• Home
 • »
 • News
 • »
 • uttara-kannada
 • »
 • Kanaka Jayanthi: ಕನಕದಾಸರು ಹುಟ್ಟಿ ಬೆಳೆದ ನೆಲ ಈಗ ಹೀಗಿದೆ ನೋಡಿ!

Kanaka Jayanthi: ಕನಕದಾಸರು ಹುಟ್ಟಿ ಬೆಳೆದ ನೆಲ ಈಗ ಹೀಗಿದೆ ನೋಡಿ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

15ನೇ ಶತಮಾನದಲ್ಲಿ ಹುಟ್ಟಿದ ಕನಕದಾಸರ ನಾಡಿನ ಉದ್ದಗಲಕ್ಕೂ ಸಂಚರಿಸಿದರೂ ಅವರನ್ನ ಅರಿಯೋಕೆ ಬಾಡ ಹೆಚ್ಚು ಪರಿಣಾಮಕಾರಿ. ಯಾಕಂದ್ರೆ ಇದು ಕನಕದಾಸರು ನಡೆದಾಡಿದ ನೆಲ, ಹುಟ್ಟಿ ಬೆಳೆದು ಆಟವಾಡಿದ ಭೂಮಿ.

 • News18 Kannada
 • Last Updated :
 • Haveri, India
 • Share this:

  ಕಣ್ಮನ ಸೆಳೆಯೋ ಈ ಕಟ್ಟಡ ಕನಕದಾಸರ ಅರಮನೆ.. ದಾಸಶ್ರೇಷ್ಠರ ಜೀವನ ಚರಿತ್ರೆಗೆ ಸಾಕ್ಷಿಯಂತಿದೆ ಇಲ್ಲಿನ ಬಿಡಾರ. ಬದುಕಿನುದ್ದಕ್ಕೂ ಆಡಳಿತಗಾರನಾಗಿ, ದಾಸನಾಗಿ ಕರುನಾಡ ಆಳಿದ ಕನಕದಾಸರದ್ದು ಶ್ರೇಷ್ಠ ಜೀವನ. ಈ ವಠಾರದ ಎಲ್ಲೆಡೆ ಕನಕದಾಸರ ಹೆಜ್ಜೆ ಗುರುತು ಮೆಲುಕು ಇತಿಹಾಸದತ್ತ ಕರೆದೊಯ್ಯುತ್ತೆ.  ಹಾವೇರಿ ಜಿಲ್ಲೆಯ ಶಿಗ್ಗಾಂವ್ (Haveri Shiggaon) ತಾಲೂಕಿನ ಬಾಡ ಕನಕದಾಸರ ಇಡೀ ಜೀವನ ಚರಿತ್ರೆಯ (Kanakadasa Birth Place) ಮೊದಲ ಪುಟ. ಇದುವೇ ಕನಕದಾಸರ ಜನ್ಮಸ್ಥಾನ.


  ಜೊತೆಗೆ ಬಾಡದಿಂದ 1.5 ಕಿಮೀ ಅಂತರದಲ್ಲಿ ನವೀಕೃತಗೊಂಡ ಕನಕದಾಸರ ಕೋಟೆಯಲ್ಲಿ ದಕ್ಷಿಣ ಭಾರತದ ಮೊದಲ ಹಾಲೋಗ್ರಾಮ್ ಥಿಯೇಟರ್ ನಿರ್ಮಿಸಲಾಗಿದೆ. ಅದರಲ್ಲಿ ಕನಕದಾಸರ ಜೀವನಚರಿತ್ರೆಯನ್ನ ಪ್ರದರ್ಶನ ಮಾಡಲಾಗ್ತಿದೆ. ಹಾಗೆ ಫೋಟೋ ಮ್ಯೂಸಿಯಂ, ಗ್ರಂಥಾಲಯ, ಕನಕನಾಯಕನ ಪುತ್ಥಳಿ, ಕನಕದಾಸರ ಪುತ್ಥಳಿ ನೋಡುಗರಿಗೆ ಮುದ ನೀಡ್ತಿದೆ.


  ಕನಕ ಧ್ಯಾನ ಮಂದಿರ
  ಅಲ್ಲಿಂದ ಕೆಲವೇ ನಿಮಿಷಗಳ ದಾರಿಯಲ್ಲಿ ನಿಮಗೆ ಕನಕ ಧ್ಯಾನ ಮಂದಿರ ಸಿಗುತ್ತದೆ. ಕನಕದಾಸರು ಇಲ್ಲೇ ಹುಟ್ಟಿದರು ಎಂಬ ಪ್ರತೀತಿಯಿದೆ. ಅದರ ಹಿಂದೆಯೇ ಕನಕದಾಸರ ಆರಾಧ್ಯ ದೈವವಾಗಿದ್ದ ಕಾಗಿನೆಲೆ ಆದಿಕೇಶವನ ಮೂಲ ಸ್ಥಾನವಾದ ರಂಗನಾಥ ಸ್ವಾಮಿ ದೇವಸ್ಥಾನವಿದೆ. ನೀವಿಲ್ಲಿ ಹಲವು ಶಿಲಾ ಪಳಯುಳಿಕೆಗಳನ್ನು ಕಣ್ತುಂಬಿಸಿಕೊಳ್ಳಬಹುದು.


  ಇದನ್ನೂ ಓದಿ: Khapri God: ಮದ್ಯ, ಸಿಗರೇಟು ಇವೇ ಖಾಫ್ರಿ ದೇವರ ನೈವೇದ್ಯ! ಜೋಯ್ಡಾದಲ್ಲಿ ಜಾತ್ರೆ


  15ನೇ ಶತಮಾನದಲ್ಲಿ ಹುಟ್ಟಿದ ಕನಕದಾಸರ ನಾಡಿನ ಉದ್ದಗಲಕ್ಕೂ ಸಂಚರಿಸಿದರೂ ಅವರನ್ನ ಅರಿಯೋಕೆ ಬಾಡ ಹೆಚ್ಚು ಪರಿಣಾಮಕಾರಿ. ಯಾಕಂದ್ರೆ ಇದು ಕನಕದಾಸರು ನಡೆದಾಡಿದ ನೆಲ, ಹುಟ್ಟಿ ಬೆಳೆದು ಆಟವಾಡಿದ ಭೂಮಿ.


  ಇದನ್ನೂ ಓದಿ: Hanuman Tree: ಮರದಲ್ಲಿ ಮೂಡಿದ ಮಾರುತಿ! ಉತ್ತರ ಕನ್ನಡದ ವಿಡಿಯೋ ವೈರಲ್


  ನೀವೂ ಹೀಗೆ ಬನ್ನಿ
  ನೀವೂ ಬಾಡ ಕೋಟೆಗೆ ಬರಬೇಕೆಂದ್ರೆ ಬೆಂಗಳೂರಿಂದ ಶಿಗ್ಗಾಂವ್​ಗೆ ಬಂದು ಬಾಡಕ್ಕೆ ಬರಬಹುದು. ಶಿಗ್ಗಾಂವ್​ನಿಂದ ಬಸ್ ವ್ಯವಸ್ಥೆಯೂ ಚೆನ್ನಾಗಿದೆ. ಬಾಡ ಆರಾಮಾಗಿ ಕುಟುಂಬ ಸಮೇತ ಬಂದು ಕಾಲ ಕಳೆಯಬಲ್ಲ ಉತ್ತಮ ತಾಣ. ಜೊತೆಗೆ ಕನಕ-ಕೇಶವರ ಬಾಂಧವ್ಯವನ್ನು ಕಣ್ತುಂಬಿಕೊಳ್ಳಬಹುದಾದ ಪುಣ್ಯಕ್ಷೇತ್ರ. ನೀವೂ ಒಮ್ಮೆ ಈ ಕ್ಷೇತ್ರದ ದರ್ಶನ ಮಾಡಿಬಿಡಿ.


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: