ಉತ್ತರ ಕನ್ನಡ: ಅಂಗಳದಲ್ಲಿ ಹೀಗೆ ಬಿಸಿಲಿಗೆ ಒಣಗಲು ಹಾಕಿರೋ ಮುರುಗಲು ಹಣ್ಣು. ಸಿಪ್ಪೆ ಬೇರೆ, ತಿರುಳು ಬೇರೆ ಮಾಡಿ ಬಿಸಿಲಿನ ತಾಪಮಾನಕ್ಕೆ ಅದ್ರ ಸ್ವರೂಪವೇ ಬದಲು. ಮುರುಗಲು ಹಣ್ಣು (Kokum Taste) ತಿನ್ನೋದಕ್ಕೆ ಎಷ್ಟು ರುಚಿಯೋ, ಒಣಗಿದ ನಂತರ ಅದ್ರ ಉಪಯೋಗವೂ ಕಡಿಮೆಯದ್ದಲ್ಲ. ಹೀಗಾಗಿ ಮಲೆನಾಡು, ಕರಾವಳಿಯಲ್ಲಿ ಈ ಮುರುಗಲು (Kokum) ಕೊಯ್ಲು ಸಮಯ ಬಂತು ಅಂದ್ರೆ ಅದ್ರ ಬೆಳೆಗಾರರ ಚಟುವಟಿಕೆ ಬಿರುಸುಗೊಳ್ಳುತ್ತೆ.
ಯೆಸ್, ಈ ಮುರುಗಲು ಹಣ್ಣು ಬೆಳೆಯೋದು ಲಿಂಬೆ ಗಾತ್ರದಲ್ಲಿ. ಪಶ್ಚಿಮ ಘಟ್ಟ, ಮಲೆನಾಡು, ಕರಾವಳಿ ಭಾಗದಲ್ಲಿ ಇದು ಬೆಳೆಯುತ್ತೆ. ಹೆಚ್ಚಾಗಿ ಇದನ್ನ ಪೋಷಿಸದೇ ಹೋದ್ರು ಅದ್ರ ಸೀಸನ್ ಗೆ ಚೆನ್ನಾಗಿ ಫಲ ಕೊಡುವಂತಹ ಗುಣ ಮುರುಗಲು ಹಣ್ಣಿಗಿದೆ.
ಮನೆಯಂಗಳದಲ್ಲಿ ಮುರುಗಲು!
ಈಗಂತೂ ಅದ್ರ ಸೀಸನ್. ಹಾಗಾಗಿ ಮಲೆನಾಡಿನ ಮನೆ ಅಂಗಳದಲ್ಲಿ ಬಿಸಿಲಿನ ತಾಪಮಾನ ಏರುತ್ತಿದ್ದಂತೆ ದಿನವಿಡೀ ಅಂಗಳದಲ್ಲಿ ಮುರುಗಲು ಹಣ್ಣಿನ ಸಿಪ್ಪೆ ಹಾಗೂ ತಿರಳು ಬೇರೆ ಬೇರೆ ಮಾಡಿ ಒಣಗಲು ಹಾಕ್ತಾರೆ.
ಇದನ್ನೂ ಓದಿ: Burude Falls: ಇದು ಅಘನಾಶಿನಿಯ ಅದ್ಭುತ ಸೃಷ್ಟಿ, ಬುರುಡೆ ಫಾಲ್ಸ್ಗೆ ಹೀಗೆ ಹೋಗ್ಬನ್ನಿ
ಆರೋಗ್ಯಕ್ಕೆ ಉತ್ತಮ
ಮುರುಗಲು ಸಿಪ್ಪೆಯಂತೂ ಒಳ್ಳೆಯ ಆರೋಗ್ಯಕರ ಪಾನೀಯದ ಮೂಲ. ಇನ್ನು ಇದರ ತಿರುಳನ್ನು ಆಹಾರ ಪದಾರ್ಥಗಳಿಗೆ ಬಳಸುತ್ತಾರೆ. ಹೀಗಾಗಿ ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯೂ ಇದೆ. ಕೋಳಿ ಪದಾರ್ಥ, ಮೀನು ಪದಾರ್ಥಕ್ಕೆ ಯಥೇಚ್ಛವಾಗಿ ತಿರುಳನ್ನು ಬಳಸಿಕೊಂಡರೆ ಈ ಮುರುಗಲು ಸಿಪ್ಪೆ ಕೋಕಂ ಜ್ಯೂಸ್ ತಯಾರು ಮಾಡಲು ಬಳಕೆಯಾಗುತ್ತದೆ.
ರೇಟು ಹೇಗಿದೆ?
ಈಗ ಸದ್ಯದ ಬೆಲೆ ಮುರುಗಲು ಸಿಪ್ಪೆಗೆ ಕೆಜಿಗೆ 150 ರೂಪಾಯಿ ಹಾಗೂ ತಿರುಳು ಅಥವಾ ಬೀಜಕ್ಕೆ ಕೆಜಿಗೆ 50 ರೂಪಾಯಿಯಂತೆ ಮಾರಾಟವಾಗುತ್ತಿದೆ. ಇಡೀ ಹಣ್ಣಿಗೆ ಪ್ರತ್ಯೇಕ ರೇಟ್ ಹಾಗೂ ಮಾರುಕಟ್ಟೆಯ ಸ್ಥಿತಿ ಪರಿಣಾಮ ಬೀಳುತ್ತದೆ. ಸುಮಾರು 200 ರಿಂದ 250 ರೂಪಾಯಿ ಕೆಜಿಗೆ ಇಡೀ ಹಣ್ಣುಗಳು ದೊರೆಯುತ್ತವೆ.
ಇದನ್ನೂ ಓದಿ: Business Idea: ಬೇಸಿಗೆ ರಜೆ ಬ್ಯುಸಿನೆಸ್! ಮಾವಿನ ಹಣ್ಣು ಮಾರಿ ದಿನಕ್ಕೆ 5 ಸಾವಿರ ದುಡಿಯುವ ಮಕ್ಕಳು
ಆದರೆ ಜಾಸ್ತಿ ಆದ್ಯತೆ ಸಿಪ್ಪೆಗೇ ಇದೆ. ಮುರುಗಲು ತಿರುಳು ಏನಿದ್ದರೂ ಒಂದು ಮಸಾಲೆ ಪದಾರ್ಥವಾಗಿಯೇ ಜನಮಾನಸದಲ್ಲಿ ಬೇರೂರಿದೆ. ಒಟ್ಟಿನಲ್ಲಿ ಮುರುಗಲು ಹಣ್ಣು ಒಳ್ಳೆಯ ಪಾನೀಯವಾಗಿ, ಇನ್ನೊಂದೆಡೆ ಉತ್ತಮ ಆಹಾರ ಪದಾರ್ಥವಾಗಿ, ಆರೋಗ್ಯಕ್ಕೆ ಎನರ್ಜಿ ಡ್ರಿಂಕ್ ಆಗಿ ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮನೆಮಾತಾಗಿದೆ.
ವರದಿ: ಎ. ಬಿ. ನಿಖಿಲ್ ಮುಂಡುಗೋಡು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ