• Home
  • »
  • News
  • »
  • uttara-kannada
  • »
  • Khapri God: ಮದ್ಯ, ಸಿಗರೇಟು ಇವೇ ಖಾಫ್ರಿ ದೇವರ ನೈವೇದ್ಯ! ಜೋಯ್ಡಾದಲ್ಲಿ ಜಾತ್ರೆ

Khapri God: ಮದ್ಯ, ಸಿಗರೇಟು ಇವೇ ಖಾಫ್ರಿ ದೇವರ ನೈವೇದ್ಯ! ಜೋಯ್ಡಾದಲ್ಲಿ ಜಾತ್ರೆ

ಖಾಪ್ರಿ ದೇವರು

ಖಾಪ್ರಿ ದೇವರು

ಇವೆರಡು ದೈವಗಳಿಗೂ ಕೂಡ ಕುಣಬಿ ಪಂಗಡದ ಆರಾಧ್ಯ ದೈವಗಳಾಗಿದ್ದು ಕಂಬಳಿ ಕೊಟ್ಟರೆ ಕೇಳಿದ್ದನ್ನು ಕೊಡುವ ದೈವಗಳು ಎಂದು ಹೆಸರಾಗಿವೆ.

  • News18 Kannada
  • Last Updated :
  • Uttara Kannada, India
  • Share this:

    ಉತ್ತರ ಕನ್ನಡದ (Uttara Kannada) ಜೋಯಿಡಾ ತಾಲೂಕು ಹಲವು ವಿಶೇಷತೆಗಳನ್ನೊಳಗೊಂಡಿದೆ. ಜೋಯಿಡಾದಲ್ಲಿ  (Joida) ಈಗ ಜಾತ್ರೆಗಳ ಸೀಸನ್ ಶುರುವಾಗಿದೆ. ಜೋಯಿಡಾದ ಮೊದಲ ಜಾತ್ರೆ ಖಾಫ್ರಿ ದೇವರ ಜಾತ್ರೆ‌. ಸಾಂಸ್ಕೃತಿಕವಾಗಿ ಕುಣಬಿ ಸಮುದಾಯದ ಪ್ರಮುಖ ಆಚರಣೆಗಳು ಇಲ್ಲಿ ಸಿಂಹಪಾಲನ್ನು ಪಡೆದುಕೊಂಡಿವೆ. ಖಾಫ್ರಿ ದೈವ (Khapri God Temple Joida) ಎಂಬುದು ಈ ಜೋಯಿಡಾ ಭಾಗದ ಸ್ಥಳೀಯ ದೈವ ಮದ್ಯ, ಸಿಗರೇಟು,ಕಂಬಳಿಯನ್ನು ನೈವೇದ್ಯವಾಗಿ ಸ್ವೀಕರಿಸುವ ಖಾಫ್ರಿ ದೈವವು ಮನೆಯ ಹಿರಿಯ ಸದಸ್ಯನಂತೆಯೇ ಕುಣಬಿಗಳ ಸಮುದಾಯದಲ್ಲಿ ಪರಿಗಣಿಸಲ್ಪಡುತ್ತದೆ‌. ತುಳಸಿ ಕಾರ್ತಿಕದ ಮಾರನೆಯ ದಿನ ಅಂದರೆ ತ್ರಯೋದಶಿಯಂದು ಈ ದೈವಗಳ ಜಾತ್ರೆ ಶುರುವಾಗುವುದು ಹಾಗೂ ಜೋಯಿಡಾದಲ್ಲಿ ಈ ಜಾತ್ರೆಗೆ ಬಹಳ ಪ್ರಾಧಾನ್ಯತೆ.


    ಖಾಫ್ರಿಯ ಜೊತೆ ಇನ್ನೊಂದು ಹೆಣ್ಣು ದೈವ ಜಲ್ಮಿಯು ಕೂಡ ಇದ್ದು ತುಳುನಾಡಿನ ಕಾರ್ಣಿಕ ದೈವಗಳ ಹಾಗೆ ಇವುಗಳೂ ಕಾರ್ಣಿಕ ದೈವಗಳಾಗಿವೆ.




    ಈ ಜಾತ್ರೆಯ ವಿಶೇಷವೇನೆಂದರೆ ಖಾಫ್ರಿ ಹಾಗೂ ಜಲ್ಮಿ ಎಂಬ ಎರಡು ದೈವಗಳು ಚೆಂಡು ಹೂವು ಹಾಗೂ ಕಂಬಳಿಯಿಂದ ಅಲಂಕೃತವಾಗಿ ತುಳಸಿಕಟ್ಟೆ ಮುಂದೆ ಪೂಜೆಗೊಳ್ಳುತ್ತವೆ‌.
    ಇವೆರಡು ದೈವಗಳಿಗೂ ಕೂಡ ಕುಣಬಿ ಪಂಗಡದ ಆರಾಧ್ಯ ದೈವಗಳಾಗಿದ್ದು ಕಂಬಳಿ ಕೊಟ್ಟರೆ ಕೇಳಿದ್ದನ್ನು ಕೊಡುವ ದೈವಗಳು ಎಂದು ಹೆಸರಾಗಿವೆ.




    ಜಾತ್ರೆಯ ವಿಧಿ ವಿಧಾನ ಸೇರಿದಂತೆ ಎಲ್ಲವೂ ಕೂಡ ಕೊಂಕಣಿ ಭಾಷೆಯಲ್ಲಿಯೇ ನಡೆಯುವುದು ವಿಶೇಷ, ದೈವಗಳು ಆವೇಶವಾಗಿ ಕೊಂಕಣಿಯಲ್ಲೇ ನುಡಿಕೊಡುತ್ತವೆ.
    ಕಾರವಾರ,ದಾಂಡೇಲಿ, ಗೋವಾ, ಮಹಾರಾಷ್ಟ್ರದಿಂದ ಸಾಕಷ್ಟು ಜನ ಇಲ್ಲಿಗೆ ದೈವಗಳನ್ನು ಕಾಣಲು ಬರುತ್ತಾರೆ.


    ಇದನ್ನೂ ಓದಿ: Hanuman Tree: ಮರದಲ್ಲಿ ಮೂಡಿದ ಮಾರುತಿ! ಉತ್ತರ ಕನ್ನಡದ ವಿಡಿಯೋ ವೈರಲ್




    ಕಂಬಳಿಗೆ ಈ ಸೀಸನ್ ನಲ್ಲಿ ವಿಶೇಷ ಬೇಡಿಕೆಯಿದ್ದು ಜೋಯಿಡಾದ ಪೇಟೆ ತುಂಬಾ ಬರೀ ಕಂಬಳಿಯೇ ಕಾಣಸಿಗುತ್ತದೆ.


    ಇದನ್ನೂ ಓದಿ: Dolphin Viral Video: ಡಾಲ್ಫಿನ್​ಗಳ ಹೈಜಂಪ್ ಸ್ಪರ್ಧೆ! ಕಣ್ಣಿಗೆ ಮಜವೋ ಮಜ!




    ಚೆಂಡುಹೂವು ಈ ದೈವಗಳಿಗೆ ಪ್ರಿಯವಾದದ್ದು ಜನ ಚೆಂಡು ಹೂವು ಕೊಟ್ಟು ಅಲಂಕರಿಸಿ ಆಶೀರ್ವಾದ ಪಡೆಯುತ್ತಾರೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: