Uttara Kannada: ಮಳೆರಾಯನಿಗೆ ಸವಾಲೊಡ್ಡಿದ ಕಾರವಾರದ ಯುವಕರು!

ಭಾರೀ ಮಳೆಯಿಂದಾಗಿ ನೆರೆ ಸೃಷ್ಟಿಯಾಗಿ ಅದೆಷ್ಟೋ ಕೃಷಿ ಜಮೀನು ಜಲಾವೃತವಾಗಿ ರೈತರು ಸಂಕಷ್ಟ ಪಡುತ್ತಿರುವುದು ಸಾಮಾನ್ಯ. ಆದರೆ, ಕಾರವಾರದ ಯುವಕರು ನೆರೆಯ ವಿರುದ್ಧ ವಿಭಿನ್ನ ಶೈಲಿಯ ಕೃಷಿ ನಡೆಸುವ ಮೂಲಕ ಮಳೆರಾಯನಿಗೆ ಸವಾಲೊಡ್ಡಿದ್ದಾರೆ. ನೀವೇ ವಿಡಿಯೋ ನೋಡಿ

ಕೃಷಿಯಲ್ಲಿ ಯುವಕರ ಹೊಸ ಸಾಹಸ

"ಕೃಷಿಯಲ್ಲಿ ಯುವಕರ ಹೊಸ ಸಾಹಸ"

 • Share this:

  ಉತ್ತರ ಕನ್ನಡ: ಯಾವುದಾದರೂ ಸಮಸ್ಯೆ ಬಂದರೆ ತಲೆಮೇಲೆ ಕೈ ಹೊತ್ತು ಕೂರೋರ ಸಂಖ್ಯೆಯೇ ಹೆಚ್ಚು. ಆದ್ರೆ ಸುಮ್ಮನೆ ಕೂರೋದಕ್ಕಿಂತ ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದಾಗ ನಾವು ಅಂದುಕೊಂಡದ್ದನ್ನ ಸಾಧಿಸಬಹುದು. ಇದಕ್ಕೆ ಉತ್ತಮ ಉದಾಹರಣೆಯೇ ಕಾರವಾರದ (Karwar) ಯುವಕರು.. ಉತ್ತರ ಕನ್ನಡ ಜಿಲ್ಲೆಯಾದ್ಯಂತ  (Uttara Kannada Rain) ಸುರಿದ ಭಾರೀ ಮಳೆಗೆ ನೆರೆಯಿಂದಾಗಿ ಕೃಷಿ ಜಮೀನು ಎಲ್ಲವೂ ಜಲಾವೃತವಾಗಿ ಅಸ್ತವ್ಯಸ್ತವಾಗಿತ್ತು. ಮೂರ್ನಾಲ್ಕು ವರ್ಷಗಳಿಂದ ಜೋರಾಗಿ ಸುರಿಯುವ ಮಳೆಯಿಂದಾಗಿ ಈ ಭಾಗದ ಕೃಷಿಕರಲ್ಲಿ ಆತಂಕ ತಪ್ಪಿದ್ದಲ್ಲ. ಆದರೆ ಕಾರವಾರದ ಈ ಯುವಕರು ಮಾತ್ರ ಇದೆಲ್ಲವನ್ನು ಮೀರಿ ಮಾದರಿ ಅನಿಸಿಕೊಂಡಿದ್ದಾರೆ.


  ಅದರ ಜೊತೆಗೆ ಪ್ರವಾಹ, ಭೂಕುಸಿತ ಒಂದೋ, ಎರಡೋ..? ಇದೇ ಥರ ಕಾರವಾರ ಹತ್ತಿರ ಕಾಳಿ ನದಿ ಅಂಚಲ್ಲಿ ನೂರಾರು ಜನರ ಮನೆಗೆ ನೆರೆಯಿಂದ ಹಾನಿಯಾಗಿತ್ತು. ಭತ್ತ ಬೆಳೆಯೋ ಗದ್ದೆ ಮುಳುಗಿತ್ತು. ಪ್ರತಿವರ್ಷ ಇದೇ ಆಗಿ ಭತ್ತ ಬೆಳೆಯೋದೇ ನಿಂತು ಹೋಗಿತ್ತು.


  ಇದನ್ನೂ ಓದಿ: Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

  ಸುಮ್ಮನೆ ಕೂತಿಲ್ಲ!
  ಆದರೆ  ವರ್ಷ ಮಾತ್ರ ಇಲ್ಲಿನ ಮಂದಿ ಸುಮ್ಮನೆ ಕೂತಿಲ್ಲ. ಕಾಂಕ್ರೀಟ್ ಮಹಡಿ ಥರ ಮಾಡಿ ಅದರ ಮೇಲೆ ಟ್ರೇನಲ್ಲಿ ಭತ್ತದ ಸಸಿ ಬೆಳೆಸುತ್ತಿದ್ದಾರೆ.ಈ ಮೂಲಕ ಮಳೆರಾಯನಿಗೇ ಸವಾಲೊಡ್ಡಿದ್ದಾರೆ.

  ಒಂದು ಹದಿನೈದು ಇಪ್ಪತ್ತು ದಿನಕ್ಕೆಲ್ಲ ಸಸಿನ ಗದ್ದೆಗಳಲ್ಲಿ ನಾಟಿ ಮಾಡಬಹುದಂತೆ. ಕೆಲಸನೂ ಕಡಿಮೆ.‌ ಶ್ರಮನೂ ಕಡಿಮೆ.


  ಇದನ್ನೂ ಓದಿ: Tibetan Camp: ಉತ್ತರ ಕನ್ನಡದ ಮಿನಿ ಟಿಬೆಟ್! ಒಳಗೆ ಏನೇನಿದೆ? ವೀಡಿಯೋ ನೋಡಿ

  ಖಾಲಿ ಇರೋ ಜಾಗದಲ್ಲೂ ಕೃಷಿ
  ಪಟಪಟಾಂತ ಭತ್ತದ ಸಸಿ ಕಾಂಕ್ರೀಟ್ ಟ್ರೇನಲ್ಲಿ ಬೆಳ್ಕೊಳ್ಳೋದ್ರಿಂದ ಖಾಲಿ ಬಿದ್ದಿರೋ ಜಾಗ್ದಲ್ಲೂ ಭತ್ತ ನಾಟಿ ಮಾಡೋಕೆ ಮುಂದಾಗ್ತಿದ್ದಾರೆ ಕದ್ರಾದ ಕೃಷಿಕರು.
  Published by:guruganesh bhat
  First published: