ಜೋಕಾಲಿ, ಸೋಫಾ ಸೆಟ್, ಕುರ್ಚಿ, ಊಟದ ಟೇಬಲ್, ತೊಟ್ಟಿಲು, ಸನ್ ಬೆಡ್.. ಐಷಾರಾಮಿ ಲುಕ್ ನೀಡೋ ಈ ಆಸನಗಳಿಂದ ಮನೆಗೂ ಚೆಂದದ ನೋಟ.. ಯಾವುದೇ ಮಷಿನ್ ಬಳಸದೇ ಮಾಡಿದ ಸಾಂಪ್ರದಾಯಿಕ ಪೀಠೋಪಕರಣಗಳ ವಿಶೇಷ ಏನಂದ್ರಾ? ನಾವ್ ಹೇಳ್ತೀವಿ ಕೇಳಿ. ಬೆತ್ತದ ಪೀಠೋಪಕರಣಗಳನ್ನ ಇಂದಿಗೂ ಉಳಿಸಿಕೊಂಡು ಬಂದಿರೋ ಇವರು ಉತ್ತರ ಕನ್ನಡ ಜಿಲ್ಲೆಯ (Uttara Kannada News) ಅಂಕೋಲಾ ತಾಲೂಕಿನ ಸಕಲಬೇಣ ಗ್ರಾಮದ ಸಂದೀಪ್ ನಾಯ್ಕ. ಇವ್ರ ಬೆತ್ತದ (Cane) ಪೀಠೋಪಕರಣಗಳಿಗೆ ಬೇರೆ ರಾಜ್ಯಗಳಲ್ಲೂ ಬಹುಬೇಡಿಕೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯೋ ಕಂಬಳದ ಬಾರುಕೋಲನ್ನು ಸಹ ಇಲ್ಲಿಯೇ ತಯಾರಿಸಲಾಗುತ್ತೆ. ತೆಳ್ಳಗಿನ ಬೆತ್ತಕ್ಕೆ ಸರಿಯಾದ ಹದವನ್ನು ನೀಡಿ ಸುತ್ತಲೂ ಬಾಗುವ ಹಾಗೆ ಮಾಡಿ ಕಂಬಳಕ್ಕೆ ಬೇಕಾದ ರೀತಿಯಲ್ಲಿ ಸಿದ್ಧಪಡಿಸಲಾಗುತ್ತೆ.
ಮನೆಗೆ ಸಖತ್ ಲುಕ್ ನೀಡುತ್ತೆ ಬೆತ್ತ!
ಮರದ ಪೀಠೋಪಕರಣಗಳಿಗಿಂತ ಕಡಿಮೆ ತೂಕ ಹೊಂದಿರೋ ಈ ಬೆತ್ತದ ಪೀಠೋಪಕರಣಗಳು ಮನಗೆ ಸಖತ್ ಲುಕ್ ನೀಡುತ್ತೆ.
ಬೆತ್ತ ಇವ್ರಿಗೆ ಸಿಗೋದಾದ್ರೂ ಎಲ್ಲಿ?
ಉತ್ತರ ಕನ್ನಡ ಜಿಲ್ಲೆಯ ಕದ್ರಾ, ಹಟ್ಟಿಕೇರಿ, ಸುಂಕಸಾಳ, ರಾಮನಗುಳಿ, ಜೊಯಿಡಾ ಅರಣ್ಯ ಪ್ರದೇಶಗಳಲ್ಲಿ ಬೆತ್ತ ಯಥೇಚ್ಛವಾಗಿ ಬೆಳೆಯುತ್ತೆ. ಹಂದಿ ಬೆತ್ತ, ಹಾಲು ಬೆತ್ತ, ನಾಗಬೆತ್ತ ಎಂದೆಲ್ಲ ಕರೆಯಿಸಿಕೊಳ್ಳುವ ಈ ಹುಲ್ಲಿನ ತಳಿಗಳನ್ನ ಅರಣ್ಯ ಇಲಾಖೆಯ ವಾರ್ಷಿಕ ಕಟಾವಿನ ನಂತರ ಹರಾಜಿನಲ್ಲಿ ಖರೀದಿಸಬಹುದು.
ಇದನ್ನೂ ಓದಿ: Special Jaggery: ಆಲೆಮನೆಯೆಂಬ ಮಲೆನಾಡಿನ ಸವಿಮನೆ! ನೀವೂ ರುಚಿ ಸವಿದುನೋಡಿ
ಸಂದೀಪ್ ನಾಯ್ಕ ತಯಾರಿಸುವ ಈ ಬೆತ್ತದ ಪೀಠೋಪಕರಣಗಳಿಗೆ ಮುಂಬೈ, ಪುಣೆ, ಗೋವಾ, ಮಹಾರಾಷ್ಟ್ರಗಳಲ್ಲಿ ಬಹು ಬೇಡಿಕೆಯಿದೆ. ಅಲ್ಲಿಂದ ವಿದೇಶಗಳಿಗೂ ರಫ್ತಾಗುತ್ತಂತೆ. ನಾಟಕ ಕಲಾವಿದನಾಗಿರೋ ಸಂದೀಪ್, ಕಳೆದ 15 ವರ್ಷಗಳಿಂದ ಪ್ರಾರಂಭಿಸಿದ ಈ ಕಲೆ ಇಂದು ಇವರ ಬದುಕಿಗೆ ಆಸರೆಯಾಗಿದೆ.
ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ
ಹೀಗಾಗಿ ದಕ್ಷಿಣ ಕನ್ನಡದಲ್ಲಿ ನಡೆಯುವ ಕಂಬಳಗಳಿಗೆ ಪ್ರತಿವರ್ಷ ಸಾವಿರಾರು ಬಾರುಕೋಲನ್ನು ಇಲ್ಲಿಂದ ಕಳುಹಿಸಲಾಗುತ್ತೆ. ಹೀಗೆ ಪೀಠೋಪಕರಣ ಮಾತ್ರವಲ್ಲದೇ ಬಾರುಕೋಲು ತಯಾರಿಕೆಗೂ ಸಂದೀಪ್ ನಾಯ್ಕ ಫೇಮಸ್ ಆಗಿದ್ದಾರೆ.
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ