• Home
 • »
 • News
 • »
 • uttara-kannada
 • »
 • Positive Story: ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಯಾತ್ರೆ! ಇವರ ಸಾಹಸ ನೀವೇ ನೋಡಿ

Positive Story: ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಯಾತ್ರೆ! ಇವರ ಸಾಹಸ ನೀವೇ ನೋಡಿ

X
ಇವರ ಸಾಹಸ ಇಲ್ಲಿದೆ ನೋಡಿ

"ಇವರ ಸಾಹಸ ಇಲ್ಲಿದೆ ನೋಡಿ"

ಅಂದಹಾಗೆ ಈ ಸ್ಕೇಟಿಂಗ್ ಯಾತ್ರೆ 30 ರಾಜ್ಯಗಳ, 100 ನಗರಗಳಲ್ಲಿ ಹಾದುಹೋಗಲಿದೆ. ದಾರಿಯುದ್ದಕ್ಕೂ ಜಾಗೃತಿಗಾಗಿ ಕರಪತ್ರಗಳನ್ನು ಹಂಚಲಾಗುತ್ತಿದೆ.

 • Share this:

  ರಸ್ತೆ ಬದಿ ನೀಟಾಗಿ ಸ್ಕೇಟಿಂಗ್ ಮಾಡ್ತಾ ಸಾಗಿರೋ ಮಹಿಳೆಯರು. ದೇಶ ಪರ್ಯಟನೆಗೆ ಹೊರಟಿರೋ ಉತ್ಸಾಹಿ ಚಿಲುಮೆಗಳು. ಪಾದಯಾತ್ರೆ, ಸೈಕಲ್ ಯಾತ್ರೆಗಳನ್ನ ನೀವು ಕೇಳಿರಬಹುದು, ನೋಡಿರಬಹುದು. ಆದ್ರೆ ಕಾಲಿಗೆ ಚಕ್ರ ಕಟ್ಟಿಕೊಂಡು ಸ್ಕೇಟಿಂಗ್ ಮಾಡ್ತಾ (Skating)  ಊರೂರು ಸುತ್ತಿರೋದನ್ನ ಎಲ್ಲಾದ್ರು ಕೇಳಿದ್ರಾ? ಹೀಗೊಂದು ತಂಡ ಪರ್ಯಟನೆಗೆ (Skating Jatha) ಹೊರಟಿದೆ. ಅದು ಕೂಡ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ (Kashmir To Kanyakumari Skating) ಅಂತಂದ್ರೆ ನೀವು ನಂಬಲೇಬೇಕು.


  ಬಡಜನರ, ಮಹಿಳೆಯರ ಸಬಲೀಕರಣಕ್ಕಾಗಿ, ಸರಕಾರದ ಯೋಜನೆಗಳನ್ನು ತಲುಪಿಸುವುದಕ್ಕಾಗಿ ತಂಡವೊಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸ್ಕೇಟಿಂಗ್ ಜಾಥಾ ಹೊರಟಿದೆ. ಅತುಲ್ಯ ಭಾರತ ಅನ್ನೋ 20 ಮಂದಿಯ ತಂಡವು ಕಾಶ್ಮೀರದಿಂದ ಹೊರಟು ಕನ್ಯಾಕುಮಾರಿ ತಲುಪುವ ಗುರಿ ಹೊಂದಿದೆ.


  3,700 ಕಿಲೋಮೀಟರ್ ಕ್ರಮಿಸಿರುವ ತಂಡ!
  ಈ ತಂಡ ಈಗಾಗಲೇ ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ, ಗೋವಾ ರಾಜ್ಯಗಳನ್ನು ದಾಟಿ ಕರ್ನಾಟಕ ತಲುಪಿದೆ. 10 ಮಹಿಳೆಯರು ಹಾಗೂ 10 ಪುರುಷರನ್ನೊಳಗೊಂಡ ತಂಡ ಈಗಾಗಲೇ ರಾಜಸ್ಥಾನ್, ಗುಜರಾತ್, ಮಹಾರಾಷ್ಟ್ರ, ಗೋವಾ ಮೂಲಕ 3,700 ಕಿಲೋ ಮೀಟರ್ ಕ್ರಮಿಸಿ ಕರ್ನಾಟಕದ ಕಾರವಾರ ತಲುಪಿದೆ.  ಪ್ರಯಾಣದಲ್ಲಿ ಸಿಗೋ ಹಳ್ಳಿಗಳಲ್ಲಿ ರಕ್ತಹೀನತೆ, ಅಪೌಷ್ಠಿಕತೆ, ಮಹಿಳಾ ಶಿಕ್ಷಣ ಸೇರ್ದಂತೆ ಹತ್ತು ಹಲವು ವಿಷಯಗಳ ಕುರಿತು ಜಾಗೃತಿಯನ್ನೂ ಮೂಡಿಸ್ತಿದೆ.


  ಇದನ್ನೂ ಓದಿ: Manjguni Temple: ಅಕ್ಷರಶಃ ವೈಕುಂಠವಾದ ಕರ್ನಾಟಕದ ತಿರುಪತಿ, 708 ವರ್ಷಗಳ ನಂತರ ಮತ್ತೆ ಭೂದಾನ


  30 ರಾಜ್ಯಗಳ, 100 ನಗರಗಳಲ್ಲಿ ಹಾದುಹೋಗುತ್ತಿರುವ ಸ್ಕೇಟರ್ಸ್
  ಅಂದಹಾಗೆ ಈ ಸ್ಕೇಟಿಂಗ್ ಯಾತ್ರೆ 30 ರಾಜ್ಯಗಳ, 100 ನಗರಗಳಲ್ಲಿ ಹಾದುಹೋಗಲಿದೆ. ದಾರಿಯುದ್ದಕ್ಕೂ ಜಾಗೃತಿಗಾಗಿ ಕರಪತ್ರಗಳನ್ನು ಹಂಚಲಾಗುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಸ್ಕೇಟಿಂಗ್ ಮೂಲಕವೇ ತೆರಳುವ ತಂಡ, ಸಂಜೆ ಒಂದೆಡೆ ತಂಗಿ ಬೆಳಿಗ್ಗೆ ಪುನಃ ಯಾತ್ರೆ ಮುಂದುವರಿಸುತ್ತೆ. ಧಾರ್ಮಿಕ, ಐತಿಹಾಸಿಕ ಪರಂಪರೆಯ ಪ್ರವಾಸಿ ಸ್ಥಳಗಳಿಗೂ ಭೇಟಿ ನೀಡಿ ಪರಿಸರ ಜಾಗೃತಿಗಾಗಿ ಅಂಗವಾಗಿ ಒಂದು ಲಕ್ಷ ಗಿಡಗಳನ್ನು ನೆಡುತ್ತಿದೆ.


  ಇದನ್ನೂ ಓದಿ: Success Story: ಕಿರಾಣಿ ಅಂಗಡಿ ಮಾಲೀಕ ವೇಟ್ ಲಿಫ್ಟಿಂಗ್​ನಲ್ಲಿ ಬಂಗಾರಕ್ಕೆ ಮುತ್ತಿಟ್ರು!


  ಒಟ್ಟಿನಲ್ಲಿ ಸದುದ್ದೇಶದಿಂದ ದೇಶ ಪರ್ಯಟನೆಗೆ ಹೊರಟಿರೋ ಈ ಸ್ಕೇಟಿಂಗ್ ತಂಡ ಪ್ರಶಂಸೆಗೆ ಪಾತ್ರವಾಗಿದೆ. ಹಲವು ಸಂಘಟನೆಗಳು ಈ ತಂಡಕ್ಕೆ ಬೆಂಬಲ ನೀಡಿವೆ. ಇವರ ಈ ಜಾಗೃತಿ ಜಾಥಾವು ಯಶಸ್ವಿಯಾಗಲಿ ಅಂತ ಹಾರೈಸೋಣ ಅಲ್ವಾ?


  ವರದಿ: ದೇವರಾಜ್ ನಾಯ್ಕ್, ಕಾರವಾರ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು