ಕಾರವಾರ: ಕಾಂತಾರದ (Kantara Movie) ಪಂಜುರ್ಲಿ, ಬೃಹತ್ ವರಾಹ, ತೋಳ, ಸಿಂಹ, ಕಡವೆ, ಹೀಗೆ ಹತ್ತಾರು ಕಾಡು ಪ್ರಾಣಿಗಳ ಸ್ತಬ್ಧಚಿತ್ರ, ಜೊತೆಗೆ ಗಮನಸೆಳೆದ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್! ನೋಡೋಕೆ ಒಂದೇ ಎರಡೇ! ಒಂದಕ್ಕಿಂತ ಒಂದು ಸಖತ್ತಾಗಿರೋ ಸ್ತಬ್ದಚಿತ್ರಗಳು. ಉತ್ತರ ಕನ್ನಡದ (Uttara Kannada) ಗ್ರಾಮೀಣ ಸೊಗಡಿನ ದಿಂಡಿ ಹಬ್ಬ ಎಂತಲೇ ಪ್ರಸಿದ್ಧಿ ಪಡೆದ ಜಾತ್ರೆಯಲ್ಲಿ ಸಂಭ್ರಮ ಕಳೆಗಟ್ಟಿತ್ತು.
ಉತ್ತರ ಕನ್ನಡ ಜಿಲ್ಲೆಯ ಅಮದಳ್ಳಿಯಲ್ಲೇ ವಿಶಿಷ್ಟ ಸಂಪ್ರದಾಯದ ಜಾತ್ರೆ ನಡೆಯಿತು. ಈ ದಿಂಡಿ ಜಾತ್ರೆಯಲ್ಲಿ ವಿವಿಧ ಸ್ತಬ್ಧಚಿತ್ರಗಳೇ ಕೇಂದ್ರಬಿಂದುವಾಗಿದ್ದವು.
ಇದನ್ನೂ ಓದಿ: Positive Story: ಬ್ರಿಟೀಷರ ವಿರುದ್ಧ ಹೋರಾಡಿ ದೇವರಾದ ಹಿಂದೂ-ಮುಸ್ಲಿಂ ಗೆಳೆಯರು, ಅಕ್ಕಪಕ್ಕದಲ್ಲೇ ಇದೆ ದೇವಸ್ಥಾನ
ಹಾಲಕ್ಕಿ ಗೌಡ ಸಮುದಾಯದವರಿಂದಲೇ ನಡೆಯುವ ಜಾತ್ರೆಯಲ್ಲಿಇಂದಿನ ಟ್ರೆಂಡ್ಗೆ ಅನುಗುಣವಾಗಿ ಅಣಕು ಪ್ರದರ್ಶನ ಗಮನ ಸೆಳೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ