Uttara Kannada: ಕೈಯಲ್ಲೇ ಹಿಡಿಯಿತು ನೋಡಿ ಪುಟ್ಟ ತಾಜ್ ​ಮಹಲ್‌, ಹಂಪಿ ರಥ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

35 ವರ್ಷದ ಮಿಲಿಂದ್‌ ಅವರು ಮೊದಲು ಒಂದು ಗ್ರಾಂಗಿಂತ ಕಡಿಮೆ ಇರುವ ಚೈನ್ ರಚಿಸಿದರು. ನಂತರ ಮುಂದುವರೆದು ತಿರುಗುವ ಪೆಂಡೆಂಟ್ ಹಾಗೂ 354 ರಿಂಗ್​ಗಳ ಒಂದು ಗ್ರಾಂಕ್ಕಿಂತ ಕಡಿಮೆ ತೂಕದ ನೆಕ್ಲೇಸ್ ಮಾಡಿ ಲಿಮ್ಕಾ ದಾಖಲೆ ಬರೆದರು.

  • News18 Kannada
  • 5-MIN READ
  • Last Updated :
  • Karwar, India
  • Share this:

    ಉತ್ತರ ಕನ್ನಡ: ಪುಟ್ಟದು ಅಂದ್ರೆ ಅತೀ ಪುಟ್ಟದಾದ ತಾಜ್‌ ಮಹಲ್‌ (Taj Mahal), ಹಂಪಿಯ ರಥ (Hampi Stone Chariot), ಸಂಸತ್‌ ಭವನ, ಮಹಾಭಾರತದ ವಿಜಯರಥ. ಯೆಸ್‌, ಸರವಾಗಿ ಕೊರಳಿಗೂ ಹಾಕಬಹುದು. ಕೈ ಬೆರಳಿಗೂ ಉಂಗುರವಾಗಿ ಧರಿಸಿಕೊಳ್ಳಬಹುದು. ಅಷ್ಟೊಂದು ಸೂಕ್ಷ್ಮ ಕೆತ್ತನೆಯ ಈ ಕಲಾಕೃತಿಗಳು ಅಷ್ಟೇ ಅದ್ಭುತ ಹಾಗೂ ಆಕರ್ಷಣೀಯವೂ ಆಗಿವೆ.


    ಸೂಕ್ಷ್ಮ ರಚನೆಯ ಅಲಂಕಾರ
    ಉತ್ತರ ಕನ್ನಡದ ಕಾರವಾರದ ಕಡವಾಡದಲ್ಲಿರುವ ಮಿಲಿಂದ್‌ ಅಣ್ವೇಕರ್‌ ಅವರೇ ಈ ಬಗೆಯ ಸೂಕ್ಷ್ಮ ಕೆತ್ತನೆಯ ಅಕ್ಕಸಾಲಿಗರು. ಗುಣಮಟ್ಟದಲ್ಲಿ ಕಾಂಪ್ರಮೈಸ್‌ ಮಾಡಿಕೊಳ್ಳದ ಮಿಲಿಂದ್‌ ಅವರು ಒಂದು ಗ್ರಾಂಗಿಂತ ಕಡಿಮೆ ತೂಕದ ಚಿನ್ನದಲ್ಲಿ ನೆಕ್ಲೇಸ್ ಮಾಡಿ ದಾಖಲೆ ಬರೆದವರು. ಅಷ್ಟೇ ಅಲ್ದೇ ಚಿನ್ನ, ಬೆಳ್ಳಿಯ ಸೂಕ್ಷ್ಮ ರಚನೆಯ ಒಡವೆ ತಯಾರಿಗೆ ಇವರು ಬಲು ಫೇಮಸ್.‌




    ಉಂಗುರಾಕೃತಿಯ ಕಲಾಕುಸುರಿಗಳು
    ಒಂಚೂರು ರಿಸ್ಕ್‌ ತೆಗೆದುಕೊಂಡು ಡಿಫ್ರೆಂಟ್‌ ಆಗಿ ಟಚ್‌ ಕೊಡೋ ಮಿಲಿಂದ್‌ ಅವರ ಕೈಚಳಕದಲ್ಲಿ ಇಂತಹ ಕಲಾಕುಸುರಿಗಳು ಕಾಣಲು ಸಾಧ್ಯ. ಜೊತೆಗೆ ಹಂಪಿಯ ಕಲ್ಲಿನ ರಥವನ್ನ ಇಲ್ಲಿ ಚಿನ್ನದಲ್ಲಿ ರಚಿಸಿರುವ ಮಿಲಿಂದ್‌ ಅವರು, ಅಮೃತ ಶಿಲೆಯ ತಾಜ್‌ ಮಹಲ್‌ ಗೂ ಚಿನ್ನದ ಬಣ್ಣ ನೀಡಿದ್ದಾರೆ. ಇನ್ನು ಪುಟ್ಟದಾದ ಮಹಾಭಾರತದ ವಿಜಯರಥ ಕಣ್ಮನ ಸೆಳೆಯುತ್ತೆ. ಸಂಸತ್‌ ಭವನವೂ ಆಕರ್ಷಿಸುತ್ತವೆ. ಈ ಮಟ್ಟಿಗೆ ಮಿಲಿಂದ್‌ ಅವರು ನ್ಯಾನೋ ಕಲೆಯನ್ನು ಯಾರಿಂದಲೂ, ಕಲಿಯದೇ ಸ್ವತಃ ತಾವೇ ತಮ್ಮ ಪ್ರಯತ್ನದಿಂದ ಮಾಡುತ್ತಾ ಬಂದಿದ್ದಾರೆ.


    ಇದನ್ನೂ ಓದಿ: Shigehalli Ganapati Temple: ಭಕ್ತರ ಜೊತೆ ಮಾತನಾಡ್ತಾನಂತೆ ಬಯಲಲ್ಲೇ ನೆಲೆಸಿರುವ ಈ ಬಂಡೆ ಗಣಪ!




    ಲಿಮ್ಕಾ ದಾಖಲೆ
    35 ವರ್ಷದ ಮಿಲಿಂದ್‌ ಅವರು ಮೊದಲು ಒಂದು ಗ್ರಾಂಗಿಂತ ಕಡಿಮೆ ಇರುವ ಚೈನ್ ರಚಿಸಿದರು. ನಂತರ ಮುಂದುವರೆದು ತಿರುಗುವ ಪೆಂಡೆಂಟ್ ಹಾಗೂ 354 ರಿಂಗ್​ಗಳ ಒಂದು ಗ್ರಾಂಕ್ಕಿಂತ ಕಡಿಮೆ ತೂಕದ ನೆಕ್ಲೇಸ್ ಮಾಡಿ ಲಿಮ್ಕಾ ದಾಖಲೆ ಬರೆದರು. ಇವರು ಬರೀ 20,000 ರೂಪಾಯಿಯಲ್ಲಿ 8 ಗ್ರಾಂ ಚಿನ್ನ ಬಳಸಿ ತಾಜ್ ಮಹಲ್ ಉಂಗುರ ಮಾಡಿದ್ದಾರೆ.


    ಇದನ್ನೂ ಓದಿ: Uttara Kannada: ಬಡವರಿಗೆ ಬಂಗಾರ ನೀಡುವ ಗ್ರಾಮ ದೇವತೆ ಈಕೆ! ವರ್ಷಕ್ಕೆ 3 ತಿಂಗಳಷ್ಟೇ ದರ್ಶನ ಭಾಗ್ಯ!


    ಇವ್ಯಾವುದನ್ನೂ ಮಾರಾಟ ಮಾಡಲ್ವಂತೆ!
    ಪ್ರತೀ ವರ್ಷ ಹೀಗೆ ಏನಾದರೂ ಒಂದನ್ನು ಮಾಡುವ ಮಿಲಿಂದ್ ಇದ್ಯಾವುದನ್ನೂ ಮಾರುವುದಿಲ್ಲ. ಹೀಗೆ ಅಕ್ಕಸಾಲಿಗರು ನ್ಯಾನೋ ಕಲಾವಿದನಾಗಿ ಬದಲಾಗಿದ್ದಾರೆ. ಹಲವಾರು ಚಿನ್ನ, ಬೆಳ್ಳಿ ಸೂಕ್ಷ್ಮ ರಚನೆಯ ಮೂಲಕ ತನ್ನೊಳಗಿರುವ ಕಲಾವಿದನಿಗೆ ಜೀವ ತುಂಬುತ್ತಾ ಬಂದಿದ್ದಾರೆ.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: