ಕಾರವಾರ: ಉರಿಯುತ್ತಿರೋ ದೀಪದ ಮುಂದೆ ಕುಳಿತಿರೋ ನೂರಾರು ಮಹಿಳೆಯರು, ಮೊಳಗುತ್ತಿರೋ ಹರಹರ ಮಹಾದೇವ್ ಜೈಕಾರ, ಯೋ ಬಂಡಿ ಯೋ..ಯೋ ಬಂಡಿ ಯೋ.. ಎಂಬ ಉದ್ಘಾರ ಘೋಷಣೆಯೊಂದಿಗೆ ದೇವರ ಬಂಡಿ ಎಳೆದೊಯ್ತಿರೋ ಭಕ್ತರು. ಇದು ದಾಡ ಮತ್ತು ದೇವತಿ ದೇವರ (Dad And Devati Jatre) ವಿಶೇಷ ಜಾತ್ರೆಯ ಸಂಭ್ರಮ, ಸಡಗರ.
ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯ ದಾಡ ಹಾಗೂ ದೇವತಿ ದೇವರ ಜಾತ್ರೆ. ಪ್ರತಿ ವರ್ಷ ಭರತ ಹುಣ್ಣಿಮೆಯ ಮರುದಿನ ನಡೆಯುವ ಈ ಜಾತ್ರೆಯನ್ನು ಇಲ್ಲಿನ ಕೊಂಕಣಿ ಗ್ರಾಮ್ಯ ಭಾಷೆಯಲ್ಲಿ ಮಾರ್ಕೇ ಪೂನವ್ ಎನ್ನಲಾಗುತ್ತೆ.
ಮದುವೆಗೂ ಮುಂಚೆ ಹರಕೆ!
ದೇವರ ಕುಲ ಭಕ್ತರು ತಮ್ಮ ಮದುವೆ ಮುಂಚೆ ಮಕ್ಕಳಿಗೆ ದೇವರ ಜಾತ್ರಾ ಸನ್ನಿದಿಗೆ ಕರೆದೊಯ್ದು ಹೊಟ್ಟೆಯ ಹೊಕ್ಕಳ ಹತ್ತಿರ ಸೂಜಿಯಿಂದ ದಾರವನ್ನು ಪೋಣಿಸೋದೇ ಈ ಜಾತ್ರೆಯ ವಿಶೇಷತೆ. ಈ ವಿಶೇಷ ಹರಕೆಗೆ ಕೊಂಕಣಿ ಗ್ರಾಮ್ಯ ಭಾಷೆಯಲ್ಲಿ ಸೆಲ್ ಅನ್ನಲಾಗುತ್ತೆ.
ಮದುವೆಯ ನಂತರ ಹೀಗೆ ಮಾಡ್ತಾರೆ!
ಇನ್ನು ಸೂಜಿ ಪೋಣಿಸುವ ಹರಕೆ ಒಂದೆಡೆಯಾದ್ರೆ, ಇನ್ನೊಂದೆಡೆ ಮದುವೆಯಾದ ಮೊದಲ ವರ್ಷದಲ್ಲಿ ಮಹಿಳೆಯರು ಈ ದೇವರಿಗೆ ತಲೆ ಮೇಲೆ ದೀಪದ ಹಣತೆ ಇಟ್ಟು ಮೆರವಣಿಗೆ ನಡೆಸುತ್ತಾರೆ. ಕೊಂಕಣಿ ಗ್ರಾಮ್ಯ ಭಾಷೆಯಲ್ಲಿ ದೀವಜ್ ಎಂದು ಕರೆಯಲಾಗುತ್ತೆ.
ಇದನ್ನೂ ಓದಿ: Bharat Mata Mandir Puttur: ಪುತ್ತೂರಿನಲ್ಲಿ ಭಾರತ ಮಾತೆಯ ಮಂದಿರ! ಹೆಚ್ಚಲಿದೆ ಇನ್ನಷ್ಟು ದೇಶಪ್ರೇಮ
ಜಾತ್ರಾ ಪ್ರಯುಕ್ತ ದಾಡ ದೇವರ ಬಂಡಿಯನ್ನು ಹತ್ತಿರದಲ್ಲಿರುವ ದೇವತಿ ದೇವರ ಹತ್ತಿರ ಯೋ ಬಂಡಿ ಯೋ..ಯೋ ಬಂಡಿ ಯೋ.. ಎಂಬ ಉದ್ಘಾರ ಘೋಷಣೆಯೊಂದಿಗೆ ಭಕ್ತಾದಿಗಳು ಎಳೆದುಕೊಂಡು ಸಾಗ್ತಾರೆ. ಭಕ್ತ ಮಹಿಳೆಯರು ಕೂಡಾ ಪ್ರತಿ ವರ್ಷ ದೀವಜ್ ಹರಕೆ ನೀಡ್ತಾರೆ.
ಇದನ್ನೂ ಓದಿ: Uttara Kannada: ಚೆಂದುಳ್ಳಿ ಚೆಲುವೆಯರ ಕ್ಯಾಟ್ ವಾಕ್! ಮಿಸ್ ಶಿರಸಿ ಆದ ಸುಂದರಿ ಇವ್ರೇ!
ಒಟ್ಟಾರೆ ಗೋವಾ ಕರ್ನಾಟಕ ಗಡಿ ಗ್ರಾಮ ಮಾಜಾಳಿಯಲ್ಲಿ ಮಾರ್ಕೇ ಪೋನವ್ ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿವಿಧ ಜಾತ್ರೆಗಿಂತ ವೈವಿಧ್ಯಮಯವಾಗಿ ನಡೆಯಿತು. ನೂರಾರು ವರ್ಷದ ಸಂಪ್ರದಾಯದ ಆಚರಣೆಗಳು ಚಾಚೂ ತಪ್ಪದೇ ನಡೆದದ್ದು ವಿಶೇಷವಾಗಿತ್ತು.
ವರದಿ: ದರ್ಶನ್ ನಾಯ್ಕ, ನ್ಯೂಸ್ 18 ಕನ್ನಡ ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ