ಹಚ್ಚ ಹಸಿರ ಭೂಮಿ. ಕಂಗೊಳಿಸೋ ಪರಿಸರ. ಇಲ್ಲೇ ಇದೆ ನೋಡಿ ಕರ್ನಾಟಕದ ತಿರುಪತಿ. ಸಾಲಾಗಿ ನಿಂತಿರೋ ಭಕ್ತರು, ವಿಶೇಷ ಪೂಜೆ ಪುನಸ್ಕಾರ, ಯಜ್ಞಯಾಗಾದಿಗಳು. ಇವೆಲ್ಲವೂ ವೆಂಕಟರಮಣನ ಸನ್ನಿಧಿಯಲ್ಲಿ ವಿಶೇಷ ಸಂಭ್ರಮ ಅನ್ನೋದನ್ನ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಈ ಕಳೆಗಟ್ಟಿದ ಸಂಭ್ರಮದ ವಿಶೇಷ ಕಥೆಯನ್ನು ನೀವೂ ನೋಡಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರೋ (Sirsi Manjguni Temple) ಮಂಜುಗುಣಿ ಶ್ರೀವೆಂಕಟರಮಣ ಕ್ಷೇತ್ರ (Sri Manjuguni Venkataramana Temple) ಕರ್ನಾಟಕದ ತಿರುಪತಿ (Karnataka Tirupati Temple) ಅಂತಲೇ ಹೆಸರು ಪಡೆದಿದೆ.
ಸುಮಾರು 800 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರವನ್ನು ತಿರುಮಲ ಯೋಗಿಗಳು ನಿರ್ಮಿಸಿದ್ದಾರೆಂಬ ಪ್ರತೀತಿಯಿದೆ. ವಿಜಯನಗರದ ಸಂಸ್ಥಾಪಕನಾದ ಬುಕ್ಕರಾಯ ತನ್ನ ಮಂತ್ರಿ ಮಾಧವಾಂಕನ ಆದೇಶದಂತೆ ಆರು ಹಳ್ಳಿಗಳನ್ನು ಸ್ವಾಮಿಯ ದೇಗುಲಕ್ಕೆ ಅರ್ಪಿಸಿದ್ದನಂತೆ.
ವಿಜಯನಗರ ಸಾಮ್ರಾಜ್ಯಕ್ಕೂ ಮಂಜುಗುಣಿಗೂ ಹತ್ತಿರದ ಸಂಬಂಧ
ವಿಜಯನಗರ ಸಾಮ್ರಾಜ್ಯದ ಮನೆತನಕ್ಕೂ, ಈ ಮಂಜುಗುಣಿ ಕ್ಷೇತ್ರಕ್ಕೂ ವಿಶೇಷ ಸಂಬಂಧವಿದೆ. ಹಲವು ಸಂದರ್ಭಗಳಲ್ಲಿ ವಿಜಯನಗರದ ಅರಸರು, ಅವರ ಕುಟುಂಬಿಕರು ಈ ಕ್ಷೇತ್ರಕ್ಕೆ ಕೊಡುಗೆಗಳನ್ನ ನೀಡುತ್ತಾ ಬಂದಿದ್ದಾರೆ.
708 ವರ್ಷಗಳ ನಂತರ ಮತ್ತೊಮ್ಮೆ ಭೂದಾನ
ಇದೀಗ 708 ವರ್ಷಗಳ ನಂತರ ಮತ್ತೊಮ್ಮೆ ಭೂದಾನ ಮಾಡಲು ಅರವೀಡು ವಂಶಸ್ಥ ಕೃಷ್ಣದೇವರಾಯರು ಮುಂದಾಗಿದ್ದಾರೆ. ಮಂಜುಗುಣಿ ದೇವಾಲಯದ ಆಡಳಿತ ಮಂಡಳಿಗೆ ಹತ್ತು ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ. ಇದರ ಪ್ರಯುಕ್ತ ಮಂಜುಗುಣಿಯಲ್ಲಿ ಶ್ರೀ ಹರಿ ಪಾದಾರ್ಪಣೆ, ಭೂವರಾಹ ಮಹಾಯಜ್ಞ ನಡೆಯಿತು.
ಇದನ್ನೂ ಓದಿ: Kshetrapala Temple: ಈ ದೇವರಿಗೆ ಕೈಮುಗಿದು ಗಾಡಿ ಓಡಿಸಿದ್ರೆ ಆ್ಯಕ್ಸಿಡೆಂಟ್ ಆಗಲ್ವಂತೆ!
ಶ್ರೀ ಸ್ವಾಮಿಯ ವರಾಹಾವತಾರದ ಪ್ರೀತ್ಯರ್ಥವಾಗಿ ಪೂಜೆ ಕೈಗೊಳ್ಳಲಾಯಿತು. ಅರವೀಡು ವಂಶಸ್ಥ ಕೃಷ್ಣದೇವರಾಯರಿಂದ ಯಜ್ಞದ ಪೂರ್ಣಾಹುತಿಯೂ ನಡೆಯಲಿದೆ.
ಇದನ್ನೂ ಓದಿ: Belambar Treatment: ಉತ್ತರ ಕನ್ನಡದ ಈ ನಾಟಿವೈದ್ಯರ ಬಳಿ ರಾಜ್ಕುಮಾರ್, ಬಿಗ್ ಬಿ ಸಹ ಚಿಕಿತ್ಸೆ ಪಡೆದಿದ್ರು!
ಮಂಜುಗುಣಿ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಒಟ್ಟಾರೆ ಭೂದಾನ ವಿಧಿ ವಿಧಾನಗಳಿಂದ ಮಂಜುಗುಣಿ ಕ್ಷೇತ್ರದಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ. ಶ್ರೀಕ್ಷೇತ್ರವು ಅಕ್ಷರಶಃ ವೈಕುಂಠದ ರೀತಿ ಕಂಗೊಳಿಸುತ್ತಿದೆ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ