ಮನೆ ಮನೆಯಲ್ಲೂ ಬಗೆ ಬಗೆಯ ರಂಗೋಲಿ! ಗಂಧದಗುಡಿ ಶೈಲಿಯಲ್ಲಿ ಅಪ್ಪು (Puneeth Rajkumar) ಸ್ಟೈಲ್, ಕಾಂತಾರ ಚಿತ್ರದಲ್ಲಿನ (Kantara Movie) ಪಂಜುರ್ಲಿ ದೈವ, ರಂಗೋಲಿ ಹಿಟ್ಟಲ್ಲಿ ಅರಳಿದ ರಾಷ್ಟ್ಪತಿ ದ್ರೌಪದಿ ಮುರ್ಮು (Droupadi Murmu), ಇದು ಕಾರವಾರದ ಮಾರುತಿ ಗಲ್ಲಿ ಜಾತ್ರೆ (Karwar Maruti Galli Jatra) ರಂಗೋಲಿ ಸ್ಪೆಷಲ್.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾರುತಿ ದೇವರ ಪಲ್ಲಕ್ಕಿಯನ್ನ ಬರಮಾಡಿಕೊಳ್ಳಲು ಮನೆಯ ಮುಂದೆ ರಂಗೋಲಿ ಹಾಕುವ ವಿಶಿಷ್ಟ ಸಂಪ್ರದಾಯವಿದೆ. ಮಾರುತಿ ಗಲ್ಲಿಯ ಮಾರುತಿ ದೇವರ ಜಾತ್ರೆಯಲ್ಲಿ ರಂಗೋಲಿಯೇ ಪ್ರಮುಖ ಆಕರ್ಷಣೆ.
ಇದನ್ನೂ ಓದಿ: Uttara Kannada: ಕಡಿಮೆ ಖರ್ಚು, ಹೆಚ್ಚು ಲಾಭ! ಕೃಷಿಕರೇ ಈ ಪಂಪ್ ಬಳಸಿ ನೋಡಿ
ಮನೆಗಳ ಮುಂದೆ ಈ ರಂಗೋಲಿಗಳದ್ದೇ ಹವಾ!
ಈ ವರ್ಷ ನಡೆದ ಜಾತ್ರೆಯಲ್ಲಿ ಮನೆಗಳ ಮುಂದೆ ಅತೀ ಹೆಚ್ಚಾಗಿ ಕಾಂತಾರ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಗಂಧದಗುಡಿ ಚಿತ್ರದ್ದೇ ಹವಾ ಎದ್ದುಕಾಣುತ್ತಿತ್ತು.
ಇದನ್ನೂ ಓದಿ: Success Story: ಜೇನುತುಪ್ಪವೊಂದೇ ಅಲ್ಲ, ಮೇಣದಿಂದಲೂ ಲಾಭ ಗಳಿಸಬಹುದು!
ರಂಗೋಲಿ ಪುಡಿಯಲ್ಲಿ ಅದ್ಭುತ!
ರಂಗೋಲಿ ಪುಡಿಯಲ್ಲೇ ಇಷ್ಟೊಂದು ಅದ್ಭುತ ಚಿತ್ರ ಸೃಷ್ಟಿಸಬಹುದು ಎಂಬುದನ್ನ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾರುತಿ ಗಲ್ಲಿಯ ಜನರು ಸಾಧಿಸಿ ತೋರಿಸಿದರು. ಟ್ರೆಂಡಿಂಗ್ ಚಿತ್ರಗಳ ಜೊತೆಗೆ ಸಾಮಾಜಿಕ ಸಂದೇಶ ಸಾರುವ ಚಿತ್ರಗಳು ಕೂಡಾ ಗಮನಸೆಳೆದವು.
ಮಾಹಿತಿ, ವಿಡಿಯೋ: ದರ್ಶನ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ