Uttara Kannada: ಒಂದೇ ವೇದಿಕೆಯಲ್ಲಿ ಹತ್ತಾರು ಕಲಾ ವೈಭವ! ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ಸಾಂಸ್ಕೃತಿಕ ವೈಭವ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಉತ್ತರ ಕನ್ನಡದ ಹೊನ್ನಾವರದಲ್ಲಿ ಕೆರೆಮನೆ ನಾಟ್ಯೋತ್ಸವವು ವಿಜೃಂಭಣೆಯಿಂದ ನಡೆಯಿತು. ಒಂದೇ ವೇದಿಕೆಯಲ್ಲಿ ಹಲವು ಕಲಾ ಪ್ರಕಾರಗಳ ಪ್ರದರ್ಶನ ರಸಿಕರ ಕಣ್ಮನ ಸೆಳೆಯಿತು.

 • News18 Kannada
 • 4-MIN READ
 • Last Updated :
 • Uttara Kannada, India
 • Share this:

  ಉತ್ತರ ಕನ್ನಡ: ಕಥಕ್ಕಳಿ, ಕಥಕ್, ಭರತನಾಟ್ಯ, ಕೂಚುಪುಡಿ ಹೀಗೆ ಎಲ್ಲ ಪ್ರಕಾರದ ನೃತ್ಯರೂಪಕಗಳು. ಯಕ್ಷಗಾನದಿಂದ (Yakshagana) ಹಿಡಿದು ವಿವಿಧ ಬಗೆಯ ಕಾರ್ಯಕ್ರಮಗಳು. ಹೀಗೆ ಒಂದೇ ವೇದಿಕೆಯಲ್ಲಿ ಮೂಡಿಬಂದವು ಭಿನ್ನ ವಿಭಿನ್ನ ಸಾಂಸ್ಕೃತಿಕ ರೂಪಕಗಳು. ಹಾಗಿದ್ರೆ ಇದು ನಡೆದಿದ್ದು ಎಲ್ಲಿ ಅಂತೀರಾ ಹೇಳ್ತೀವಿ ನೋಡಿ.


  ರಾಷ್ಟ್ರೀಯ ನಾಟ್ಯೋತ್ಸವ
  ಯೆಸ್, ಉತ್ತರ ಕನ್ನಡದ ಕೆರೆಮನೆ ಅಂದ್ರೇನೆ ನೆನಪಾಗೋದು ಯಕ್ಷಗಾನ ಲೋಕದ ಜೊತೆಗೆ ಆ ಕುಟುಂಬ ಹೊಂದಿದ್ದ ನಂಟು. ಅಂತಹ ಕೆರೆಮನೆ ವತಿಯಿಂದ, ಇಡಗುಂಜಿ ಯಕ್ಷಗಾನ ಮಂಡಳಿಯ ಸಹಯೋಗದಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವು ನಡೆಯಿತು.


  ವಿವಿಧ ಕಲಾಪ್ರಕಾರ
  ಹೊನ್ನಾವರದ ಗುಣವಂತೆಯಲ್ಲಿರುವ ಶ್ರೀಮಯ ಯಕ್ಷಗುರುಕುಲದಲ್ಲಿ ನಡೆದ ನಾಟ್ಯೋತ್ಸವದಲ್ಲಿ ದೇಶದ ವಿವಿಧ ಬಗೆಯ ಕಲಾ ಪ್ರಕಾರಗಳು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಸಿಕ್ಕಿತು. ಕಲಾ ರಸಿಕರಂತೂ ಈ ಅವಕಾಶವನ್ನ ಮಿಸ್ ಮಾಡದೇ ಕಣ್ತುಂಬಿಕೊಂಡರು. ನಾಟ್ಯೋತ್ಸವದಲ್ಲಿ ಕಥಕ್ಕಳಿ, ಕಥಕ್, ಭರತನಾಟ್ಯ, ಕೂಚುಪುಡಿ, ನೃತ್ಯರೂಪಕ, ವಿದೇಶಿ ಬುಡಕಟ್ಟು ನೃತ್ಯ ಸೇರಿದಂತೆ ಹಲವು ವಿಧಧ ನೃತ್ಯ ಕಲೆಗಳ ಪ್ರದರ್ಶನ ನಡೆಯಿತು.


  ಇದನ್ನೂ ಓದಿ:HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!
  ಅನಂತ್ ನಾಗ್ ಅವರಿಗೆ ಪ್ರಶಸ್ತಿ ಪ್ರದಾನ
  ಇನ್ನು ಐದು ದಿವಸಗಳ ಕಾಲ ನಡೆದ ಈ ನಾಟ್ಯೋತ್ಸವದ ಮೊದಲ ದಿನ ಖ್ಯಾತ ನಟ ಅನಂತ್ ನಾಗ್ ಅವರಿಗೆ ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
  ಕಾರ್ಯಕ್ರಮಕ್ಕೆ ಕೇರಳ, ತಮಿಳುನಾಡು, ಆಂಧ್ರ ಸೇರಿದಂತೆ ಹಲವು ರಾಜ್ಯದ ನೃತ್ಯ ಕಲಾವಿದರು ಮೆರುಗು ತುಂಬಿದರು.


  ಇದನ್ನೂ ಓದಿ: Aghanashini Aarti: ಕಾಶಿಯ ಗಂಗಾರತಿಯಂತೆಯೇ ಕುಮಟಾದಲ್ಲಿ ನಡೆಯಿತು ಅಘನಾಶಿನಿ ಆರತಿ!


  ಒಟ್ಟಿನಲ್ಲಿ ಒಂದೇ ವೇದಿಕೆಯಲ್ಲಿ ವಿವಿಧ ದೇಶದ ಕಲಾ ಪ್ರಕಾರಗಳನ್ನ ಕಣ್ತುಂಬಿಕೊಳ್ಳುವ ಅವಕಾಶ ಹೊನ್ನಾವರ ಜನತೆಗೆ ಸಿಕ್ಕಿದ್ದು ಅದೃಷ್ಟವೇ ಸರಿ.

  Published by:ಗುರುಗಣೇಶ ಡಬ್ಗುಳಿ
  First published: