚಾಲಕ ವಿನೋದ್ ರಾಥೋಡ್ ಜೊತೆ ಸೇರಿ ಡಿಪೋಗೆ ಒಪ್ಪಿಸಿದ್ದರು.
ಇದನ್ನೂ ಓದಿ: Uttara Kannada: ಈ ಹೋಟೆಲ್ಗೆ ಮರುಜೀವ ನೀಡಿದ ಕಾಂತಾರ!
ಇನ್ನೇನು ಬೆಳಗಾವಿಗೆ ಹೋಗಿದ್ದ ಮಹಿಳೆ ಮತ್ತೆ ವಾಪಸ್ ಶಿರಸಿಗೆ ಬಂದಿದ್ದಾರೆ. ಡಿಪೋದಲ್ಲಿ ವಿಚಾರಿಸಿದಾಗ ತನ್ನ ಚಿನ್ನಾಭರಣದ ಬ್ಯಾಗ್ ಸೇಫ್ ಆಗಿರೋದು ಗೊತ್ತಾಗಿದೆ. ಕೂಡಲೇ ಡಿಪೋ ಅಧಿಕಾರಗಳು ಕೂಡಾ ಪ್ರಾಮಾಣಿಕತೆ ಮೆರೆದ ಬಸ್ ಸಿಬ್ಬಂದಿಗಳಾದ ಶಿವು ಹಾಗೂ ವಿನೋದ್ ರಾಥೋಡ್ ಸಮ್ಮುಖದಲ್ಲಿ ಚಿನ್ನಾಭರಣಗಳನ್ನ ಹಿಂತಿರುಗಿಸಿದ್ದಾರೆ.
ಬಸ್ ಸಿಬ್ಬಂದಿಗೆ ಸಿಕ್ತು ಕಿರು ಕಾಣಿಕೆ
ಸಾರಿಗೆ ಸಿಬ್ಬಂದಿಗಳ ಈ ಪ್ರಾಮಾಣಿಕತೆಗೆ ತಲೆದೂಗಿದ ಕವಿತಾ ಅವರು, ಬೆಲೆ ಕಟ್ಟಲಾಗದ ಪ್ರಾಮಾಣಿಕತೆಗೆ ಕಿರು ಕಾಣಿಕೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಡಿಪೋ ಅಧಿಕಾರಿ ಕೂಡಾ ತಮ್ಮ ಸಂಸ್ಥೆಯ ಸಿಬ್ಬಂದಿಯ ಈ ಒಳ್ಳೆಯ ಕೆಲಸಕ್ಕೆ ಭೇಷ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: Uttara Kannada: ಶಿರಸಿಯಲ್ಲಿ ಅರಳುತ್ತಿದೆ ಕಾಫಿ! ಅಡಿಕೆ ತೋಟದಲ್ಲಿ ಕೃಷಿಕರ ಪ್ರಯೋಗ
ಅದಕ್ಕೇ ನೋಡಿ, ಚಾಲಕ, ನಿರ್ವಾಹಕ ವರ್ಗದ ಮೇಲೆ ಜನ ಇಟ್ಟಿರೋ ನಂಬಿಕೆ ಎಂದಿಗೂ ಹುಸಿಯಾಗದು ಅನ್ನೋದು. ನಮ್ಮ ಪಯಣ ಮಾತ್ರವಲ್ಲ, ಜೀವನದ ಸುರಕ್ಷತೆಯೂ ಒಮ್ಮೊಮ್ಮೆ ಖಾತ್ರಿ ಪಡಿಸುತ್ತಾ ಅವರು ತೋರುವ ಕರ್ತವ್ಯ ನಿಷ್ಠೆಗೆ ಹ್ಯಾಟ್ಸಾಪ್ ಹೇಳಲೇಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ