ಕಾರವಾರ: ಭೋರ್ಗರೆಯುವ ಸಮುದ್ರ, ವಿಶಾಲವಾದ ಕಣ್ಮನ ಸೆಳೆಯುವ ಸಮುದ್ರ ತೀರ. ಆಕಾಶದಲ್ಲಿ ರಂಗು ರಂಗಿನ ಗಾಳಿಪಟಗಳ ಹಾರಾಟ! ಎಲ್ಲಿಗೂ ಹೋಗೋದ್ ಬೇಡ, ಇಲ್ಲೇ ಇದ್ದುಬಿಡೋಣ ಅಂತನಿಸೋ ಸಖತ್ ವಾತಾವರಣ. ಇದೆಲ್ಲ ಉತ್ತರ ಕನ್ನಡದ (Uttara Kannada News) ಕಾರವಾರದ ಟ್ಯಾಗೋರ್ ಕಡಲ ತೀರದಲ್ಲಿ (Tagore Beach Karwar) ನಡೆದ ಗಾಳಿಪಟ ಸ್ಪರ್ಧೆಯ (Kite Festival) ಆಕರ್ಷಣೆ.
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ನಡೆಯುತ್ತಿರುವ ಕರುನಾಡ ಕರಾವಳಿ ಉತ್ಸವದ ಅಂಗವಾಗಿ ಗಾಳಿಪಟ ಸ್ಪರ್ಧೆ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
ಬಾನಾಡಿಗಳಂತೆ ಕಂಗೊಳಿಸಿದ ಗಾಳಿಪಟಗಳು!
ಸಂಕಲ್ಪ ಕಮ್ಯೂನಿಕೇಶನ್ ಹಾಗೂ ಕರುನಾಡ ಕರಾವಳಿ ಉತ್ಸವ ಸಮಿತಿ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಿದ್ದವು. ತರಹೇವಾರಿ ಬಣ್ಣದ ವಿವಿಧ ಗಾತ್ರದ ನಾನಾ ಚಿತ್ರ, ವಿನ್ಯಾಸದ ಗಾಳಿಪಟಗಳ ಸೊಬಗು ಕಡಲ ತಡಿಗೆ ಆಗಮಿಸಿದ್ದ ಪ್ರವಾಸಿಗರ ಮನಸೂರೆಗೊಳಿಸಿತು. ಗರುಡ, ಯಕ್ಷಗಾನದ ಅವತಾರ, ಬಾವಲಿ, ಪತಂಗದ ವಿನ್ಯಾಸದ ಗಾಳಿಪಟಗಳು ಸೇರಿದಂತೆ 20ಕ್ಕೂ ಹೆಚ್ಚು ಗಾಳಿಪಟಗಳು ಬಾನಂಗಳದಲ್ಲಿ ಬಾನಾಡಿಗಳಂತೆ ಹಾರಾಡಿದವು.
ಇದನ್ನೂ ಓದಿ: Karwar: ಮೊಟ್ಟೆ ಇಡುವ ಸಮಯ ಬದಲಾಯಿಸಿದ ಕಡಲಾಮೆ!
ಪ್ರಸಿದ್ಧ ಕಲಾವಿದರ ನೇತೃತ್ವ
ಪ್ರಸಿದ್ಧ ಕಲಾವಿದ ದಿನೇಶ್ ಹೊಳ್ಳ ಅವರ ನೇತೃತ್ವದ ಟೀಮ್ ಮಂಗಳೂರಿನ ನುರಿತರು ಗಾಳಿಪಟಗಳನ್ನು ಹಾರಿಸಿ, ಸ್ಥಳೀಯರನ್ನು ಹುರಿದುಂಬಿಸಿದರು. ಮಕ್ಕಳು, ಮಹಿಳೆಯರೆನ್ನದೆ ನೂರಾರು ಜನ ಗಾಳಿಪಟಗಳ ಹಾರಾಟವನ್ನ ಕಣ್ತುಂಬಿಕೊಂಡರು.
ಇದನ್ನೂ ಓದಿ: Sirsi: ಪ್ರಾಣಿಗಳಿಗೂ ಅನಾಥಾಶ್ರಮ! ಶಿರಸಿ ದಂಪತಿಯ ವಿಶಿಷ್ಟ ಸೇವೆ
ಈ ವೇಳೆ ಅತಿ ಹೆಚ್ಚು ಹೊತ್ತು ಆಕಾಶದಲ್ಲಿ ಹಾರಾಡಿದ, ಜಾಗೃತಿ ಮೂಡಿಸುವಂಥ ಗಾಳಿಪಟಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ