Model Voting Booths: ಬನ್ನಿ ಮತದಾರರೇ, ಆಕರ್ಷಿಸುತ್ತಿದೆ ಮತಗಟ್ಟೆಯ ಶೃಂಗಾರ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ 5 ರಂತೆ 30ಕ್ಕೂ ಅಧಿಕ ಮಾದರಿ ಮತಗಟ್ಟೆಗಳನ್ನು ಗುರುತಿಸಲಾಗಿದೆ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಶಾಲೆ ಗೋಡೆ ತುಂಬಾ ಬಣ್ಣ ಬಣ್ಣದ ಚಿತ್ತಾರ. ವಿವಿಧ ಕಲಾ ಪ್ರಕಾರ, ಸಾಂಸ್ಕೃತಿಕ ವೈಭವದ ಅಲಂಕಾರ. ಶಾಲಾ ವಾರ್ಷಿಕೋತ್ಸವಕ್ಕೋ, ಪ್ರತಿಭಾ ಕಾರಂಜಿಗೋ ಈ ಶೃಂಗಾರವಲ್ಲ. ಬದಲಿಗೆ, ಇದು ಇದೇ ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ (Karnataka Elections 2023) ಮಾಡಲಾದ ಡೆಕೋರೇಶನ್.. ನಿಜ, ಮತದಾರರನ್ನ ಮತಕೇಂದ್ರಗಳಿಗೆ (Model Voting Booths)  ಸೆಳೆಯಲು ಉತ್ತರ ಕನ್ನಡ ಜಿಲ್ಲಾ ಸ್ವೀಪ್ (Uttara Kannada News) ಸಮಿತಿಯ ವಿಭಿನ್ನ ಪ್ರಯತ್ನವಿದು.


ಸ್ವೀಪ್ ಪ್ರಯತ್ನ
ಯೆಸ್, ಯುವ ಮತದಾರರ ಜೊತೆಗೆ ಎಲ್ಲ ವಯೋಮಾನದ ಮತದಾರರನ್ನ ಮತಗಟ್ಟೆಗಳಿಗೆ ಆಕರ್ಷಿಸೋದು ಸ್ವೀಪ್ ತಂಡದ ತಂತ್ರಗಾರಿಕೆಯೂ ಹೌದು. ರಾಜಕೀಯ ಪಾರ್ಟಿಗಳು ಮತದಾರರನ್ನ ಒಲಿಸಲು ಪ್ರಯತ್ನ ಮಾಡಿದಂತೆ ಇತ್ತ ಚುನಾವಣಾ ಆಯೋಗವು ಅಂತಹದ್ದೇ ಪ್ರಯತ್ನ ಮಾಡಿದೆ.




ಕಲೆ, ಸಂಸ್ಕೃತಿಯ ಅನಾವರಣ
ಮತದಾರರನ್ನು ಮತಗಟ್ಟೆಯತ್ತ ಮುಖ ಮಾಡುವಂತೆ ಮಾಡಲು ವಿಭಿನ್ನ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ವಿವಿಧ ಕಲೆ, ಸಂಸ್ಕೃತಿಯನ್ನು ಮತಗಟ್ಟೆಗಳಲ್ಲಿ ಪೇಂಟಿಂಗ್ ಮಾಡಿಸುವ ಮೂಲಕ ಮತದಾರರನ್ನು ಮತಕೇಂದ್ರಕ್ಕೆ ಸೆಳೆಯುವ ಪ್ರಯತ್ನದಲ್ಲಿ ತೊಡಗಿದೆ.


ಇದನ್ನೂ ಓದಿ: Positive Story: ಅಮೇರಿಕಾದ ಸಂಸ್ಥೆಯಿಂದ ಸಿದ್ಧಿ ಹುಡುಗಿಗೆ ಸ್ಕಾಲರ್‌ಶಿಪ್‌, ಇದು ಕಣ್ರೀ ಸಾಧನೆ ಅಂದ್ರೆ!




30 ಮತಗಟ್ಟೆಯಲ್ಲಿ ಮ್ಯಾಜಿಕ್!
ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ 5 ರಂತೆ 30ಕ್ಕೂ ಅಧಿಕ ಮಾದರಿ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಮತಗಟ್ಟೆಗಳಲ್ಲಿ ಕಲೆ, ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನ ಚಿತ್ರಿಸಲಾಗಿದೆ. ಮತಗಟ್ಟೆಗಳ ಗೋಡೆಗಳ ಮೇಲೆ ಸ್ಥಳೀಯ ಆಚರಿಸುವ ಸಂಪ್ರದಾಯ, ಆಚರಣೆ, ಕಲೆಗಳ ಕುರಿತು ಚಿತ್ರಗಳನ್ನ ಮೂಡಿಸಲಾಗಿದೆ. ಕಾವಿ ಕಲೆ, ಹಸೆ ಚಿತ್ತಾರಗಳನ್ನ ಬಿಡಿಸಲಾಗಿದ್ದು, ಇವು ಸಾರ್ವಜನಿಕರನ್ನ ಆಕರ್ಷಿಸುತ್ತಿದೆ.


ಇದನ್ನೂ ಓದಿ: Ankola Bandi Habba: 20 ಅಡಿ ಎತ್ತರದಲ್ಲಿ ದೈವಕ್ಕೆ ಪೂಜೆ, ಸ್ವಲ್ಪವೂ ಭಯವಿಲ್ಲದೇ ಪೂಜಿಸುವ ಪಾತ್ರಿ!


ಬನ್ನಿ ಮತಗಟ್ಟೆಗೆ!
ಮೇ 10 ರಂದು “ ಮತದಾರರ ನಡಿಗೆ ಮತಗಟ್ಟೆಯ ಕಡೆಗೆ” ಎಂಬ ಅಭಿಯಾನ ನಡೆಸಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಎಲ್ಲ ಮತದಾರರು ಬಂದು ತಮ್ಮ ತಮ್ಮ ಮತಗಟ್ಟೆಗಳನ್ನು ನೋಡಬಹುದಾಗಿದೆ. ಒಟ್ಟಿನಲ್ಲಿ ಮತದಾರರನ್ನು ಮತಗಟ್ಟೆಗಳಿಗೆ ಬರುವಂತೆ ಮಾಡಲು ಉತ್ತರ ಕನ್ನಡದ ಹಲವು ಮತದಾನ ಕೇಂದ್ರಗಳು ಮದುವಣಗಿತ್ತಿಯಂತೆ ಸಿಂಗರಿಸಿ ಮತದಾರರ ಬರುವಿಕೆಗಾಗಿ ಕಾಯುತ್ತಿದೆ.

First published: