ಉತ್ತರ ಕನ್ನಡ: ಪ್ರಚಾರ, ರೋಡ್ ಶೋ ಅಷ್ಟೇ ಅಲ್ಲ, ವೋಟ್ ಹಾಕೋಕ್ ಬಂದ್ರ ಮೋದಿ ಅಂತಾ ಹೌಹಾರ್ಬೇಡ್ರಿ. ಪ್ರಧಾನ ಮಂತ್ರಿ ಪೋಷಾಕಿನೊಂದಿಗೆ ಉತ್ತರ ಕನ್ನಡದ ಅವರ ಅಭಿಮಾನಿಯೊಬ್ಬರು (PM Modi Fans) ಈ ಗೆಟಪ್ನಲ್ಲಿ ವೋಟ್ ಮಾಡಿದ್ದಾರೆ. ಥೇಟ್ ಮೋದಿ (PM Narendra Modi) ಥರ ಡ್ರೆಸ್ ಕೋಡ್ ಮಾಡ್ತಾ ಮತಗಟ್ಟೆಗೆ (Karnataka Elections 2023) ಬಂದು ಅಚ್ಚರಿ ಮೂಡಿಸಿದ್ರು.
ಮೋದಿ ಗೆಟಪ್!
ಯೆಸ್, ಇವರು ಶಿರಸಿ ತಾರಗೋಡಿನ ಮೋದಿ ಅವರ ಅಪ್ಪಟ ಅಭಿಮಾನಿ ರಾಜೇಶ್ ತಾರಗೋಡ. ಝರಿ ಝರಿ ಮಿಂಚುವ ಕೋಟು, ಕೇಸರಿ ಶಾಲು, ಕೇಸರಿ ಪೇಟ, ಎದೆ ಮೇಲೊಂದು ಕಮಲದ ಚಿಹ್ನೆ ಹೀಗೆ ಸಖತ್ ಗೆಟಪ್ನಲ್ಲಿ ಮೋದಿ ಥರನೇ ಎಂಟ್ರಿ ಕೊಟ್ಟರು.
ಇದನ್ನೂ ಓದಿ: Jackfruit Recipe: ಶಿರಸಿ ಸ್ಪೆಷಲ್ ಹಲಸಿನ ಕಾಯಿಯ ಚಕ್ಕೆ ಪೊಳ್ಜ ಮಾಡೋದು ಹೇಗೆ? ರೆಸಿಪಿ ಇಲ್ಲಿದೆ
ಮತದಾನ ಮಾಡಿ ಹೊರಬರುತ್ತಲೇ ಅವರನ್ನ ಮುತ್ತಿಕೊಂಡ ಮೋದಿ ಫ್ಯಾನ್ಸ್ ಸೆಲ್ಪಿ ಫೋಟೋಗಳನ್ನ ಕ್ಲಿಕ್ಕಿಸಿಕೊಂಡರು. ಈ ಮೂಲಕ ತಾರಗೋಡಿನಲ್ಲಿ ರಾಜೇಶ್ ಅವರು ಸಂಚಲನ ಮೂಡಿಸಿದರು. ನೆರೆದವರೆಲ್ಲರ ಕುತೂಹಲದ ನೋಟಕ್ಕೆ ರಾಜೇಶ್ ಸಾಕ್ಷಿಯಾದರು.
ಮತದಾರರ ಒಲವು
ಹೋಟೆಲ್ ಉದ್ಯಮ ನಡೆಸುತ್ತಿರುವ ರಾಜೇಶ್ ಅವರು ಮೊದಲಿನಿಂದಲೂ ಮೋದಿ ಫಾಲೋವರ್. ಹೀಗಾಗಿ ಮೋದಿ ಗೆಟಪ್ನಲ್ಲಿಯೇ ಬಂದು ಮತ ಚಲಾಯಿಸಿ ಮಿರ ಮಿರ ಮಿಂಚಿದ್ದಾರೆ.
ಇದನ್ನೂ ಓದಿ: Swarnavalli Mutt: ಇಲ್ಲಿ ಏನೇ ಸಂಭ್ರಮ-ಸಡಗರ ನಡೆದ್ರೂ ಕೃಷಿಕರಿಗೇ ಮೀಸಲು! ಎಂತೆಂಥಾ ಸ್ಪರ್ಧೆ ಇತ್ತು ನೋಡಿ!
ಒಟ್ಟಿನಲ್ಲಿ ಪ್ರಧಾನ ಮಂತ್ರಿ ಗೆಟಪ್ನಲ್ಲಿ ಮತ ಚಲಾಯಿಸುವ ಮೂಲಕ ರಾಜೇಶ್ ಅವ್ರು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ