Karwar: ಮನೆ ಸೇರಿದ 75 ಕಡಲಾಮೆಗಳು! ಕಾರವಾರದಲ್ಲಿ ಅಚ್ಚರಿಯ ಘಟನೆ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕಡಲಾಮೆಗಳು ಮಾಜಾಳಿ ಕಡಲತೀರದಲ್ಲಿ 54 ದಿನಗಳ ಹಿಂದೆ ಮೊಟ್ಟೆಗಳನ್ನಿಟ್ಟು ತೆರಳಿದ್ದವು. ಅವುಗಳನ್ನ ಅರಣ್ಯ ಇಲಾಖೆಯ ಮರೈನ್ ವಿಭಾಗದಿಂದ ಸಂರಕ್ಷಿಸಿ ಇಡಲಾಗಿತ್ತು.

  • News18 Kannada
  • 5-MIN READ
  • Last Updated :
  • Karwar, India
  • Share this:

ಕಾರವಾರ: ಪುಟ್ಟ ಪುಟಾಣಿ ಕಡಲಾಮೆಗಳಿಗೆ ಮನೆ ಸೇರುವ ತವಕ, ಇವೆಲ್ಲವೂ ಆಲಿವ್ ರಿಡ್ಲೆ ಕಡಲಾಮೆಯ ಮರಿಗಳು. ಕಾರವಾರ ತಾಲೂಕಿನ (Karwar News) ಮಾಜಾಳಿಯ ಹಿಪ್ಪಲಿ ಕಡಲತೀರದ ಗೂಡುಗಳಿಂದ ಸಮುದ್ರ ಸೇರಲು ಪಟಪಟನೇ ಹೆಜ್ಜೆ ಹಾಕುತ್ತಿದ್ದ ಮರಿಗಳನ್ನು ಅಲ್ಲಿ ನೂರಾರು ಪ್ರಾಣಿ ಪ್ರೇಮಿಗಳು ನೆರೆದಿದ್ದರು. ಆಲಿವ್ ರಿಡ್ಲೆ ಕಡಲಾಮೆಯ (Olive Ridley Turtle) ಗೂಡುಗಳಿಂದ ಹೊರಬಂದ 75 ಕ್ಕೂ ಅಧಿಕ ಮರಿಗಳನ್ನು ಕಾರವಾರ ಕಡಲತೀರದಲ್ಲಿ ಸಮುದ್ರಕ್ಕೆ ಬಿಡಲಾಯಿತು.


ಕಡಲಾಮೆಗಳು ಮಾಜಾಳಿ ಕಡಲತೀರದಲ್ಲಿ 54 ದಿನಗಳ ಹಿಂದೆ ಮೊಟ್ಟೆಗಳನ್ನಿಟ್ಟು ತೆರಳಿದ್ದವು. ಅವುಗಳನ್ನ ಅರಣ್ಯ ಇಲಾಖೆಯ ಮರೈನ್ ವಿಭಾಗದಿಂದ ಸಂರಕ್ಷಿಸಿ ಇಡಲಾಗಿತ್ತು.


ಇದನ್ನೂ ಓದಿ: Uttara Kannada: 142 ವರ್ಷಗಳ ಲಿಖಿತ ಇತಿಹಾಸವಿರುವ ಬಗ್ಗೋಣ ಪಂಚಾಂಗ ಬರೆಯುವ ಕನ್ನಡತಿ!




ಈ ಮೊಟ್ಟೆಗಳಿಂದ ಇದೀಗ ಕಡಲಾಮೆ ಮರಿಗಳು ಹೊರಬಂದಿವೆ. ಅವುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರ ಜೊತೆಗೂಡಿ ಸಮುದ್ರಕ್ಕೆ ಬಿಟ್ಟರು.


ಇದನ್ನೂ ಓದಿ: Uttara Kannada: ಈ ಹಳ್ಳಿ ಸಂಸ್ಥೆ 6 ತಿಂಗಳಿಗೆ 15 ಲಕ್ಷ ವಹಿವಾಟು ನಡೆಸುತ್ತೆ!


ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ ಕೆ.ಸಿ, ಉಪ ವಲಯ ಅರಣ್ಯ ಅಧಿಕಾರಿ ಪ್ರಕಾಶ ಯರಗಟ್ಟಿ, ಪ್ರಮೋದ ನಾಯ್ಕ, ಗಜಾನನ ನಾಯ್ಕ, ಮಾಜಾಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಮಾಳಸೇಕರ, ಶ್ರೀಪಾದ ಹಾಗೂ ಸ್ಥಳೀಯರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

top videos
    First published: