ಉತ್ತರ ಕನ್ನಡ: ಮೈದಾನದಲ್ಲಿ ಜಿದ್ದಾಜಿದ್ದಿ. ಸ್ಟೇಡಿಯಂ ತುಂಬಾ ಟೆನ್ಶನ್ನೋ ಟೆನ್ಶನ್ನು. ಅವರು ಗೋಲ್ ಹೊಡೀತಾರೆ ಅಂತ ಇವ್ರು, ಇವ್ರು ಗೋಲ್ ಹೊಡೀತಾರೆ ಅಂತ ಅವ್ರು. ಪೈಪೋಟಿಯಿಂದ ಸೆಣಸಾಡೋ ಹುಡುಗಿಯರಿಗೆ ಸಖತ್ ಸಪೋರ್ಟ್ ಮಾಡೋ ಆಡಿಯೆನ್ಸು. ಇದೆಲ್ಲವೂ ಫುಟ್ಬಾಲ್ ಕಾಲ್ಚೆಂಡಿನ (Football League) ಚಳಕದ ಗೇಮ್ನ ಝಲಕ್. ಹೌದು, ಅತ್ತ ಕತಾರ್ನಲ್ಲಿ ಫಿಫಾ ವಿಶ್ವಕಪ್ (FIFA World Cup 2023) ನಡೆಯುತ್ತಿದ್ದರೆ, ಇತ್ತ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ (Uttara Kannada Haliyal) 17 ವರ್ಷದೊಳಗಿನ ಬಾಲಕಿಯರ ಫುಟ್ಬಾಲ್ ಫೀವರ್ (Football Fever) ಜೋರಾಗಿದೆ.
ಬಾಲಕಿಯರ ಫುಟ್ಬಾಲ್ ಫೀವರ್
ಲೀಗ್ ಮಾದರಿಯ ಈ ಕೂಟದ ಮೂಲಕ ಭವಿಷ್ಯದ ಕ್ರೀಡಾಳುಗಳನ್ನು ತಯಾರು ಮಾಡುತ್ತಿರುವ ಖೇಲೋ ಇಂಡಿಯಾ, ಕಾಲ್ಚೆಂಡಿನ ಚಾಲಾಕಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.
ಇದನ್ನೂ ಓದಿ: E- Kart: ರೈತರ ಭಾರ ಕಡಿಮೆ ಮಾಡುತ್ತೆ ಈ ಗಾಡಿ
ಲೀಗ್ ಮಾದರಿ ಪಂದ್ಯಾವಳಿ
ರಾಜ್ಯದ ವಿವಿಧ ವಲಯಗಳ ಒಟ್ಟು ಆರು ತಂಡಗಳು ಹತ್ತು ಪಂದ್ಯಗಳನ್ನು ಆಡಲಿದ್ದು, ಗೆದ್ದ ತಂಡವು ಮುಂದೆ ಮತ್ತೊಂದು ಸುತ್ತಿಗೆ ತೇರ್ಗಡೆಯಾಗಲಿದೆ. ಹೀಗಾಗಿ ಮುಂದೊಂದು ದಿನ ರಾಷ್ಟ್ರೀಯ ತಂಡಕ್ಕೂ ಕರೆದೊಯ್ಯಬಹುದಾದ ಈ ಲೀಗ್ ಪಂದ್ಯದಲ್ಲಿ ತೀವ್ರ ಸೆಣಸಾಟ ಕಂಡು ಬಂತು.
ಇದನ್ನೂ ಓದಿ: Positive Story: ಬ್ರಿಟೀಷರ ವಿರುದ್ಧ ಹೋರಾಡಿ ದೇವರಾದ ಹಿಂದೂ-ಮುಸ್ಲಿಂ ಗೆಳೆಯರು, ಅಕ್ಕಪಕ್ಕದಲ್ಲೇ ಇದೆ ದೇವಸ್ಥಾನ
ಸಾಟಿಯಿಲ್ಲದ ಫೀಮೇಲ್ ಫುಟ್ಬಾಲ್!
ಸದ್ಯ ಹಳಿಯಾಳದ ಮೈದಾನ ತುಂಬಾ ಬಾಲಕಿಯರ ಫುಟ್ಬಾಲ್ನದ್ದೇ ಸದ್ದು. ಜಿಂಕೆಯಂತೆ ಚೆಂಡಿನ ಹಿಂದಿನ ಓಡಾಡಿ ಗೋಲ್ಗಳಿಸೋ ಸ್ಪಿರಿಟ್ ನೋಡ್ತಿದ್ರೆ, ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದೆ. ಈ ಮೂಲಕ ಫುಟ್ಬಾಲ್ ಆಟದಲ್ಲೂ ಹೆಣ್ಮಕ್ಕಳು ಕಮ್ಮಿ ಇಲ್ಲ ಅನ್ನೋದನ್ನ ಯುವತಿಯರು ತಮ್ಮ ಗೇಮ್ ಮೂಲಕ ಸಾಬೀತುಪಡಿಸುತ್ತಿದ್ದಾರೆ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ