• Home
  • »
  • News
  • »
  • uttara-kannada
  • »
  • Alert: ಕಂಡಕಂಡಲ್ಲಿ ಕಸ, ದೇವರ ಫೋಟೋ ಎಸೆದರೆ ಭಾರೀ ದಂಡ

Alert: ಕಂಡಕಂಡಲ್ಲಿ ಕಸ, ದೇವರ ಫೋಟೋ ಎಸೆದರೆ ಭಾರೀ ದಂಡ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನೂ ಮುಂದುವರೆದು ನಗರಾಡಳಿತವು ಕಂಡಕಂಡಲ್ಲಿ ದೇವರ ಭಾವಚಿತ್ರಗಳನ್ನು ಎಸೆದಿದ್ದರೆ ಅದನ್ನೂ ಕೂಡ ಸಂಗ್ರಹಿಸಲು ಶುರು ಮಾಡಿದೆ.

  • Share this:

    ಕಾರವಾರ: ಸಾರ್ವಜನಿಕರಿಗೆ ಕಾರವಾರ ನಗರಸಭೆ ಮಹತ್ವದ ಸೂಚನೆ ನೀಡಿದೆ. ಕಂಡ ಕಂಡಲ್ಲಿ ಕಸ ಎಸಿದರೆ ಕಂಡ ಕಂಡಲ್ಲಿ ಕಸ ಹಾಗೂ ದೇವರ ಫೋಟೋ ಎಸೆದರೆ (Garbage Fine)  ಫೈನ್ ಫ್ರೀ! ಹೌದು, ಕಾರವಾರದ ನಗರಸಭೆಯ ಮಾದರಿ ಕೆಲಸವಿದು, ಯಾರಾದರೂ ಕಂಡಕಂಡಲ್ಲಿ ಕಸ ಎಸೆದರೆ ನಿಮ್ಮ ಫೋಟೋವನ್ನು ಕ್ಲಿಕ್ಕಿಸಿ ಫೋಟೋವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ. ಅಷ್ಟೇ ಅಲ್ಲ ಕಸವನ್ನು ಕಸ ಎಸೆದ ವ್ಯಕ್ತಿಯಿಂದಲೇ ಎತ್ತಿಸಿ ದಂಡವನ್ನೂ ‌ಹಾಕಲು ಕಾರವಾರ ನಗರಸಭೆ (Karwar Municipality) ನಿರ್ಧರಿಸಿದೆ. ಹೀಗೊಂದು ಶಿಸ್ತುಬದ್ಧ ಕಠಿಣ ಕ್ರಮಕ್ಕೆ ಕಾರವಾರದ ನಗರಸಭೆಯು ಮುಂದಾಗಿದೆ. ಪ್ರತಿ ಓರ್ವ ವ್ಯಕ್ತಿಗೆ ಕಸ ಎಸೆದರೆ 500 ರೂಪಾಯಿ ದಂಡವನ್ನು ವಸೂಲಿ ಮಾಡಲಾಗುವುದು‌‌ ಎಂದು ನಗರಸಭೆ ತಿಳಿಸಿದೆ.


    ಅಕ್ಟೋಬರ್ ತಿಂಗಳಿನಿಂದ ಕಸ ಎಸೆಯುವ ಏಳು ಮಂದಿಯನ್ನು ಪತ್ತೆ ಮಾಡಿ ಪ್ರಾಥಮಿಕ ಎಚ್ಚರಿಕೆಯನ್ನು ನೀಡಿ 4,900 ರೂಪಾಯಿಗಳ ದಂಡವನ್ನೂ ಸಹ ತುಂಬಿಸಿಕೊಳ್ಳಲಾಗಿದೆ‌.


    ಪತ್ರಿಕೆಯಲ್ಲೂ ಬರುತ್ತಂತೆ ಫೋಟೋ
    ಆದರೆ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಅಲ್ಲಲ್ಲಿ ಕಸ ಎಸೆಯುವುದಲ್ಲದೇ ಪೌರ ಕಾರ್ಮಿಕರಿಗೆ ತಲೆನೋವು ಉಂಟುಮಾಡುವಂತಹ ಅವ್ಯವಸ್ಥೆ ಉಂಟಾಗಿತ್ತು. ಹೀಗಾಗಿ ಈ ರೀತಿಯ ಕಠಿಣ ಕ್ರಮವನ್ನು ನಗರಸಭೆ ಕೈಗೊಳ್ಳಲು ಮುಂದಾಗಿದೆ. ಈ ಕುರಿತು ಪೌರಾಯುಕ್ತ ಆರ್.ಪಿ. ನಾಯ್ಕ್ ಮಾಹಿತಿ ನೀಡಿದ್ದು ಸಿಕ್ಕಸಿಕ್ಕಲ್ಲಿ ಕಸ ಎಸೆದು ಸಿಕ್ಕಿಬಿದ್ದರೆ ಪತ್ರಿಕೆಯಲ್ಲಿ ನಿಮ್ಮ ಫೋಟೋ ಸ್ಟಿಕ್ ಆಗುವುದು ಖಂಡಿತ ಎಂದಿದ್ದಾರೆ.


    ಇದನ್ನೂ ಓದಿ: Uttara Kannada: ಸ್ವತಃ ಕರೆಂಟ್ ತಯಾರಿಸೋ ಶಿರಸಿಯ ಗ್ರಾಮಸ್ಥರು! ಇವರಿಗೆ ಸರ್ಕಾರಿ ವಿದ್ಯುತ್ ಬೇಕಂತಿಲ್ಲ!


    ಈಗಾಗಲೇ ಸ್ವಚ್ಛತೆಗೆ ಸಂಬಂಧಿಸಿದಂತೆ ಮಾತ್ರವಲ್ಲ ಆಡಳಿತದಲ್ಲೂ ಕೂಡ ಮುಂಚೂಣಿಯ ಸ್ಥಾನವನ್ನು ಹೊಂದಿ ಉತ್ತಮ ಆಡಳಿತಕ್ಕಾಗಿ ನಗರಸಭೆಯು ಪ್ರಧಾನಮಂತ್ರಿ ಉತ್ತಮ ಆಡಳಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹೀಗಾಗಿ ಇನ್ನಷ್ಟು ಸ್ವಚ್ಛತಾ ಕ್ರಮ ಪಾಲಿಸಲು ಕಾರವಾರ ನಗರಸಭೆ ನಿರ್ಧರಿಸಿದೆ.


    ದೇವರ ಭಾವಚಿತ್ರಗಳನ್ನು ಎಸೆದಿದ್ದರೆ ದಂಡ
    ಇನ್ನೂ ಮುಂದುವರೆದು ನಗರಾಡಳಿತವು ಕಂಡಕಂಡಲ್ಲಿ ದೇವರ ಭಾವಚಿತ್ರಗಳನ್ನು ಎಸೆದಿದ್ದರೆ ಅದನ್ನೂ ಕೂಡ ಸಂಗ್ರಹಿಸಲು ಶುರು ಮಾಡಿದೆ. ಹೌದು, ಇಡಗುಂಜಿಯ ಪ್ರಯಾಣಿಕರೊಬ್ಭರು ತಮ್ಮ ಊರಿನ ಗಣಪತಿ ಫೋಟೋ ರಸ್ತೆ ಬದಿಯಲ್ಲಿ ವಿಕಾರವಾಗಿ ಬಿದ್ದಿದ್ದನ್ನು ಗಮನಿಸಿ ಈ ಬಗ್ಗೆ ನಗರಸಭೆಯ ಗಮನ ಸೆಳೆದಿದ್ದಾರೆ. ಅವರ ಸಲಹೆಯನ್ನು ಪರಿಗಣಿಸಿ ಈಗ ಆಯಾ ಊರಿನ ವ್ಯಾಪ್ತಿಯಲ್ಲಿ ಹಾಳಾಗಿ ಬಿದ್ದಿರುವ ದೇವರ ಫೋಟೋ ಹಾಗೂ ವಿಗ್ರಹಗಳನ್ನೂ ಕೂಡ ಕಾರವಾರ ನಗರಾಡಳಿತ ಸಂಗ್ರಹಿಸಲಿದೆ.


    ಇದನ್ನೂ ಓದಿ: Sirsi Todadevu: ರುಚಿರುಚಿ ತೊಡದೇವು ತಯಾರಿಸಲು ಇವರು ಫೇಮಸ್! ರೆಸಿಪಿನೂ ಇಲ್ಲಿದೆ


    ಈಗಾಗಲೇ ಪೌರಕಾರ್ಮಿಕರಿಂದ ಈ ಕೆಲಸ ಕಾರವಾರದಲ್ಲಿ ಶುರುವಾಗಿದೆ. ಉತ್ತಮ ಆಡಳಿತಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಕಾರವಾರದ ನಗರಸಭೆ ಪಡೆದುಕೊಂಡಿರುವುನ್ನು ಇಲ್ಲಿ ನಾವು ಸ್ಮರಿಸಬಹುದಾಗಿದೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: