• Home
  • »
  • News
  • »
  • uttara-kannada
  • »
  • Manjuguni Temple: ಕರ್ನಾಟಕದ ತಿರುಪತಿಯಲ್ಲಿ ವನಭೋಜನ! ಇಲ್ಲಿ ವೆಂಕಟೇಶ್ವರ ನೆಲೆಸಿದ್ದೇ ರೋಚಕ ಕಥೆ

Manjuguni Temple: ಕರ್ನಾಟಕದ ತಿರುಪತಿಯಲ್ಲಿ ವನಭೋಜನ! ಇಲ್ಲಿ ವೆಂಕಟೇಶ್ವರ ನೆಲೆಸಿದ್ದೇ ರೋಚಕ ಕಥೆ

ಪವಿತ್ರ ಕ್ಷೇತ್ರ ಮಂಜುಗುಣಿ

ಪವಿತ್ರ ಕ್ಷೇತ್ರ ಮಂಜುಗುಣಿ

ಕರ್ನಾಟಕದಾದ್ಯಂತ ಚಿಕ್ಕ ತಿರುಪತಿ ಎಂದು ಕರೆಯಲ್ಪಡುವ ಈ ದೇವಸ್ಥಾನಕ್ಕೆ ತಿರುಪತಿಯಿಂದ ಸುರಂಗಮಾರ್ಗವಿದೆ ಎಂದು ಹೇಳಲಾಗುತ್ತದೆ!

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಉತ್ತರ ಕನ್ನಡದ ಮಂಜಗುಣಿ ಕರ್ನಾಟಕದ ತಿರುಪತಿ (Karnataka Tirupati Manjuguni) ಎಂದೇ ಹೆಸರುವಾಸಿ‌. ಮಂಜುಗುಣಿಯ ಗಿಳಗುಂಡಿ ಎಂಬಲ್ಲೇ ಇಲ್ಲಿನ ಪ್ರಸಿದ್ಧ ವೆಂಕಟರಮಣ ದೇವರು (Venkateshwara God) ಸಿಕ್ಕ ಸ್ಥಾನ ಎಂಬ ನಂಬಿಕೆಯಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಕಾರ್ತಿಕ ಮಾಸದ ವನಭೋಜನ ಶ್ರದ್ಧಾಭಕ್ತಿಯಿಂದ ನೆರವೇರಿತು.  ಮಂಜುಗುಣಿಯ ವೆಂಕಟೇಶ್ವರನ ಸನ್ನಿಧಿಯಲ್ಲಿ (Venkateshwara Temple Manjuguni)  ನೆಲದ ಮೇಲೆ ನೂರಾರು ಜನ ಭಕ್ತರು ಕುಳಿತುಕೊಂಡು ಮಂಜುಗುಣಿಯ ಗಿಳಗುಂಡಿ ಕಾಡಿನಲ್ಲಿ ಒಲೆಯಲ್ಲಿ ಪ್ರಸಾದ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಪ್ರಸಾದ ಭೋಜನ ಮಾಡಿದರು.




    ಬಾಳೆದಿಂಡಿನ ಮಂಟಪದಲ್ಲಿ ಕೂರುವ ದೇವರು!
    ದೇವರ ಉತ್ಸವಮೂರ್ತಿಯನ್ನು ಪಲ್ಲಕ್ಕಿ ಮೂಲಕ ಇಲ್ಲಿ ಕರೆದುಕೊಂಡು ಬಂದು ಬಾಳೆದಿಂಡಿನ ಮಂಟಪದಲ್ಲಿ ಕೂರಿಸಿ ವೈಖಾಸನ ಆಗಮದ ಪ್ರಕಾರ ಪೂಜಿಸಲಾಗುತ್ತಿದೆ.


    ವಿವಿಧೆಡೆಯಿಂದ ಆಗಮಿಸಿದ ಭಕ್ತರು
    ವಾಡಿಕೆಯಂತೆ ಈ ಸಲವೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಶಿರಸಿ ಹಾಗೂ ಬೇರೆ ಊರುಗಳಿಂದಲೂ ಭಕ್ತಾದಿಗಳು ಆಗಮಿಸಿ ದೇವರ ಸೇವೆ ಮಾಡಿದರು.




    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲ ಗ್ರಾಮ ಪಂಚಾಯಿತಿಯ ಮಂಜುಗುಣಿ ಶ್ರೀ ವೆಂಕಟೇಶ್ವರ ದೇವಸ್ಥಾನವು ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿದೆ. ತಿರುಮಲಯೋಗಿಗಳಿಂದ ಕ್ರಿಸ್ತಶಕ 9ನೇ ಶತಮಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಈ ದೇವಸ್ಥಾನದಲ್ಲಿ ಅಂಗೈ ಗಾತ್ರದ ಪುಟ್ಟ ವೆಂಕಟರಮಣನ ಮೂರ್ತಿ ಇದೆ.
    ಕರ್ನಾಟಕದಾದ್ಯಂತ ಚಿಕ್ಕ ತಿರುಪತಿ ಎಂದು ಕರೆಯಲ್ಪಡುವ ಈ ದೇವಸ್ಥಾನಕ್ಕೆ ತಿರುಪತಿಯಿಂದ ಸುರಂಗಮಾರ್ಗವಿದೆ ಎಂದು ಹೇಳಲಾಗುತ್ತದೆ.




    ಇದನ್ನೂ ಓದಿ: Uttara Kannada: ಸ್ವತಃ ಕರೆಂಟ್ ತಯಾರಿಸೋ ಶಿರಸಿಯ ಗ್ರಾಮಸ್ಥರು! ಇವರಿಗೆ ಸರ್ಕಾರಿ ವಿದ್ಯುತ್ ಬೇಕಂತಿಲ್ಲ!


    ಇಲ್ಲಿಗೆ ತಿರುಪತಿ ವೆಂಕಟೇಶ್ವರ ಬಂದಿದ್ದೇಗೆ?
    ಒಂದು ಐತಿಹ್ಯದ ಪ್ರಕಾರ ತಿರುಪತಿ ವೆಂಕಟೇಶ್ವರ ಬೇಟೆಯಾಡಲು ಪಶ್ಚಿಮಘಟ್ಟದ ಈ ಕಾಡಿಗೆ ಬಂದು ದಣಿವಾಗಿ ಮಲಗಿದ್ದನಂತೆ. ಆಗ ಈ ಜಾಗವು ಹಿಡಿಸಿ ಗಿಳಗುಂಡಿಯಲ್ಲಿ ತನ್ನ ಪ್ರತಿಬಿಂಬವನ್ನು ಬಿಟ್ಟು ಸಾಗಿದ ಎಂಬ ನಂಬಿಕೆ ಭಕ್ತಾದಿಗಳಲ್ಲಿ ನೆಲೆಯೂರಿದೆ.




    ನಂತರ 9 ನೇ ಶತಮಾನದಲ್ಲಿ ಬಂದ ತಿರುಮಲ ಯೋಗಿಗಳಿಗೆ ಸ್ವಪ್ನ ದೃಷ್ಟಾಂತವಾಗಿ ಇಲ್ಲಿ ತಿರುಪತಿ ವೆಂಕಟೇಶ್ವರ ಇರುವುದು ಖಾತ್ರಿ ಆಯಿತು ಎನ್ನಲಾಗುತ್ತದೆ. ತಿರುಪತಿ ವೆಂಕಟೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ ತಿರುಪತಿ ವೆಂಕಟೇಶ್ವರ ಒಪ್ಪಿಗೆ ಪಡೆದೇ ತಿರುಮಲ ಯೋಗಿಗಳು ಈಗಿನ ಮಂಜುಗುಣಿ ಕ್ಷೇತ್ರಕ್ಕೆ ಕರೆತಂದರಂತೆ. ಅದೇ ಕಾರಣಕ್ಕೆ ಈಗಿನ ತನಕ ಮೂಲ ಸ್ಥಾನವಾದ ಮಂಜುಗುಣಿಯ ಗಿಳಗುಂಡಿಯಲ್ಲಿ ವನಭೋಜನ ನಡೆಯುತ್ತದೆ.


    ಇದನ್ನೂ ಓದಿ: Arecanut: ಅಡಿಕೆ ಎಲೆ ಚುಕ್ಕೆ ರೋಗಕ್ಕೆ ಔಷಧ! ಉಪಾಯ ಕಂಡುಕೊಂಡ ಉತ್ತರ ಕನ್ನಡದ ಕೃಷಿಕ


    ಮಂಜುಗುಣಿಯು ದೇವರಕಾಡು ಎಂಬ ಪ್ರಕೃತಿದತ್ತ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಶಿರಸಿ ಕುಮಟಾ ಹೆದ್ದಾರಿಯಿಂದ ಒಳಗಡೆ 5 ಕಿಮೀ ಕ್ರಮಿಸಿದರೆ ಸಿಗುತ್ತದೆ.


    manjuguni temple location
    ನೀವೂ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ನೀವೂ ಸಿದ್ದಾಪುರ-ಶಿರಸಿ ಮಾರ್ಗದ ಘಟ್ಟದಲ್ಲಿ  ನೆಲೆಯೂರಿರುವ ತಿರುಪತಿ ವೆಂಕಟೇಶ್ವರನ ದರ್ಶನ ಪಡೆಯಲು ಕರ್ನಾಟಕದ ತಿರುಪತಿ ಎಂದೇ ಖ್ಯಾತವಾದ ಮಂಜುಗುಣಿಗೆ ಭೇಟಿ ನೀಡಲು ಹೀಗೆ ಆಗಮಿಸಬಹುದು.

    Published by:ಗುರುಗಣೇಶ ಡಬ್ಗುಳಿ
    First published: