Keladi Chennamma Award: ನಿಮ್ಮ ಮಕ್ಕಳಿಗೂ ಸಿಗುತ್ತೆ ಪ್ರತಿಷ್ಠಿತ ಅವಾರ್ಡ್! ಈಗಲೇ ಅರ್ಜಿ ಹಾಕಿ

ನೋಡಿದ್ರಲ್ಲಾ ನಿಮ್ಮ ಮಕ್ಕಳು ಕೂಡ ಎವೆಂಜರ್ಸ್ ಆಗಿದ್ರೆ ಅವರನ್ನ ಎನ್ಕರೇಜ್ ಮಾಡ್ಲಿಕ್ಕೆ ಹೀಗೊಂದು ಅರ್ಜಿ ಹಾಕಿಬಿಡಿಯಲ್ಲಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಾರವಾರ:  ನಿಮ್ಮ ಮಕ್ಕಳು ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್, ಛೋಟಾಭೀಮ್ ನೋಡ್ತಾವಲ್ವಾ? ಅದೇ ರೀತಿ ಯಾವಾಗ್ಲಾದ್ರೂ ಪ್ರೇರಣೆಗೊಂಡು ತಮ್ಮ ಜೀವದ ಹಂಗು ತೊರೆದು ಇನ್ನೊಂದು ಜೀವವನ್ನು ಉಳಿಸಿದ ಪ್ರಸಂಗ ಇದಿಯಾ? ಹಾಗಾದರೆ ನಿಮ್ಮ ಮಕ್ಕಳ ಸಾಧನೆಯನ್ನು (Children Achievement) ಪ್ರೋತ್ಸಾಹಿಸಲು ಇಲ್ಲಿದೆ ಸುಂದರ ಅವಕಾಶ! ಈ ನಿಟ್ಟಿನಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬಾಲಕರಿಗಾಗಿ "ಹೊಯ್ಸಳ" (Hoysala Award) ಹಾಗೂ ಬಾಲಕಿಯರಿಗೆ "ಕೆಳದಿ ಚೆನ್ನಮ್ಮ ಪ್ರಶಸ್ತಿ"ಯನ್ನು (Keladi Chennamma Award) ನೀಡಿ ಗೌರವಿಸಲಾಗುತ್ತಿದೆ. 

  ಈ ಪ್ರಶಸ್ತಿಗೆ ಅರ್ಜಿ ಪಡೆಯಲು ಹಾಗೂ ಸಲ್ಲಿಸಲು ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಬೇಕು.

  ಷರತ್ತುಗಳು

  1. ಮಕ್ಕಳು 2021ರ ಆಗಸ್ಟ್ 1ರಿಂದ 2022ರ ಜುಲೈ 31 ರ ಒಳಗೆ ಸಾಹಸಿ ಕಾರ್ಯ ಮಾಡಿರತಕ್ಕದ್ದು

  2. 2004 ರ ಆಗಸ್ಟ್ 1 ರ ನಂತರ ಜನಿಸಿದ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬೇಕು.

  ಇದನ್ನೂ ಓದಿ: Uttara Kannada Chakli Kambala: ಜನರ ಒಗ್ಗಟ್ಟು ಬೆಸೆಯುತ್ತೆ ಚಕ್ಕುಲಿ! ಇದು ಉತ್ತರ ಕನ್ನಡದ ಚಕ್ಕುಲಿ ಕಂಬಳದ ಸ್ಪೆಷಲ್

  3. ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

  4. ಕಾರವಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಬೇಕು.

  ಎಲ್ಲಿ ಅರ್ಜಿ ನೀಡಬೇಕು?
  ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಸೆಪ್ಟೆಂಬರ್ 30ರೊಳಗೆ ಕಾರವಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಬಹುದಾಗಿದೆ.

  ಇದನ್ನೂ ಓದಿ: Uttara Kannada: ಶಾರದಜ್ಜಿಯ ಹಾಡು ಕೇಳಿ! ಇವರು ಹೊನ್ನಾವರದ ಜಾನಪದ ಗಾನಶಾರದೆ

  ನೋಡಿದ್ರಲ್ಲಾ ನಿಮ್ಮ ಮಕ್ಕಳು ಕೂಡ ಎವೆಂಜರ್ಸ್ ಆಗಿದ್ರೆ ಅವರನ್ನ ಎನ್ಕರೇಜ್ ಮಾಡ್ಲಿಕ್ಕೆ ಹೀಗೊಂದು ಅರ್ಜಿ ಹಾಕಿಬಿಡಿಯಲ್ಲಾ!
  Published by:guruganesh bhat
  First published: