• Home
  • »
  • News
  • »
  • uttara-kannada
  • »
  • Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ

Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾಧನೆ

ಜಟ್ಟಿಗೇಶ್ವರನ ವಿಡಿಯೋ ನೋಡಿ

"ಜಟ್ಟಿಗೇಶ್ವರನ ವಿಡಿಯೋ ನೋಡಿ"

ಈ ದೈವ ಒಲಿಯೋಕೆ ತೆಂಗಿನಕಾಯಿ ಸೇವೆಯಷ್ಟೇ ಸಾಕು! ನೀವೂ ಈ ದೈವಕ್ಕೆಒಮ್ಮೆ ಕೈಮುಗಿದು ನಮಿಸಿ! ಜಟಿಗನೆಂಬ ಕ್ಷೇತ್ರಪಾಲನನ್ನು ಕಣ್ತುಂಬಿಕೊಳ್ಳಿ.

  • News18 Kannada
  • Last Updated :
  • Uttara Kannada, India
  • Share this:

    ಕಾರವಾರ: ಗಿಡಮರದ ಅಡಿ ನೀಳವಾದ ಕಲ್ಲು. ಅದರ ಮೇಲೆ ಸಿಂಗಾರದ ಹೂವು, ದಾಸವಾಳ, ಕುಂಕುಮ ಅರಿಶಿನ. ಬೆಟ್ಟದ ಬುಡದಲ್ಲೂ ನದಿಯ ದಡದಲ್ಲೂ ಅದೇ ಕಲ್ಲು. ಸಮುದ್ರ ತೀರಕ್ಕೆ ಹೋದ್ರೂ ಅದೇ ಕಲ್ಲು. ಎಲ್ಲೆಡೆ ಇದೇ ರೀತಿಯ ಲಂಬಾಕೃತಿಯ ಲಿಂಗರೂಪದ ಕಲ್ಲು! ಅರೇ ಏನಿದು ಅಂತ ಹುಡುಕ್ತಾ ಹೋದ್ರೆ ನೀವು ದೈವಲೋಕ ಪ್ರವೇಶಿಸ್ತಿರಿ! ಇವನೇ ನಮ್ಮ ಕಾಯುವ ದೇವರು ಜಟಿಗೇಶ್ವರ, (Jattigeshwara) ಜಟಿಗ, ಜಟ್ಗಪ್ಪ ಅಂತಾರೆ ಉತ್ತರ ಕನ್ನಡದ (Uttara Kannada) ಮಂದಿ, ಕಾಂತಾರದಲ್ಲಿ ಗುಳಿಗ ಎಂಬ  (Guliga Daiva) ಕ್ಷೇತ್ರಪಾಲನ ದರ್ಶನ ನೀಡಿದ್ರೆ ಉತ್ತರ ಕರಾವಳಿಯ ಬಹುಆರಾಧ್ಯ ಕ್ಷೇತ್ರಪಾಲ ದೇವತೆ ಈ ಜಟಿಗ!


    ಜಟಿಗನ ಮುಂದೆ ಅನ್ಯಾಯ ನಡೆಯೋದಿಲ್ಲ. ಅಧರ್ಮ ನಡೆಯೋದಿಲ್ಲ. ಯಾರಾದರೂ ತಪ್ಪು ದಾರಿ ಹಿಡಿದರೆ ಈ ಕ್ಷೇತ್ರಪಾಲ ದೈವ ಶಿಕ್ಷೆ ಕೊಡುವುದು ಖಂಡಿತವಂತೆ. ಹಾಗಾದರೆ ಈ ಜಟ್ಗಪ್ಪನ ಹಿನ್ನೆಲೆ ಏನು ಅಂತೀರಾ?


    ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವರು!


    ದಕ್ಷಯಜ್ಞದಲ್ಲಿ ವೀರಭದ್ರನಿಗೆ ಬೆಂಗಾವಲಾಗಿದ್ದ ಗಣದೇವತೆಯೇ ಈ ಜಟಿಗ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಅಂಕೋಲಾ, ಭಟ್ಕಳ, ಕುಮಟಾ, ಹೊನ್ನಾವರದಲ್ಲಿ ಜಟಿಗನ ಆರಾಧನೆ ತುಂಬಾ ಇದೆ.


    ಇದನ್ನೂ ಓದಿ: Uttara Kannada: 70 ವರ್ಷದ ಈ ತಾತ ಈಗ ಡಿಪ್ಲೋಮಾ ಸ್ಟೂಡೆಂಟ್!


    ಇತ್ತೀಚಿಗೆ ಕಲ್ಲಿನ ಜಟಿಗನಿಗೆ ಮೂರ್ತಿ ರೂಪ ಕೊಟ್ಟು ಕುದುರೆಯ ಮೇಲೆ ಖಡ್ಗ ಸಹಿತ ನಾಗಯಕ್ಷಿ ಪರಿವಾರ ಸಮೇತ ಮೂರ್ತಿಗಳನ್ನು ನಿರ್ಮಿಸಲಾಗ್ತಿದೆ. ಇನ್ನೊಂದು ಆಶ್ಚರ್ಯವೆಂದ್ರೆ ಈ ದೈವ ಒಲಿಯೋಕೆ ತೆಂಗಿನಕಾಯಿ ಸೇವೆಯಷ್ಟೇ ಸಾಕು! ನೀವೂ ಈ ದೈವಕ್ಕೆಒಮ್ಮೆ ಕೈಮುಗಿದು ನಮಿಸಿ! ಜಟಿಗನೆಂಬ ಕ್ಷೇತ್ರಪಾಲನನ್ನು ಕಣ್ತುಂಬಿಕೊಳ್ಳಿ.


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: