Vote from Home Video: ಮನೆಯಿಂದಲೇ ಮತದಾನ ಮಾಡಿ ಖುಷಿಪಟ್ಟ ಹಿರಿಯ ನಾಗರಿಕರು! ವಿಡಿಯೋ ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಮತದಾರರಿರುವ ಮನೆಯ ಸುತ್ತ 100 ಮೀಟರ್ ಒಳಗೆ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿತ್ತು. ಅಜ್ಜ, ಅಜ್ಜಿಯಂದಿರು ಕುಳಿತ ಸ್ಥಳದಿಂದಲೇ ವೋಟ್ ಮಾಡಿ ಖುಷಿಪಟ್ರು.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: 'ಎ ಗ್ರೇಡ್' ಆಫೀಸರ್​ಗಳಿಂದ ಹಿಡಿದು ಕಾನ್ ಸ್ಟೇಬಲ್, 'ಡಿ ಗ್ರೂಪ್' ನೌಕರರು.. ಹೀಗೆ ಮನೆ ಅಂಗಳದಲ್ಲಿ ಓಡಾಡುತ್ತಿರುವ ಅಧಿಕಾರಿಗಳು. ಕಾರಿನಲ್ಲಿ ಮನೆ ಬಾಗಿಲಿಗೆ ಬಂತು ಬ್ಯಾನರ್ , ಸೂಚನಾ ಫಲಕ, ಬ್ಯಾಲೆಟ್ ಬಾಕ್ಸ್! ಹೀಗೆ ಶುರುವಾಯ್ತು ನೋಡಿ ವಯಸ್ಕರ ಮತದಾನ. ಬೆನ್ನು ಬಾಗಿದ ವಯಸ್ಕರ ಮತದಾನ (Karnataka Elections 2023) ಸಮಸ್ಯೆ ಸಿಕ್ಕೇಬಿಡ್ತು ಪರಿಹಾರ! ಇದೇ ಮೊದಲ ಬಾರಿಗೆ ನಡೆದ ಮನೆಯಿಂದ ಮತದಾನ (Vote from Home) ಪ್ರಕ್ರಿಯೆ ಹೇಗಿತ್ತು ಅಂತ ನೀವೇ ನೋಡಿ.




ಹೌದು, ಈ ಬಾರಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತರಿಗಾಗಿ ಚುನಾವಣಾ ಆಯೋಗವು ಮನೆಯಲ್ಲಿಯೇ ಮತದಾನ ಪ್ರಕ್ರಿಯೆ ಆರಂಭಿಸಿದೆ. ಹೀಗಾಗಿ ಬೂತ್ ಮಟ್ಟದಿಂದಲೇ ಇಂತಹವರನ್ನು ಗುರುತಿಸಿ ವೋಟ್ ಹಾಕಿಸಿಕೊಳ್ಳಲು ಅಧಿಕಾರಿಗಳ ತಂಡ ರಚಿಸಿ ಮನೆ ಮನೆಗೆ ತೆರಳಿ ವೋಟಿಂಗ್ ಪ್ರಕ್ರಿಯೆ ಆರಂಭಿಸಿದೆ. ಮೇ 6 ರ ವರೆಗೆ ಮನೆಯಲ್ಲಿಯೇ ಮತದಾನ ಪ್ರಕ್ರಿಯೆ ನಡೆಯಲಿದೆ. ‌




ಬಿಗಿ ಭದ್ರತೆ
ವಿಶೇಷ ಅಂದ್ರೆ ಮನೆಯಲ್ಲೂ ಮತದಾನ ಕೇಂದ್ರದ ಮಾದರಿಯಲ್ಲಿಯೇ ಗೌಪ್ಯತೆ ಕಾಯ್ದುಕೊಳ್ಳಲಾಯ್ತು. ಮತದಾರರಿರುವ ಮನೆಯ ಸುತ್ತ 100 ಮೀಟರ್ ಒಳಗೆ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿತ್ತು. ಅಜ್ಜ, ಅಜ್ಜಿಯಂದಿರು ಕುಳಿತ ಸ್ಥಳದಿಂದಲೇ ವೋಟ್ ಮಾಡಿ ಖುಷಿಪಟ್ರು.




ಇದನ್ನೂ ಓದಿ: Positive Story: ಇವ್ರು ಮರ ಹತ್ತುವ ಮಹಿಳೆ, 50 ವರ್ಷ ಆದ್ರೂ ಯಾರಿಗೂ ಕಡಿಮೆ ಇಲ್ಲ!


ಅವರು ಮತದಾನ ಮಾಡಿದ ನಂತರ ಪೊಲೀಸ್ ಪ್ರೊಟೆಕ್ಷನ್​ನೊಂದಿಗೆ ಬ್ಯಾಲೆಟ್ ಬಾಕ್ಸ್​ನ್ನು ಸುರಕ್ಷಿತವಾಗಿ ವಾಹನಕ್ಕೆ ವರ್ಗಾಯಿಸಲಾಯ್ತು. ಸರ್ಕಾರದ ಎ ಗ್ರೇಡ್ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಈ ಮತದಾನವು ಮತದಾನ ಕೇಂದ್ರದಂತೆಯೇ ಎಲ್ಲ ಪ್ರಕ್ರಿಯೆಯೊಂದಿಗೆ ನಡೆಯಿತು.


ಎಷ್ಟು ಮತದಾರರು ಹೀಗೆ ವೋಟ್ ಹಾಕ್ತಿದ್ದಾರೆ?
ಇಡೀ ರಾಜ್ಯದಲ್ಲಿ  80 ವರ್ಷ ಮೇಲ್ಪಟ್ಟ ಒಟ್ಟು 60,000 ನಾಗರಿಕರು ಹಾಗೂ 15ರಿಂದ 20 ಸಾವಿರ ವಿಶೇಷಚೇತನರು ಮನೆಯಿಂದ ಮತ ಚಲಾಯಿಸುವ ಆಯ್ಕೆಯನ್ನು ಆರಿಸಿಕೊಂಡಿದ್ದಾರೆ.




ಅಶಕ್ತರಿಗೆ ವರದಾನ
ಉತ್ತರ ಕನ್ನಡ ಮುಂಡಗೋಡ ಪಟ್ಟಣದ ಹಳೂರ್ ಸೆಕ್ಟರ್-14 ರ 16 ಮಂದಿ ಹಾಗೂ ಇಂದಿರಾನಗರ, ಕೊಪ್ಪ, ಇಂದೂರು, ಹುನಗುಂದದ 6 ಜನ ಒಟ್ಟೂ 20 ಜನ ಇದರ ಲಾಭ ಪಡೆದಿದರು.  ಮುಂಡಗೋಡ ಪಟ್ಟಣ ಹಾಗೂ ಹಳ್ಳಿಗಳ 147 ಮಂದಿ ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ 5 ಗಂಟೆವರೆಗೆ ಮತದಾನ ನಡೆಯುತ್ತದೆ.




ಇದನ್ನೂ ಓದಿ: Inspiration: 300 ಕೆಜಿ ಭಾರ ಹೊತ್ತು ಸಾಗುತ್ತೆ ಈ ರೈತ ತಯಾರಿಸಿದ ಗಾಡಿ!

top videos


    ಒಟ್ಟಿನಲ್ಲಿ ಮತದಾನ ದಿನದ ಮತಗಟ್ಟೆಯಲ್ಲಿ ಸಾಮಾನ್ಯರ ನಡುವೆ ನಿಲ್ಲಲಾಗದೇ ಸಂಕಷ್ಟಪಡುವ ಅಶಕ್ತರಿಗೆ, ವಿಕಲಚೇತನರಿಗೆ ಚುನಾವಣಾ ಆಯೋಗದ ಈ‌ ನಿರ್ಧಾರವು ವರದಾನವಾಗಿದೆ.

    First published: