• Home
 • »
 • News
 • »
 • uttara-kannada
 • »
 • Beach Volleyball: ಕಾಸರಕೋಡು ಕಡಲಲ್ಲಿ ವಾಲಿಬಾಲ್ ಪಂದ್ಯಾಟ!

Beach Volleyball: ಕಾಸರಕೋಡು ಕಡಲಲ್ಲಿ ವಾಲಿಬಾಲ್ ಪಂದ್ಯಾಟ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಒಂದೊಂದು ಸ್ಮ್ಯಾಶ್ ಹೊಡೆತ ಬೀಳುತ್ತಲೇ ಜನ ಹುರಿದುಂಬಿಸ್ತಿದ್ರು. ಕರ್ನಾಟಕ ತಂಡ ಆಟಕ್ಕಿಳಿದಾಗ ಕತ್ತಲಲ್ಲೂ ಜನರ ಕೇಕೆ ಮುಗಿಲು ಮುಟ್ಟಿದ್ದವು.

 • Share this:

  ಕಾರವಾರ: ಕತ್ತಲು ಆವರಿಸ್ತಿದ್ದಂತೆ ವಾಲಿಬಾಲ್ ಚೆಂಡಿನ ಸದ್ದು. ಬೀಸುವ ತಂಗಾಳಿ, ಕಡಲ ಅಲೆಗಳ ಅಬ್ಬರವನ್ನೂ ಮೀರಿಸಿದ ಆಟದ ವೈಖರಿ. ಕರ್ನಾಟಕದ ಬ್ಲೂ ಫ್ಲ್ಯಾಗ್ ಬೀಚ್​ನಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ! ಇದುವೇ ನೋಡಿ ಬೀಚ್ ವಾಲಿಬಾಲ್ ಸಂಭ್ರಮ. ಹೌದು, ಉತ್ತರ ಕನ್ನಡ ಜಿಲ್ಲೆಯ (Uttara Kannada)  ಹೊನ್ನಾವರದ ಕಾಸರಕೋಡು ಸಮುದ್ರ ತೀರದಲ್ಲಿ (Kasarkod Beach Volleyball Tournament) ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದ ವೈಭವವಿದು.


  ಕ್ರೀಡಾ ಇಲಾಖೆ ಆಯೋಜಿಸಿರುವ ವಾಲಿಬಾಲ್ ಪಂದ್ಯದಲ್ಲಿ 8 ರಾಜ್ಯದ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಪುರುಷರ ಹಾಗೂ ಮಹಿಳೆಯರ ಎರಡೂ ವಿಭಾಗದಲ್ಲೂ ಪಂದ್ಯಾಟ ನಡೀತು. ತಮಿಳುನಾಡು, ಗೋವಾ, ಪಾಂಡಿಚೇರಿ, ತೆಲಂಗಾಣ ಮುಂತಾದ ರಾಜ್ಯಗಳಿಂದಲೂ ಆಟಗಾರರು ಆಗಮಿಸಿದ್ದರು.


  ಇದನ್ನೂ ಓದಿ: Uttara Kannada: ಜಬರ್ದಸ್ತ್ ಹೋರಿ ಬೆದರಿಸೋ ಸ್ಪರ್ಧೆ! ನೋಡೋರ ಎದೆಯಲ್ಲೂ ಗಢಗಢ!


  ಒಂದೊಂದು ಸ್ಮ್ಯಾಶ್ ಹೊಡೆತ ಬೀಳುತ್ತಲೇ ಹುರಿದುಂಬಿಸಿದ ಪ್ರೇಕ್ಷಕರು!
  ಹೊನಲು ಬೆಳಕಿನ ಈ ಪಂದ್ಯಾಟವನ್ನ ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಒಂದೊಂದು ಸ್ಮ್ಯಾಶ್ ಹೊಡೆತ ಬೀಳುತ್ತಲೇ ಜನ ಹುರಿದುಂಬಿಸ್ತಿದ್ರು. ಕರ್ನಾಟಕ ತಂಡ ಆಟಕ್ಕಿಳಿದಾಗ ಕತ್ತಲಲ್ಲೂ ಜನರ ಕೇಕೆ ಮುಗಿಲು ಮುಟ್ಟಿದ್ದವು.


  ಇದನ್ನೂ ಓದಿ: Success Story: 70 ವರ್ಷದ ಈ ಡಿಪ್ಲೋಮಾ ಸ್ಟೂಡೆಂಟ್ ರಾಜ್ಯಕ್ಕೇ ಫಸ್ಟ್!


  ಸಮುದ್ರ ತೀರಕ್ಕೆ ಹೊಸ ಕಳೆ!
  ಒಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ಬೀಚ್ ವಾಲಿಬಾಲ್ ಪಂದ್ಯಾಟವು ಬ್ಲ್ಯೂ ಫ್ಲ್ಯಾಗ್ ಪ್ರಮಾಣ ಪತ್ರ ಪಡೆದಿರುವ ಉತ್ತರ ಕನ್ನಡದ ಕಾಸರಕೋಡು ಸಮುದ್ರ ತೀರಕ್ಕೆ ಹೊಸ ಕಳೆ ತಂದಿದ್ದಂತೂ ಖರೆ.


  ವರದಿ: ಎ.ಬಿ.ನಿಖಿಲ್, ಮುಂಡಗೋಡು

  Published by:ಗುರುಗಣೇಶ ಡಬ್ಗುಳಿ
  First published: