ಉತ್ತರ ಕನ್ನಡ: ಕೆಸರು ತುಂಬಿದ ಕೆರೆಯಲ್ಲಿ ಬಿದಿರ ಕುಣಿಯನ್ನ ಹಿಡಿದು ಮೀನಿನ ಬೇಟೆಯಾಡ್ತಿರೋ ಊರವರು. ಇನ್ನೊಂದೆಡೆ ದೊಡ್ಡದಾದ ಮೀನು ಸಿಕ್ಕ (Fish Hunting) ಖುಷಿಯಲ್ಲಿ ಯುವಕರು. ನೀರು-ಕೆಸರು ಲೆಕ್ಕಿಸದೇ ಕೆರೆಯೊಳಗೆ ದಾಪುಗಾಲು ಇಟ್ಟು, ಒಬ್ಬರಿಗಿಂತ ಇನ್ನೊಬ್ಬರು ಬೇಟೆಯಾಡುವುದಕ್ಕೆ (Kere Bete) ಪೈಪೋಟಿ ನಡೆಸಿದ ದೃಶ್ಯವಂತೂ ರೋಚಕವಾಗಿತ್ತು.
ಈ ಎಲ್ಲ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡದ ಶಿರಸಿಯ ಬನವಾಸಿ ಭಾಗದ ಮಧುರವಳ್ಳಿಯಲ್ಲಿ. ಅಲ್ಲಿ ನಡೆದ ಸಾಂಪ್ರದಾಯಿಕ ಕೆರೆ ಬೇಟೆಯಿಂದ ಇಡೀ ಹಾಡಲಗಿಯ ದೊಡ್ಡ ಕೆರೆಯು ಅದ್ಯಾವುದೋ ಕೆಸರು ಗದ್ದೆ ಕ್ರೀಡಾಕೂಟದಂತಾಗಿತ್ತು.
ಬಿದಿರಿನಿಂದ ಮಾಡಿದ ಕೊಳವೆ ಆಕಾರದ ಕುಣಿಯನ್ನು ಬೋರಲಾಗಿಸಿ ಮೀನು ಹಿಡಿಯಲಾಗುತ್ತೆ. ಹೀಗೆ ಯುವಕರೆಲ್ಲ ಗೌರಿ, ಬಾಂಬೆ,ಕಾಟ್ಲಾ, ಕೊರವಿಯಂತಹ ಮೀನುಗಳನ್ನು ಹಿಡಿದು ಕೇಕೆ ಹಾಕಿದ್ರು.
2 ಲಕ್ಷ ಮೀನುಗಳು!
ಮಧುರವಳ್ಳಿಯಲ್ಲಿ ಕಳೆದ 10 ವರ್ಷಗಳಿಂದ ಇಂತಹದ್ದೊಂದು ಸಂಭ್ರಮ ನಡೆದಿರಲಿಲ್ಲ. ಈಚೆಗೆ ಕೆರೆಬೇಟೆಗಾಗಿ ಆಸಕ್ತರ ತಂಡವೊಂದು ಹೋದ ವರ್ಷ 2 ಲಕ್ಷ ಮೀನಿನ ಮರಿಗಳನ್ನು ಕೆರೆಗೆ ಬಿಟ್ಟಿತ್ತು.
ಇದನ್ನೂ ಓದಿ: Business Idea: ಬೇಸಿಗೆ ರಜೆ ಬ್ಯುಸಿನೆಸ್! ಮಾವಿನ ಹಣ್ಣು ಮಾರಿ ದಿನಕ್ಕೆ 5 ಸಾವಿರ ದುಡಿಯುವ ಮಕ್ಕಳು
ಸಹಜವಾಗಿ ನೀರು ಬತ್ತುವ ಈ ಕೆರೆಯಲ್ಲಿ ಈ ವರ್ಷ ಬೇಟೆ ಆಯೋಜಿಸಲಾಯಿತು. ಅಂದು ಪುಟ್ಟ ಪುಟ್ಟ ಮರಿಗಳಾಗಿದ್ದ ಮೀನುಗಳು ಇಂದು ದೊಡ್ಡ ಗಾತ್ರಕ್ಕೆ ಬೆಳೆದಿದ್ದು ಕೆರೆ ಬೇಟೆ ಇಳಿದವರ ಸಂಭ್ರಮ ಇಮ್ಮಡಿಗೊಳಿಸಿತ್ತು.
ಬಿಸಿಲ ಲೆಕ್ಕಿಸದೇ ಮೀನಿನ ಬೇಟೆ
ಸುತ್ತಮುತ್ತಲಿನ ಎಲ್ಲಾ ಹಳ್ಳಿಯ ಜನ ಮೀನಿನ ಬೇಟೆಯಲ್ಲಿ ಪಾಲ್ಗೊಂಡು ಕೈಗೆ ಸಿಕ್ಕಷ್ಟು ಮೀನನ್ನು ಬಾಚಿಕೊಂಡರು. ಒಟ್ಟಿನಲ್ಲಿ ಬಿಸಿಲ ಝಳವನ್ನು ಲೆಕ್ಕಿಸದೇ ಕೆರೆ ಬೇಟೆಗಿಳಿದರು.
ಇದನ್ನೂ ಓದಿ: Leaf Helmet: ನೇರಳೆ ಮರದ ಎಲೆಯಿಂದ ಹೆಲ್ಮೆಟ್! ಇದರಿಂದ ತಲೆ ಆಗುತ್ತೆ ಕೂಲ್
ಕೆಸರು ಅಂತಾನೂ ನೋಡ್ದೇ ಮೀನುಗಳನ್ನು ಭರ್ಜರಿಯಾಗಿ ಬೇಟೆಯಾಡಿದ್ರು. ಹೀಗೆ ಬೇಸಿಗೆಯಲ್ಲಿ ಒಳ್ಳೆ ಆಟ, ಜೊತೆಗೊಂದೊಷ್ಟು ರುಚಿಯಾದ ಊಟ ಕೆರೆಬೇಟೆ ದಿನದ ಸ್ಪೆಷಲ್ ಅಂದ್ರೆ ತಪ್ಪಾಗದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ